9/11 ಲಾಡೆನ್​ ದಾಳಿಗೆ ತುತ್ತಾಗಿದ್ದ ಸ್ಥಳದಲ್ಲಿ ತಲೆ ಎತ್ತಿತು ವಿಶ್ವದ ಅತಿ ಐಷಾರಾಮಿ ರೈಲ್ವೆ ನಿಲ್ದಾಣ!

ಈ ರೈಲ್ವೆ ನಿಲ್ದಾಣ ಅಮೆರಿಕದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಹೀಗಾಗಿ, 24 ಗಂಟೆ ಈ ರೈಲ್ವೆ ನಿಲ್ದಾಣದಲ್ಲಿ ಜನಸಂದಣಿ ಇರುತ್ತದೆ. ಇದು ವಿಶ್ವದ ದುಬಾರಿ ರೈಲ್ವೆ ನಿಲ್ದಾಣ ಎನ್ನುವ ಖ್ಯಾತಿಗೂ ಪಾತ್ರವಾಗಿದೆ.

9/11 ಲಾಡೆನ್​ ದಾಳಿಗೆ ತುತ್ತಾಗಿದ್ದ ಸ್ಥಳದಲ್ಲಿ ತಲೆ ಎತ್ತಿತು ವಿಶ್ವದ ಅತಿ ಐಷಾರಾಮಿ ರೈಲ್ವೆ ನಿಲ್ದಾಣ!
ನ್ಯೂಯಾರ್ಕ್​ ರೈಲ್ವೆ ನಿಲ್ದಾಣ
Follow us
Skanda
| Updated By: ಸಾಧು ಶ್ರೀನಾಥ್​

Updated on: Dec 07, 2020 | 5:08 PM

ರೈಲ್ವೆ ನಿಲ್ದಾಣ ಎಂದಾಕ್ಷಣ ಸಾಲು ಸಾಲು ರೈಲ್ವೆ ಹಳಿಗಳು, ಅದರ ಮೇಲೆ ಓಡಾಡುವ ಹೆಗ್ಗಣ, ಹಳಿಗಳ ಮೇಲೆ ಬಿದ್ದ ರಾಶಿ ರಾಶಿ ಕಸ ನೆನಪಾಗುತ್ತೆ.  ಎಲ್ಲಕ್ಕಿಂತ ಹೆಚ್ಚಾಗಿ ಗಬ್ಬುನಾರುವ ವಾತಾವರಣ. ಕೂಗಾಟ-ತಳ್ಳಾಟ. ಇಎವಲ್ಲ ಸರ್ವೆ ಸಾಮಾನ್ಯ ಎಂಬಷ್ಟು ಜನಜೀವನ ಅದಕ್ಕೆ ಒಗ್ಗಿಕೊಂಡಿದೆ. ಆದರೆ, ಇಲ್ಲೊಂದು ವಿಶ್ವದ ದುಬಾರಿ ಹಾಗೂ ಅತಿ ಐಷಾರಾಮಿ ರೈಲ್ವೆ ನಿಲ್ದಾಣ ನಿಮ್ಮ ಕಲ್ಪನೆಗಳಿಗೆ ತದ್ವಿರುದ್ಧವಾಗಿದೆ!

ಹೌದು, ಅಮೆರಿಕದ ನ್ಯೂಯಾರ್ಕ್​ನಲ್ಲಿ ಬರೋಬ್ಬರಿ 29,559 ಕೋಟಿ ರೂಪಾಯಿ ವೆಚ್ಚದಲ್ಲಿ ರೈಲ್ವೆ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಇದು ವಿಶ್ವದಲ್ಲೇ ಅತಿ ದುಬಾರಿ ರೈಲ್ವೆ ನಿಲ್ದಾಣ ಎನ್ನುವ ಖ್ಯಾತಿಗೆ ಭಾಜನವಾಗಿದೆ.

2001ರಲ್ಲಿ ಅಮೆರಿಕದ ಅವಳಿ ಕಟ್ಟಡದ ಮೇಲೆ ಉಗ್ರರು ದಾಳಿ ನಡೆಸಿದ್ದರು. ವಿಮಾನ ಹೈಜಾಕ್​ ಮಾಡಿ ವರ್ಡ್​ ಟ್ರೇಡ್​ ಸೆಂಟರ್​ ನಾಶ ಮಾಡಿದ್ದರು. ಈ ಕಟ್ಟಡದ ಪಕ್ಕದಲ್ಲೇ ಇದ್ದ ನ್ಯೂಯಾರ್ಕ್​ ವಿಮಾನ ನಿಲ್ದಾಣ ಧೂಳಿನಿಂದ ತುಂಬಿ ಹೋಗಿತ್ತು. ಹೀಗಾಗಿ, 2004ರಲ್ಲಿ ಹೊಸ ರೈಲ್ವೆ ನಿಲ್ದಾಣ ಮಾಡಲು ಅಲ್ಲಿನ ಸರ್ಕಾರ ನಿರ್ಧರಿಸಿತ್ತು. ಅಂತೆಯೇ 2004ರಲ್ಲಿ ಯೋಜನೆ ಆರಂಭಗೊಂಡಿತ್ತು. ಅವಳಿ ಕಟ್ಟಡ ಇದ್ದ ಜಾಗದಲ್ಲೇ ಈಗ ರೈಲ್ವೆ ನಿಲ್ದಾಣ ಕಟ್ಟಲಾಗಿದೆ.

12 ವರ್ಷ ಕಾಮಗಾರಿ: 2004ರಲ್ಲಿ ಈ ಯೋಜನೆ ಆರಂಭಗೊಂಡಿತ್ತು. 2009ರಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸುವ ಆಲೋಚನೆ ಇವರದ್ದಾಗಿತ್ತು. ಆದರೆ, ಈ ಯೋಜನೆ ಹೆಚ್ಚು ಸಮಯ ತೆಗೆದುಕೊಳ್ಳಲು ಆರಂಭಿಸಿತ್ತು. ಅಂದುಕೊಂಡಿದ್ದಕ್ಕಿಂತಲೂ 7 ವರ್ಷ ತಡವಾಗಿ ಯೋಜನೆ ಪೂರ್ಣಗೊಂಡಿತ್ತು. ಯೋಜನೆಗಿಂತ ಎರಡು ಪಟ್ಟು ಹಣ ವೆಚ್ಚವಾಗಿತ್ತು.

ಏನಿಲ್ಲ ಎಂದು ಕೇಳಿ?: ಈ ರೈಲ್ವೆ ನಿಲ್ದಾಣ ಸಾಮಾನ್ಯ ರೈಲ್ವೆ ನಿಲ್ದಾಣದಂತಲ್ಲ. ಈ ರೈಲ್ವೆ ನಿಲ್ದಾಣಕ್ಕೆ ತೆರಳೋದು ಒಂದೇ, ಮಾಲ್​​ಗೆ ತೆರಳೋದು ಒಂದೇ. ಏಕೆಂದರೆ, ಈ ರೈಲ್ವೆ ನಿಲ್ದಾಣದಲ್ಲಿ ಶಾಪಿಂಗ್​ ಮಾಲ್​ ಇದೆ, ರೆಸ್ಟೋರೆಂಟ್​ಗಳಿವೆ. ಹೀಗಾಗಿ, ರೈಲಿಗೆ ಕಾಯೋ ಅವಧಿಯಲ್ಲಿ ನೀವು ಶಾಪಿಂಗ್​ ಮಾಡಬಹುದು. ಇನ್ನು, ಇಡೀ ನಿಲ್ದಾಣಕ್ಕೆ ಎಸಿ ವ್ಯವಸ್ಥೆ ಕೂಡ ಇದೆ.

ಪ್ರಮುಖ ನಗರಗಳಿಗೆ ಸಂಪರ್ಕ: ಈ ರೈಲ್ವೆ ನಿಲ್ದಾಣ ಅಮೆರಿಕದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಹೀಗಾಗಿ, 24 ಗಂಟೆ ಈ ರೈಲ್ವೆ ನಿಲ್ದಾಣದಲ್ಲಿ ಜನಸಂದಣಿ ಇರುತ್ತದೆ.

Photos: ಮಾಲ್ಗುಡಿ ರೈಲ್ವೆ ನಿಲ್ದಾಣದಲ್ಲಿ ಮ್ಯೂಸಿಯಂ ಉದ್ಘಾಟನೆಯಾಯ್ತು!

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು