ಯುಎಸ್ ಮೇರಿಲ್ಯಾಂಡ್ ಮಾಂಟ್ಗೋಮೆರಿ ಕೌಂಟಿಯ ವಿದ್ಯುತ್​ ಲೈನ್​ಗಳ ಮೇಲೆ ಚಿಕ್ಕ ವಿಮಾನ ಪತನ, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 28, 2022 | 11:49 AM

ವಿದ್ಯುತ್ ಸಂಪರ್ಕ ಕಡಿತದಿಂದಾಗಿ 90,000 ಹೆಚ್ಚು ಮನೆಗಳು ಮತ್ತು ವಾಣಿಜ್ಯ ಮಳಿಗೆಗಳು ಪ್ರಭಾವಕ್ಕೊಳಗಾಗಿದ್ದವು ಎಂದು ವರದಿ ತಿಳಿಸಿದೆ. ಮಾಂಟ್ಗೋಮೆರಿಯ ಶೇಕಡ 25 ರಷ್ಟು ಭಾಗ ಕತ್ತಲೆಯಲ್ಲಿ ಮುಳುಗಿತ್ತು ಎಂದು ಹೇಳಲಾಗಿದೆ.

ಯುಎಸ್ ಮೇರಿಲ್ಯಾಂಡ್ ಮಾಂಟ್ಗೋಮೆರಿ ಕೌಂಟಿಯ ವಿದ್ಯುತ್​ ಲೈನ್​ಗಳ ಮೇಲೆ ಚಿಕ್ಕ ವಿಮಾನ ಪತನ, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
ವಿದ್ಯುತ್ ತಂತಿಗಳ ಮೇಲೆ ಅಪ್ಪಳಿಸಿರುವ ಚಿಕ್ಕ ವಿಮಾನ
Follow us on

ಅಮೆರಿಕದಲ್ಲಿ ಚಿಕ್ಕಗಾತ್ರದ ವಿಮಾನಗಳು ಹೆದ್ದಾರಿಗಳ ಮೇಲೆ ಇಲ್ಲವೇ ಜನನಿಬಿಡ ಪ್ರದೇಶಗಳಲ್ಲಿ ಪತನಗೊಳ್ಳುವುದು ಹೊಸದೇನಲ್ಲ. ಯುಎಸ್ ಬೇರೆ ಬೇರೆ ಸ್ಥಳಗಳಲ್ಲಿ ಇಂಥ ದುರ್ಘಟನೆಗಳು ಆಗಾಗ್ಗೆ ನಡೆಯುತ್ತಿರುತ್ತವೆ. ರವಿವಾರ ರಾತ್ರಿ ಮೇರಿಲ್ಯಾಂಡ್ ನ ಮಾಂಟ್ಗೋಮೆರಿ ಕೌಂಟಿಯಲ್ಲಿ (Montgomery County) ಚಿಕ್ಕವಿಮಾನವೊಂದು ವಿದ್ಯುತ್ ಲೈನ್ ಗಳ (power lines) ಮೇಲೆ ಅಪ್ಪಳ್ಳಿಸಿದ್ದರಿಂದ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ (power supply) ವ್ಯತ್ಯಯ ಉಂಟಾಗಿತ್ತು ಎಂದು ಸ್ಥಳೀಯ ಆಡಳಿತಗಳು ನೀಡಿರುವ ಮಾಹಿತಿಯನ್ನಾಧರಿಸಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ವಿದ್ಯುತ್ ಸಂಪರ್ಕ ಕಡಿತದಿಂದಾಗಿ 90,000 ಹೆಚ್ಚು ಮನೆಗಳು ಮತ್ತು ವಾಣಿಜ್ಯ ಮಳಿಗೆಗಳು ಪ್ರಭಾವಕ್ಕೊಳಗಾಗಿದ್ದವು ಎಂದು ವರದಿ ತಿಳಿಸಿದೆ. ಮಾಂಟ್ಗೋಮೆರಿಯ ಶೇಕಡ 25 ರಷ್ಟು ಭಾಗ ಕತ್ತಲೆಯಲ್ಲಿ ಮುಳುಗಿತ್ತು ಎಂದು ಹೇಳಲಾಗಿದೆ. ಗಮನಾರ್ಹ ಸಂಗತಿಯೇನೆಂದರೆ ವಿಮಾನ ದುರಂತದಲ್ಲಿ ಯಾರೂ ಗಾಯಗೊಂಡಿಲ್ಲ.

ಒಂದೇ ಸಮ ಮಳೆ ಸುರಿಯುತ್ತಿದ್ದ ಕಾರಣ ಮಾಂಟ್ಗೋಮೆರಿಯ ವಾಣಿಜ್ಯ ಪ್ರದೇಶದಲ್ಲಿ ವಿಮಾನ ಪತನಗೊಂಡಿದೆ ಎಂದು ಹೇಳಲಾಗುತ್ತಿದ್ದರೂ ತಾಂತ್ರಿಕ ದೋಷ ಎದುರಾದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಒಂದು ಅಂದಾಜಿನ ಪ್ರಕಾರ ಹತ್ತು ಅಂತಸ್ತುಗಳಷ್ಟು ಮೇಲಿದ್ದ ವಿದ್ಯುತ್ ಲೈನ್ ಗಳ ಮೇಲೆ ವಿಮಾನ ಬಿದ್ದಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಮಾಂಟ್ಗೋಮೆರಿ ಕೌಂಟಿಯ ಪೊಲೀಸ್ ಇಲಾಖೆ ಟ್ವಟಿರ್ ಮೂಲಕ ವಿಮಾನ ಪತನದ ಸುದ್ದ್ದಿಯನ್ನು ಖಚಿತಪಡಿಸಿದೆ: ‘ರಾತ್ಬ್ಯುರಿ ಡಿಆರ್ ಗೋಷನ್ ರಸ್ತೆ ಪ್ರದೇಶದ ಪವರ್ ಲೈನ್ ಗಳ ಮೇಲೆ ಚಿಕ್ಕ ವಿಮಾನವೊಂದು ಅಪ್ಪಳಿಸಿದ್ದರಿಂದ ಕೌಂಟಿಯ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಕಡಿದು ಬಿದ್ದಿರುವ ವೈರ್ ಗಳಲ್ಲಿ ವಿದ್ಯುತ್ ಪ್ರವಹಿಸುತ್ತಿರುವುದರಿಂದ ಜನ ಈ ಪ್ರದೇಶಗಳಲ್ಲಿ ಓಡಾಡಬಾರದು.’

ಎರಡು ತಿಂಗಳು ಹಿಂದೆ ಚಿಕ್ಕ ವಿಮಾನವೊಂದು ದಕ್ಷಿಣ ಕ್ಯಾಲಿಫೋರ್ನಿಯಾದ ಹೆದ್ದಾರಿಯೊಂದರಲ್ಲಿ ಅಪ್ಪಳಿಸಿದ್ದನ್ನು ಇಲ್ಲಿ ಜ್ಞಾಪಿಸಿಕೊಳ್ಳಬಹುದು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ