200 ಬಿಲಿಯನ್ ಡಾಲರ್ ಸಂಪತ್ತು ಹೊಂದಿದ ವಿಶ್ವದ ಮೊದಲ ವ್ಯಕ್ತಿ ಜೆಫ್ ಬಿಜೊಸ್
ಕೊವಿಡ್-19 ಸೋಂಕಿ ಇಡೀ ಪ್ರಪಂಚದ ಜನ ಮತ್ತು ಉದ್ಯಮಗಳನ್ನು ತತ್ತರಿಸುವಂತೆ ಮಾಡಿದ್ದರೆ, ಕುಬೇರರನ್ನು ಮತ್ತಷ್ಟು ಶ್ರೀಮಂತರನ್ನಾಗಿಸಿದೆ. ಇದು ವಿಚಿತ್ರವಾದರೂ ಸತ್ಯ ಸಂಗತಿ. 1995 ರಲ್ಲಿ ಅಮೆಜಾನ್ ಸಂಸ್ಥೆಯನ್ನು ಹುಟ್ಟುಹಾಕಿದ ಜೆಫ್ ಬಿಜೊಸ್ ಯಾರಿಗೆ ಗೊತ್ತಿಲ್ಲ. ಅಂದಹಾಗೆ ಈ ಮನುಷ್ಯನ ಸಂಪತ್ತು ಎಷ್ಡಿರಬಹುದೆಂದು ಅಂದಾಜಿಸಬಲ್ಲಿರಾ? 200 ಬಿಲಿಯನ್ ಡಾಲರ್ಗಳು! ಒಂದು ಬಿಲಿಯನ್ ಡಾಲರ್ಗಳನ್ನು ರುಪಾಯಿಗಳಲ್ಲಿ ಪರಿವರ್ತಿಸಿದರೆ ಅದು 7,500 ಕೋಟಿ ರುಪಾಯಿಗಳಾಗುತ್ತದೆ. 200 ಬಿಲಿಯನ್ ಡಾಲರ್ಗಳೆಂದರೆ, 15 ಲಕ್ಷಕೋಟಿ ರುಪಾಯಿಗಳು!! ಇದು, ವಿಶ್ವದ ಆಗರ್ಭ ಶ್ರೀಮಂತರ ಸಂಪತ್ತನ್ನು ಪ್ರತಿದಿನದ […]
ಕೊವಿಡ್-19 ಸೋಂಕಿ ಇಡೀ ಪ್ರಪಂಚದ ಜನ ಮತ್ತು ಉದ್ಯಮಗಳನ್ನು ತತ್ತರಿಸುವಂತೆ ಮಾಡಿದ್ದರೆ, ಕುಬೇರರನ್ನು ಮತ್ತಷ್ಟು ಶ್ರೀಮಂತರನ್ನಾಗಿಸಿದೆ. ಇದು ವಿಚಿತ್ರವಾದರೂ ಸತ್ಯ ಸಂಗತಿ.
1995 ರಲ್ಲಿ ಅಮೆಜಾನ್ ಸಂಸ್ಥೆಯನ್ನು ಹುಟ್ಟುಹಾಕಿದ ಜೆಫ್ ಬಿಜೊಸ್ ಯಾರಿಗೆ ಗೊತ್ತಿಲ್ಲ. ಅಂದಹಾಗೆ ಈ ಮನುಷ್ಯನ ಸಂಪತ್ತು ಎಷ್ಡಿರಬಹುದೆಂದು ಅಂದಾಜಿಸಬಲ್ಲಿರಾ? 200 ಬಿಲಿಯನ್ ಡಾಲರ್ಗಳು! ಒಂದು ಬಿಲಿಯನ್ ಡಾಲರ್ಗಳನ್ನು ರುಪಾಯಿಗಳಲ್ಲಿ ಪರಿವರ್ತಿಸಿದರೆ ಅದು 7,500 ಕೋಟಿ ರುಪಾಯಿಗಳಾಗುತ್ತದೆ. 200 ಬಿಲಿಯನ್ ಡಾಲರ್ಗಳೆಂದರೆ, 15 ಲಕ್ಷಕೋಟಿ ರುಪಾಯಿಗಳು!! ಇದು, ವಿಶ್ವದ ಆಗರ್ಭ ಶ್ರೀಮಂತರ ಸಂಪತ್ತನ್ನು ಪ್ರತಿದಿನದ ಗಳಿಕೆಯ ಆಧಾರದಲ್ಲಿ ಲೆಕ್ಕಾಚಾರಮಾಡಿ ನಿಖರವಾದ ಅಂಕಿಅಂಶಗಳನ್ನು ನೀಡುವ ಬ್ಲೂಮ್ಬರ್ಗ್ ಬಿಲಿಯನ್ನೇರ್ಸ್ ಇಂಡೆಕ್ಸ್ ಬುಧವಾರದಂದು ಪ್ರಕಟಿಸಿರುವ ವರದಿ.ಅಂದಹಾಗೆ, ಬಿಜೊಸ್ ಮಾನವ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ 200 ಬಿಲಿಯನ್ ಡಾಲರ್ಗಳಿಗೂ ಜಾಸ್ತಿ ಸಂಪತ್ತು ಹೊದಿರುವ ಮೊದಲ ವ್ಯಕ್ತಿ ಎನಿಸಿಕೊಡಿದ್ದಾರೆ. ಅವರ ಶ್ರೀಮಂತಿಕೆ ಕುರಿತು ಮತ್ತೂ ಸೋಜಿಗ ಹುಟ್ಟಿಸುವ ಸಂಗತಿಯೆಂದರೆ, ಇತ್ತೀಚಿಗೆ ಅವರಿಂದ ಡಿವೋರ್ಸ್ ಪಡೆದ ಅವರ ಹೆಂಡತಿ ಮೆಕಂಜಿ ಸ್ಕಾಟ್ಗೆ ಅವರು ತಮ್ಮ ಸಂಪತ್ತಿನ ಶೇಕಡಾ 25ರಷ್ಟನ್ನು ಅವರು ಜೀವನಾಂಶ ರೂಪದಲ್ಲಿ ನೀಡಿದ್ದಾರೆ. ಅವರಿಂದ ಅಷ್ಟು ಸಂಪತ್ತು ಪಡೆದ ಸ್ಕಾಟ್ ಈಗ ವಿಶ್ವದ 14ನೇ ಅತಿ ಶ್ರೀಮಂತ ವ್ಯಕ್ತಿ ಹಾಗೂ ಎರಡನೇ ಅತಿ ಸಿರಿವಂತ ಮಹಿಳೆ. ಎಲ್’ಆರಿಯಲ್ ಸಂಸ್ಥೆಯ ಒಡತಿಯಾಗಿರುವ ಫ್ರಾಂಕಾಯಿಸ್ ಬಿಟೆನ್ಕೋರ್ಟ್ಮೇಯರ್ಸ್ ಅವರ ಸಂಪತ್ತು, ಸ್ಕಾಟ್ರ ಆಸ್ತಿಗಿಂತ ಕೊಂಚ ಜಾಸ್ತಿಯಿದೆ. ಪುರುಷರಲ್ಲಿ ವಿಶ್ವದ ಎರಡನೇ ಅತಿ ದೊಡ್ಡ ಕುಬೇರನಂದರೆ, ಮೈಕ್ರೊಸಾಫ್ಟ್ನ ಮಾಲೀಕ ಬಿಲ್ ಗೇಟ್ಸ್. ಅವರು ಒಟ್ಟು ಸಂಪತ್ತು 124 ಬಿಲಿಯನ್ ಡಾಲರ್ಗಳಷ್ಟಿದೆ. ಟೆಲ್ಸಾ ಐಎನ್ಸಿ ಸಂಸ್ಥೆಯ ಇಲಾನ್ ಮಸ್ಕ್ ಸಹ ನೂರುಶತಕೋಟಿ ಡಾಲರ್ಗಳಿಗಿಂತ ಹೆಚ್ಷು ಆಸ್ತಿ ಹೊಂದಿರುವ ವಿಶ್ವದ ನಾಲ್ಕನೇ ವ್ಯಕ್ತಿಯೆನಿಸಿಕೊಂಡಿದ್ದಾರೆ. ಈ ಗುಂಪಿಗೆ ಸೇರಿದ ಮತ್ತೊಬ್ಬ ವ್ಯಕ್ತಿಯಂದರೆ, ಫೇಸ್ಬುಕ್ನ ಮಾರ್ಕ್ ಜಕರ್ಬರ್ಗ್.
ಆಗಲೇ ಹೇಳಿದಂತೆ ಕೊವಿಡ್ ಮತ್ತು ತತ್ಸಂಬಂಧದ ಲಾಕ್ಡೌನ್ಗಳ ಅವಧಿಯಲ್ಲಿ ಜಗತ್ತಿನಾದ್ಯಂತ ಉದ್ಯಮಗಳು ತೀವ್ರ ನಷ್ಟ ಅನುಭವಿಸಿದರೆ, ಈ ಕುಬೇರರ ಸಂಸ್ಥೆಗಳು ಮಾತ್ರ ವಹಿವಾಟು ಹಾಗೂ ಲಾಭಾಂಶವನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿವೆ. ತಗ್ಗಿರುವ ಕಡೆಯೇ ನೀರು ಹರಿಯೋದು ಅಂತ ಹೇಳುತ್ತಾರಲ್ಲ, ಅದು ಅಕ್ಷರಶಃ ನಿಜ ಅನಿಸುತ್ತಿದೆ.