ಕಿರಾನಾ ಬೆಟ್ಟದಲ್ಲಿರುವ ಪಾಕ್ ಪರಮಾಣು ಕೇಂದ್ರಗಳ ಮೇಲೆ ದಾಳಿ ಮಾಡಿತ್ತೇ ಭಾರತ? ಇದೇನಿದು ಹೊಸ ಚಿತ್ರ

ಭಾರತವು ಆಪರೇಷನ್ ಸಿಂಧೂರ್(Operation Sindoor) ಸಮಯದಲ್ಲಿ ಪಾಕಿಸ್ತಾನದ ಮೇಲೆ ಬ್ರಹ್ಮೋಸ್ ಕ್ಷಿಪಣಿ ನಡೆಸಿದ ದಾಳಿಯ ಗುರುತುಗಳು ಇಂದಿಗೂ ಗೋಚರಿಸುತ್ತಿವೆ. ಆಪರೇಷನ್ ಸಿಂಧೂರ್‌ನಲ್ಲಿ ತನಗೆ ಯಾವುದೇ ಹಾನಿಯಾಗಿಲ್ಲ ಎಂದು ಹೇಳಿಕೊಂಡು ಪಾಕಿಸ್ತಾನ ತನ್ನ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದೆ.ಆದರೆ ಉಪಗ್ರಹ ಚಿತ್ರಗಳು ಪ್ರತಿಯೊಂದು ಸುಳ್ಳುಗಳನ್ನು ಬಹಿರಂಗಪಡಿಸುತ್ತಿವೆ. ಈಗ ಹೊಸ ಉಪಗ್ರಹ ಚಿತ್ರ ಬಡುಗಡೆಗೊಂಡಿದ್ದು, ಅದು ಭಾರತ ಪಾಕಿಸ್ತಾನದ ಪರಮಾಣು ನೆಲೆ ಕಿರಾನಾ ಬೆಟ್ಟಗಳ ಮೇಲೆ ದಾಳಿ ಮಾಡಿದೆ ಎಂಬುದನ್ನು ತೋರಿಸಿದೆ.

ಕಿರಾನಾ ಬೆಟ್ಟದಲ್ಲಿರುವ ಪಾಕ್ ಪರಮಾಣು ಕೇಂದ್ರಗಳ ಮೇಲೆ ದಾಳಿ ಮಾಡಿತ್ತೇ ಭಾರತ? ಇದೇನಿದು ಹೊಸ ಚಿತ್ರ
ಹಿಲ್ಸ್

Updated on: Jul 20, 2025 | 1:06 PM

ಇಸ್ಲಾಮಾಬಾದ್, ಜುಲೈ 20:ಭಾರತವು ಆಪರೇಷನ್ ಸಿಂಧೂರ್(Operation Sindoor) ಸಮಯದಲ್ಲಿ ಪಾಕಿಸ್ತಾನದ ಮೇಲೆ ಬ್ರಹ್ಮೋಸ್ ಕ್ಷಿಪಣಿ ನಡೆಸಿದ ದಾಳಿಯ ಗುರುತುಗಳು ಇಂದಿಗೂ ಗೋಚರಿಸುತ್ತಿವೆ. ಆಪರೇಷನ್ ಸಿಂಧೂರ್‌ನಲ್ಲಿ ತನಗೆ ಯಾವುದೇ ಹಾನಿಯಾಗಿಲ್ಲ ಎಂದು ಹೇಳಿಕೊಂಡು ಪಾಕಿಸ್ತಾನ ತನ್ನ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದೆ.ಆದರೆ ಉಪಗ್ರಹ ಚಿತ್ರಗಳು ಪ್ರತಿಯೊಂದು ಸುಳ್ಳುಗಳನ್ನು ಬಹಿರಂಗಪಡಿಸುತ್ತಿವೆ. ಈಗ ಹೊಸ ಉಪಗ್ರಹ ಚಿತ್ರ ಬಡುಗಡೆಗೊಂಡಿದ್ದು, ಅದು ಭಾರತ ಪಾಕಿಸ್ತಾನದ ಪರಮಾಣು ನೆಲೆ ಕಿರಾನಾ ಬೆಟ್ಟಗಳ ಮೇಲೆ ದಾಳಿ ಮಾಡಿದೆ ಎಂಬುದನ್ನು ತೋರಿಸಿದೆ.

ಇದೇ ಜೂನ್ 2025 ರಲ್ಲಿ ಗೂಗಲ್ ಅರ್ಥ್‌ನಿಂದ ಬಂದ ಹೊಸ ಉಪಗ್ರಹ ಚಿತ್ರಗಳು ಭಾರತದ ಕ್ಷಿಪಣಿ ಪಾಕಿಸ್ತಾನದ ಸರ್ಗೋಧಾ ಜಿಲ್ಲೆಯಲ್ಲಿರುವ ಕಿರಾನಾ ಬೆಟ್ಟಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಬಹಿರಂಗಪಡಿಸಿವೆ. ಪಾಕಿಸ್ತಾನದ ಪರಮಾಣು ನೆಲೆ ಇಲ್ಲೇ ಇದೆ ಎಂದು ನಂಬಲಾಗಿದೆ. ಇದರ ಹೊರತಾಗಿ, ಸರ್ಗೋಧಾ ವಾಯುನೆಲೆಯ ರನ್‌ವೇ ದುರಸ್ತಿ ಮಾಡಲಾದ ಮತ್ತೊಂದು ಚಿತ್ರ ಕಾಣಿಸಿಕೊಂಡಿದೆ.

ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾದ ವರದಿಯ ಪ್ರಕಾರ, ಕಿರಾನ ಬೆಟ್ಟಗಳಲ್ಲಿ ಮಿಲಿಟರಿ ಉದ್ದೇಶಗಳಿಗಾಗಿ ನಿರ್ಮಿಸಲಾದ ರಾಡಾರ್ ಕೇಂದ್ರಗಳು ಮತ್ತು ಸುರಂಗಗಳು ಇವೆ. ಇದರಿಂದಾಗಿಯೇ ಇದರ ಕಾರ್ಯತಂತ್ರದ ಪ್ರಾಮುಖ್ಯತೆ ಹೆಚ್ಚಾಗುತ್ತದೆ. ಇದರ ಹೊರತಾಗಿ, ಈ ಪ್ರದೇಶವು ಸರ್ಗೋಧ ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲಿದೆ.ಭಾರತೀಯ ವಾಯುಪಡೆಯು ಕಿರಾನ ಬೆಟ್ಟಗಳ ಮೇಲಿನ ದಾಳಿಯ ವರದಿಗಳನ್ನು ತಿರಸ್ಕರಿಸಿತ್ತು.

ಇದನ್ನೂ ಓದಿ
ವಿಮಾನಕ್ಕೆ ಹದ್ದು ಡಿಕ್ಕಿಯಾಗಿ ತುರ್ತು ಭೂಸ್ಪರ್ಶ; 175 ಪ್ರಯಾಣಿಕರು ಪಾರು
ರಷ್ಯಾದಿಂದ ಬಾಕಿ ಎಸ್-400 ಕ್ಷಿಪಣಿ ವ್ಯವಸ್ಥೆಗಳು ಭಾರತಕ್ಕೆ 2026ಕ್ಕೆ ಲಭ್ಯ
ಉಕ್ರೇನ್‌ ಡ್ರೋನ್ ದಾಳಿಯಲ್ಲಿ ಯುದ್ಧ ವಿಮಾನ ಪತನದ ಬಗ್ಗೆ ಮೌನ ಮುರಿದ ರಷ್ಯಾ
ಪಾಕಿಸ್ತಾನ ಭಿಕ್ಷಾ ಪಾತ್ರೆ ಹಿಡಿದು ದೇಶಗಳ ಸುತ್ತುತ್ತಿದೆ

ಮೇ 12 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ, ವಾಯುಪಡೆಯ ವಾಯು ಕಾರ್ಯಾಚರಣೆಗಳ ಮಹಾನಿರ್ದೇಶಕ ಏರ್ ಮಾರ್ಷಲ್ ಎ.ಕೆ. ಭಾರ್ತಿ, ಕಿರಾನಾ ಬೆಟ್ಟಗಳಲ್ಲಿ ಪರಮಾಣು ಕೇಂದ್ರಗಳಿವೆ ಎಂದು ನಮಗೆ ತಿಳಿದಿರಲಿಲ್ಲ. ನಾವು ಅಲ್ಲಿ ದಾಳಿ ಮಾಡಲಿಲ್ಲ ಎಂದು ಹೇಳಿದ್ದರು. ಆದಾಗ್ಯೂ, ಅವರು ಹೀಗೆ ಹೇಳಿದಾಗ ಅವರ ಮುಖದಲ್ಲಿ ನಗುವಿತ್ತು, ಇದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಭಾರತವು ನಿಜವಾಗಿಯೂ ಈ ಸೂಕ್ಷ್ಮ ಪ್ರದೇಶವನ್ನು ಗುರಿಯಾಗಿಸಿಕೊಂಡಿದೆ ಎಂದು ಹಲವರು ಊಹಿಸಲು ಕಾರಣವಾಯಿತು. ಪಾಕಿಸ್ತಾನಕ್ಕೆ ಬಲವಾದ ಎಚ್ಚರಿಕೆ ನೀಡಲು ಭಾರತ ಕಿರಾನ ಬೆಟ್ಟಗಳನ್ನು ಗುರಿಯಾಗಿಸಿಕೊಂಡಿರುವ ಸಾಧ್ಯತೆಯಿದೆ.

ಮತ್ತಷ್ಟು ಓದಿ: 1 ಗಡಿ, 3 ಶತ್ರುಗಳು; ಆಪರೇಷನ್ ಸಿಂಧೂರ್‌ನಲ್ಲಿ ಪಾಕ್ ಮಾತ್ರ ವೈರಿಯಾಗಿರಲಿಲ್ಲ ಎಂದ ಸೇನೆ

ಭಾರತದ ದಾಳಿಯ ನಂತರ ಸರ್ಗೋಧಾ ವಿಮಾನ ನಿಲ್ದಾಣದ ರನ್‌ವೇಗಳನ್ನು ತ್ವರಿತವಾಗಿ ದುರಸ್ತಿ ಮಾಡಲಾಗಿದೆ ಎಂದು ಉಪಗ್ರಹ ಚಿತ್ರಗಳು ತೋರಿಸಿವೆ.ಈ ವಿಮಾನ ನಿಲ್ದಾಣವು ಪಾಕಿಸ್ತಾನಕ್ಕೆ ಒಂದು ಪ್ರಮುಖ ಮಿಲಿಟರಿ ಆಸ್ತಿಯಾಗಿದೆ ಎಂದು ಇದು ಸ್ಪಷ್ಟವಾಗಿ ತೋರಿಸುತ್ತದೆ. ಆಪರೇಷನ್ ಸಿಂಧೂರ್‌ನಲ್ಲಿ, ಭಾರತವು ಮೇ 9-10 ರ ರಾತ್ರಿ ಸುಮಾರು 15 ಬ್ರಹ್ಮೋಸ್ ಕ್ಷಿಪಣಿಗಳು ಮತ್ತು ಇತರ ನಿಖರ ಶಸ್ತ್ರಾಸ್ತ್ರಗಳನ್ನು ಬಳಸಿತು.

ಈ ಕಾರ್ಯಾಚರಣೆಯಲ್ಲಿ, ಭಾರತೀಯ ವಾಯುಪಡೆಯು ಪಾಕಿಸ್ತಾನದ 13 ಪ್ರಮುಖ ವಿಮಾನ ನಿಲ್ದಾಣಗಳಲ್ಲಿ 11 ವಿಮಾನ ನಿಲ್ದಾಣಗಳನ್ನು ಹಾನಿಗೊಳಿಸಿತು, ಇದು ಅವರ ವಾಯು ರಕ್ಷಣಾ ವ್ಯವಸ್ಥೆ ಮತ್ತು ಮಿಲಿಟರಿ ಮೂಲಸೌಕರ್ಯಕ್ಕೆ ಭಾರಿ ಹೊಡೆತ ನೀಡಿತು. ಭಾರತದ ಸ್ಯಾನ್ ನೆಲೆಯಲ್ಲಿ ಪಾಕಿಸ್ತಾನಿ ಸೇನೆ ನಡೆಸಿದ ದಾಳಿಯಲ್ಲಿ ಸುಖೋಯ್-30 ಎಂಕೆಐ ವಿಮಾನ ಮತ್ತು ರಷ್ಯಾ ನಿರ್ಮಿತ ಎಸ್-400 ವಾಯು ರಕ್ಷಣಾ ವ್ಯವಸ್ಥೆ ನಾಶವಾಗಿವೆ ಎಂದು ಪಾಕಿಸ್ತಾನಿ ಮಾಧ್ಯಮಗಳು ಹೇಳಿಕೊಂಡಿದ್ದವು. ಜಮ್ಮು ಕಾಶ್ಮೀರದ ಪಹಲ್ಗಾಮ್​ನಲ್ಲಿ ಉಗ್ರರು ದಾಳಿ ನಡೆಸಿ 26 ಅಮಾಯಕರನ್ನು ಬಲಿ ಪಡೆದಿದ್ದರು, ಅದರ ಪ್ರತೀಕಾರವಾಗಿ ಭಾರತವು ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರ್ ಪ್ರಾರಂಭಿಸಿತ್ತು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ