ವುಹಾನ್ನಲ್ಲಿ ಶಾಲೆಗಳು ಮಂಗಳವಾರದಿಂದ ಮತ್ತೆ ಆರಂಭ, ಸಿದ್ಧತೆ ಹೀಗಿದೆ..
ವುಹಾನ್: ಕೊರೊನಾ ಮಹಾಮಾರಿಯ ಜನಕ ಎಂದೇ ಹೇಳಲಾಗುತ್ತಿರುವ ಚೀನಾದ ವುಹಾನ್ ಸಿಟಿ ಈಗ ಸಾಮಾನ್ಯ ಸ್ಥಿತಿಗೆ ಬರುತ್ತಿದೆ. ಜನವರಿಯಿಂದ ಕ್ಲೋಸ್ ಆಗಿದ್ದ ಶಾಲಾ ಕಾಲೇಜುಗಳು ಈಗ ಮತ್ತೆ ಪುನರಾರಂಭವಾಗುತ್ತಿವೆ. ಹೌದು ಕೊರೊನಾ ಹುಟ್ಟಿನ ಮೂಲ ಎಂದೇ ಹೇಳಲಾಗುತ್ತಿರುವ ಚೀನಾದ ವುಹಾನ್ ಸಿಟಿ ಮತ್ತೆ ಸಾಮಾನ್ಯ ಸ್ಥಿತಿಗೆ ಬರುತ್ತಿದೆ. ಈ ಸಂಬಂಧ ಎಪ್ರಿಲ್‌ನಲ್ಲಿ ಲಾಕ್‌ಡೌನ್ ತೆರವುಗೊಳಿಸಿದ್ದ ವುಹಾನ್ ನಗರ ಈಗ ಶಾಲಾ ಕಾಲೇಜುಗಳನ್ನು ಪುನರಾರಂಭ ಮಾಡುತ್ತಿದೆ. ಈಗಾಗಲೇ ಕಳೆದ ಸೋಮವಾರ ವುಹಾನ್ ವಿಶ್ವವಿದ್ಯಾಲಯ ಪುನರಾರಂಭವಾಗಿತ್ತು. ಈಗ ಮಂಗಳವಾರದಿಂದ ನರ್ಸರಿಯಿಂದ […]
ವುಹಾನ್: ಕೊರೊನಾ ಮಹಾಮಾರಿಯ ಜನಕ ಎಂದೇ ಹೇಳಲಾಗುತ್ತಿರುವ ಚೀನಾದ ವುಹಾನ್ ಸಿಟಿ ಈಗ ಸಾಮಾನ್ಯ ಸ್ಥಿತಿಗೆ ಬರುತ್ತಿದೆ. ಜನವರಿಯಿಂದ ಕ್ಲೋಸ್ ಆಗಿದ್ದ ಶಾಲಾ ಕಾಲೇಜುಗಳು ಈಗ ಮತ್ತೆ ಪುನರಾರಂಭವಾಗುತ್ತಿವೆ.
ಹೌದು ಕೊರೊನಾ ಹುಟ್ಟಿನ ಮೂಲ ಎಂದೇ ಹೇಳಲಾಗುತ್ತಿರುವ ಚೀನಾದ ವುಹಾನ್ ಸಿಟಿ ಮತ್ತೆ ಸಾಮಾನ್ಯ ಸ್ಥಿತಿಗೆ ಬರುತ್ತಿದೆ. ಈ ಸಂಬಂಧ ಎಪ್ರಿಲ್‌ನಲ್ಲಿ ಲಾಕ್‌ಡೌನ್ ತೆರವುಗೊಳಿಸಿದ್ದ ವುಹಾನ್ ನಗರ ಈಗ ಶಾಲಾ ಕಾಲೇಜುಗಳನ್ನು ಪುನರಾರಂಭ ಮಾಡುತ್ತಿದೆ. ಈಗಾಗಲೇ ಕಳೆದ ಸೋಮವಾರ ವುಹಾನ್ ವಿಶ್ವವಿದ್ಯಾಲಯ ಪುನರಾರಂಭವಾಗಿತ್ತು. ಈಗ ಮಂಗಳವಾರದಿಂದ ನರ್ಸರಿಯಿಂದ ಹಿಡಿದು ಕಾಲೇಜುವರೆಗಿನ ಶಾಲಾ ಕಾಲೇಜುಗಳು ಪುನಾರಂಭವಾಗುತ್ತಿವೆ.
ಇದಕ್ಕಾಗಿ ವುಹಾನ್ ನಗರಾಡಳಿತ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ತುರ್ತು ಆರೋಗ್ಯ ಸ್ಥಿತಿ ನಿಭಾಯಿಸಲು ಅಗತ್ಯ ಸೌಲಭ್ಯಗಳನ್ನು ತಯಾರಿ ಮಾಡಿಕೊಂಡಿದೆ. ಅಷ್ಟೇ ಅಲ್ಲ ಶಾಲಾ ಮಕ್ಕಳು ಮನೆಯಿಂದ ಶಾಲೆಗೆ ಹಾಗೂ ಶಾಲೆಯಿಂದ ಮನೆಗೆ ಹೋಗುವಾಗ ಮಾಸ್ಕ್ ಧರಿಸುವದು ಕಡ್ಡಾಯ ಮಾಡಿದೆ. ಹಾಗೇನೇ ಸಾರ್ವಜನಿಕ ಟ್ರಾನ್ಸಫೋರ್ಟ್ ವ್ಯವಸ್ಥೆಯನ್ನು ಬಳಸದಂತೆ ನಿರ್ಬಂಧ ವಿಧಿಸಿದೆ.
ಒಂದು ವೇಳೆ ಶಾಲೆಗಳು ಪುನಾರಂಭವಾದ ನಂತರ ಮತ್ತೇ ಏನಾದ್ರೂ ಕೊರೊನಾ ಪ್ರಕರಣ ಕಂಡು ಬಂದರೆ, ಬದಲಿ ವ್ಯವಸ್ಥೆಯಾಗಿ ಆನ್‌ಲೈನ್ ಕ್ಲಾಸ್‌ಗಳನ್ನು ಹಮ್ಮಿಕೊಳ್ಳಲು ಸಿದ್ದತೆ ತಯಾರು ಮಾಡಿಟ್ಟುಕೊಂಡಿದೆ. ಅಂದ ಹಾಗೆ ಕೊರೊನಾದಿದಂ ಸಾವನ್ನಪ್ಪಿದ ಪ್ರಕರಣಗಳಲ್ಲಿ ಶೇ.80ರಷ್ಟು ವುಹಾನ್ ಸಿಟಿಯಲ್ಲಿಯೇ ಸಂಭವಿಸಿವೆ.