ಕಳೆದ ಕೆಲವು ದಿನಗಳ ಹಿಂದೆ ಹತ್ಯೆಯಾಗಿದ್ದ ಇರಾನ್ನ ಪ್ರಮುಖ ಪರಮಾಣು ವಿಜ್ಞಾನಿ ಮೊಹ್ಸೆನ್ ಫಕ್ರಿಜಾಡೆರನ್ನು ಸ್ಯಾಟಲೈಟ್ ನಿಯಂತ್ರಿತ ಮೆಷಿನ ಗನ್ ಮುಖಾಂತರ ಕೊಲೆ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ಮೊಹ್ಸೆನ್ ಫಕ್ರಿಜಾಡೆ ಇರಾನ್ ರಾಜಧಾನಿ ತೆಹ್ರಾನ್ ಬಳಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಸ್ಯಾಟಲೈಟ್ ನಿಯಂತ್ರಿತ ಮೆಷಿನ ಗನ್ ಬಳಸಿ ಇವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು.
ಅಂದ ಹಾಗೆ, ದಾಳಿಯಲ್ಲಿ ಬಳಕೆಯಾಗಿದ್ದ ಗನ್ನಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಥವಾ ಆರ್ಟಿಫೀಷಿಯಲ್ ಇಂಟಲಿಜೆನ್ಸ್ ಬಳಕೆಯಾಗಿತ್ತು. ಈ ಮೆಷಿನ್ ಗನ್ ನೇರವಾಗಿ ಸ್ಯಾಟಲೈಟ್ನಿಂದ ನಿಯಂತ್ರಣಕ್ಕೆ ಒಳಪಟ್ಟಿತ್ತು. ಗನ್ನಿಂದ ಬರೋಬ್ಬರಿ 13 ಗುಂಡು ಹಾರಿದ್ದು ದಾಳಿಯಲ್ಲಿ ಮೊಹ್ಸೆನ್ ತೀವ್ರವಾಗಿ ಗಾಯಗೊಂಡಿದ್ದರು. ಈ ಗನ್ನಿಂದ ಇರಿಸಲಾದ ಗುರಿ ಎಷ್ಟು ಕರಾರುವಕ್ಕಾಗಿತ್ತೆಂದರೆ, ಮೊಹ್ಸೆನ್ ಪಕ್ಕದಲ್ಲೇ ಕೂತಿದ್ದ ಅವರ ಹೆಂಡತಿಗೆ ಒಂದೇ ಒಂದು ಬುಲೆಟ್ ಕೂಡ ತಗುಲಿರಲಿಲ್ಲ. ಹೀಗಾಗಿ, ಅವರು ಪ್ರಾಣಾಪಾಯದಿಂದ ಪಾರಾಗಿದ್ದರು.
ಈ ನಡುವೆ, ಮೊಹ್ಸೆನ್ ಹತ್ಯೆ ಹಿಂದೆ ಇಸ್ರೇಲ್ ಕೈವಾಡವಿದೆ ಎಂದು ಇರಾನ್ ಅಧ್ಯಕ್ಷ ಹಸನ್ ರೋಹಾನಿ ಆರೋಪಿಸಿದ್ದಾರೆ. 2000 ಇಸವಿಯಲ್ಲಿ ಮೊಹ್ಸೆನ್ ಸೇನಾ ಪರಮಾಣು ಕಾರ್ಯಕ್ರಮದ ರೂವಾರಿಯಾಗಿದ್ದರು ಎಂಬುದು ಇಸ್ರೇಲ್ ಆರೋಪವಾಗಿತ್ತು. ಇದೇ ಕಾರಣಕ್ಕೆ ಇಸ್ರೇಲ್ಅವರನ್ನು ಹತ್ಯೆ ಮಾಡಿದೆ ಎಂಬ ಮಾತು ಕೇಳಿಬಂದಿದೆ.
ವಿಮಾನ ಆಯ್ತು, ಈಗ ತನ್ನದೇ ಹಡಗು ಸ್ಫೋಟಿಸಿದ ಇರಾನ್: 19 ಯೋಧರ ದುರ್ಮರಣ!