ಸೌದಿ ಅರೇಬಿಯಾದಲ್ಲಿರುವ ಮೆಕ್ಕಾ ಮುಸ್ಲಿಮರ ಪಾಲಿಗೆ ಪವಿತ್ರವಾದ ಸ್ಥಳ. ಪ್ರತಿ ವರ್ಷ ಇಲ್ಲಿಗೆ ಬೇರೆ ದೇಶಗಳ ಮುಸ್ಲಿಮರೂ ಬರುತ್ತಾರೆ. ಅದನ್ನು ಹಜ್ ಯಾತ್ರೆ ಎಂದೂ ಕರೆಯಲಾಗುತ್ತದೆ. ಈ ಮೆಕ್ಕಾ ಮಸೀದಿಯ ಹೊರಾಂಗಣ ಚಿತ್ರ ನಿಮಗೆ ನೋಡಲು ಸಿಕ್ಕಿದ್ದರೂ, ಅದರ ಒಳಾಂಗಣದಲ್ಲಿ ಏನಿದೆ ಎಂಬುದನ್ನು ನೋಡಲು ಸಾಧ್ಯವಾಗಿರಲಿಲ್ಲ. ಇದೀಗ ಇತಿಹಾಸದಲ್ಲೇ ಮೊದಲ ಬಾರಿಗೆ ಸೌದಿ ಅರೇಬಿಯಾ ಸರ್ಕಾರ, ಮೆಕ್ಕಾ ಮಸೀದಿಯೊಳಗೆ ಇರುವ ಪವಿತ್ರ ಕಪ್ಪುಕಲ್ಲು, ಧಾರ್ಮಿಕ ಕಲ್ಲುಗಳ ಹೈ ರೆಸಲ್ಯೂಶನ್ ಇರುವ ಫೋಟೋವನ್ನು ಬಿಡುಗಡೆ ಮಾಡಿದೆ.
ಇದೀಗ ಬಿಡುಗಡೆಯಾಗಿರುವ ಮೆಕ್ಕಾದ ಪವಿತ್ರ ಬ್ಲ್ಯಾಕ್ ಸ್ಟೋನ್ನ ಫೋಟೋ ಸುಮಾರು 49,000 ಮೆಗಾ ಫಿಕ್ಸೆಲ್ ಇದೆ ಎಂದು ಸೌದಿ ಗ್ರ್ಯಾಂಡ್ ಮಸೀದಿ ಮತ್ತು ಪಾಪೆಟ್ಸ್ ಮಸೀದಿಯ ವ್ಯವಹಾರಗಳ ಜನರಲ್ ಪ್ರೆಸಿಡೆನ್ಸಿ ತಿಳಿಸಿದೆ. ಹಾಗೇ ಈ ಚಿತ್ರಗಳನ್ನು ತೆಗೆಯಲು ಸುಮಾರು 50 ತಾಸು ಬೇಕಾಯಿತು ಎಂದೂ ಮಾಹಿತಿ ನೀಡಿದೆ.
ಮೆಕ್ಕಾ ಮಸೀದಿಯಲ್ಲಿರುವ ಪವಿತ್ರ ಕಲ್ಲುಗಳ ಸುಮಾರು 1050 ಫೋಟೋಗಳನ್ನು ತೆಗೆಯುವಾಗ ಹಲವು ರೀತಿಯ ಟೆಕ್ನಿಕ್ನ್ನು ಬಳಸಲಾಗಿದೆ. ಹೀಗೆ ಈ ಫೋಟೋಗಳನ್ನು ತೆಗೆಯುವಾಗ ಎರಡೂ ಮಸೀದಿಗಳ ಜನರಲ್ ಪ್ರೆಸಿಡೆನ್ಸಿ ಮತ್ತು ಇಂಜಿನಿಯರಿಂಗ್ ವಿಭಾಗ ಜತೆಯಾಗಿ ಕೆಲಸ ಮಾಡಿವೆ. ಸುಮಾರು 7 ತಾಸುಗಳ ಕಾಲ ಯೋಜನೆ ರೂಪಿಸಿವೆ.
ಮುಸ್ಲಿಮರ ಪಾಲಿಗೆ ಮೆಕ್ಕಾ ತುಂಬ ಪವಿತ್ರ. ಅಲ್ಲಿನ ಪವಿತ್ರ ಕಲ್ಲುಗಳ ವೀಕ್ಷಣೆಗೆಂದೇ ಪ್ರತಿವರ್ಷವೂ ಯಾತ್ರೆಗೆ ಹೋಗುತ್ತಾರೆ. ಇದೀಗ ಕೊವಿಡ್ 19 ಅಲೆ ಜೋರಾಗಿದ್ದರಿಂದ ಮೆಕ್ಕಾ ಯಾತ್ರೆಗೂ ತಡೆ ಬಿದ್ದಿದೆ. ಇದೇ ಹೊತ್ತಲ್ಲಿ ಸೌದಿ ಸರ್ಕಾರ ಹೀಗೊಂದು ಮಹತ್ವದ ನಿರ್ಧಾರ ಕೈಗೊಂಡು, ಇತಿಹಾಸದಲ್ಲೇ ಪ್ರಥಮಬಾರಿಗೆ ಎಂಬಂತೆ ಮಸೀದಿಯ ಒಳಗಿನ ಫೋಟೋಗಳನ್ನು ಬಿಡುಗಡೆ ಮಾಡಿದೆ.
#رئاسة_شؤون_الحرمين توثق الحجر الأسود بتقنية (Focus Stack Panorama)
ماهي هذه التقنية ؟
هي تقنية يتم فيها تجميع الصور بوضوح مختلف، حتى تنتج لنا صورة واحدة بأكبر دقة. pic.twitter.com/n0mWCPAw1r— رئاسة شؤون الحرمين (@ReasahAlharmain) May 3, 2021
ಇದನ್ನೂ ಓದಿ: ಸಂಬಳ ನೀಡುತ್ತಿಲ್ಲ ಎಂದು ಕರ್ತವ್ಯ ನಿರ್ವಹಿಸದೇ ಬಿಬಿಎಂಪಿ ಪಶ್ಚಿಮ ವಲಯದ ವಾರ್ರೂಂ ಸಿಬ್ಬಂದಿ ಪ್ರತಿಭಟನೆ
Sanjana Galrani : ಬೆಂಗಳೂರಿನಲ್ಲಿ ಸಂಕಷ್ಟದಲ್ಲಿರೋ ಜನ್ರ ಸಹಾಯಕ್ಕೆ ಮುಂದಾಗ್ತಿರೋ ನಟಿ ಸಂಜನಾ ಗರ್ಲಾನಿ
Published On - 3:50 pm, Thu, 6 May 21