ಅಮೆರಿಕಾದ ಪ್ರತಿಷ್ಠೆಯನ್ನು ಅಕ್ಷರಶಃ ಮಣ್ಣುಪಾಲು ಮಾಡಿದ ಉಗ್ರ ದಿನ ಇಂದು; 9/11 ದಾಳಿಯಿಂದ ಅಮೆರಿಕಾ ಕಲಿತ ಪಾಠವೇನು?

| Updated By: ಸಾಧು ಶ್ರೀನಾಥ್​

Updated on: Sep 11, 2021 | 9:00 AM

Joe Biden Video Message: ಅಮೆರಿಕಾದ ಸಾರ್ವಭೌಮತ್ವ ಮತ್ತು ಪ್ರತಿಷ್ಠೆಯನ್ನು ಅಕ್ಷರಶಃ ಮಣ್ಣುಪಾಲು ಮಾಡಿದ ಉಗ್ರ ದಿನ ಇಂದು. ಅಮೆರಿಕದ WTC ಮೇಲೆ ಅಲ್​ಖೈದಾ ದಾಳಿಗೆ ಇಂದು 20ನೇ ವಾರ್ಷಿಕ. ಈ ಸಂದರ್ಭದಲ್ಲಿ ಮೃತಪಟ್ಟ ಸಾವಿರಾರು ಮಂದಿಗೆ ಶ್ರದ್ಧಾಂಜಲಿ ಸಲ್ಲಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಪ್ರಸಾರ ಭಾಷಣ ಮಾಡಿದ್ದಾರೆ.​

ಅಮೆರಿಕಾದ ಪ್ರತಿಷ್ಠೆಯನ್ನು ಅಕ್ಷರಶಃ ಮಣ್ಣುಪಾಲು ಮಾಡಿದ ಉಗ್ರ ದಿನ ಇಂದು; 9/11 ದಾಳಿಯಿಂದ ಅಮೆರಿಕಾ ಕಲಿತ ಪಾಠವೇನು?
ಅಮೆರಿಕಾದ ಪ್ರತಿಷ್ಠೆಯನ್ನು ಅಕ್ಷರಶಃ ಮಣ್ಣುಪಾಲು ಮಾಡಿದ ಉಗ್ರ ದಿನ ಇಂದು; 9/11 ದಾಳಿಯಿಂದ ಅಮೆರಿಕಾ ಕಲಿತ ಪಾಠವೇನು?
Follow us on

ವಾಷಿಂಗ್ಟನ್: ಅಮೆರಿಕಾದ ಸಾರ್ವಭೌಮತ್ವ ಮತ್ತು ಪ್ರತಿಷ್ಠೆಯನ್ನು ಅಕ್ಷರಶಃ ಮಣ್ಣುಪಾಲು ಮಾಡಿದ ಉಗ್ರ ದಿನ ಇಂದು. ಅಮೆರಿಕದ WTC ಮೇಲೆ ಅಲ್​ಖೈದಾ ದಾಳಿಗೆ ಇಂದು 20ನೇ ವಾರ್ಷಿಕ. ಈ ಸಂದರ್ಭದಲ್ಲಿ ಮೃತಪಟ್ಟ ಸಾವಿರಾರು ಮಂದಿಗೆ ಶ್ರದ್ಧಾಂಜಲಿ ಸಲ್ಲಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಪ್ರಸಾರ ಭಾಷಣ ಮಾಡಿದ್ದಾರೆ.​ 9/11 ದಾಳಿಯಿಂದ ಐಕ್ಯತೆಯೇ ಶಕ್ತಿ ಎಂಬ ಪಾಠ ಕಲಿತೆವು. ಅಮೆರಿಕದ ರಾಷ್ಟ್ರೀಯ ಐಕ್ಯತೆಯೇ ದೊಡ್ಡ ಶಕ್ತಿ ಎಂದು ವಿಡಿಯೋ ಸಂದೇಶದ ಮೂಲಕ ಜೋ ಬೈಡನ್​ ಹೇಳಿದ್ದಾರೆ.

2001ರ ಸೆಪ್ಟೆಂಬರ್ 11ರಂದು WTC ಮೇಲೆ ದಾಳಿಯಾಗಿತ್ತು. ಅಲ್​ಖೈದಾ ಉಗ್ರರು ವಿಮಾನ ಹೈಜಾಕ್ ​ಮಾಡಿ ದಾಳಿ ನಡೆಸಿದ್ದರು. ಉಗ್ರರ ದಾಳಿಯಲ್ಲಿ 2,977 ಜನರು ಮೃತಪಟ್ಟಿದ್ದರು. ದಾಳಿಗೆ ಸಂಚು ರೂಪಿಸಿದ ಆರೋಪದ ಮೇಲೆ ಅಮೆರಿಕವು 2011ರ ಮೇ 2ರಂದು ಒಸಾಮಾ ಬಿನ್​ ಲಾಡೆನ್​ನನ್ನು (Osama bin Laden) ಪಾಕಿಸ್ತಾನದ ಅಬೋಟಾಬಾದ್​ದಲ್ಲಿ (Abbottabad) ಹತ್ಯೆಗೈದಿದ್ದ ಪಾಕ್​ನ ಅಬೋಟಾಬಾದ್​ನಲ್ಲಿ ಅಡಗಿದ್ದವನನ್ನು ಕೊಂದಿತ್ತು. ಅಮೆರಿಕದ ನೇವಿ ಸೀಲ್​ ಪಡೆ ಲಾಡೆನ್​ನನ್ನು ಹತ್ಯೆಗೈದಿತ್ತು.

ಪರಿಸ್ಥಿತಿಯ ವ್ಯಂಗ್ಯವೆಂಬಂತೆ ಇಂದು (ಸೆಪ್ಟೆಂಬರ್​ 11) ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಉದ್ಘಾಟನೆಗೆ ವೇದಿಕೆ ಸಜ್ಜಾಗಿದೆ. ಆದರೆ ತಾಲಿಬಾನ್​ ಮೂಲಗಳ ಪ್ರಕಾರ ತಾಲಿಬಾನ್ ಸರ್ಕಾರ ಉದ್ಘಾಟನೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್ ವಿಡಿಯೋ ಸಂದೇಶ ಇಲ್ಲಿದೆ:

Also Read:

ಇಂದು ಅಫ್ಘಾನಿಸ್ತಾನದಲ್ಲಿ ನಡೆಯಬೇಕಿದ್ದ ತಾಲಿಬಾನ್ ಸರ್ಕಾರ ಉದ್ಘಾಟನೆ ಕ್ಯಾನ್ಸಲ್​​​; ​ ಕಾಬೂಲ್ ಏರ್​ಪೋರ್ಟ್ ಹೆಸರು ಬದಲಾವಣೆ
(September 11 2001 twin tower attack to commemorate 2,977 lives lost US president joe biden video message)