ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಮೇಲೆ ಇಂದು ಗುಂಡಿನ ದಾಳಿಯಾಗಿದೆ. ಜಪಾನ್‌ನ ನಾರಾ ಸಿಟಿಯಲ್ಲಿ ಬೆಳಗ್ಗೆ 11.30ರ ಸುಮಾರಿಗೆ (ಜಪಾನ್ ಕಾಲಮಾನ) ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ವೇಳೆ ಶಿಂಜೋ ಅಬೆ (Shinzo Abe) ಅವರ ಮೇಲೆ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದಾನೆ. ತಕ್ಷಣ ಕುಸಿದು ಬಿದ್ದ ಅಬೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಿರುವ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ, ಶಿಂಜೋ ಅಬೆ ಅವರ ಆರೋಗ್ಯ ಸ್ಥಿತಿ ಬಹಳ ಗಂಭೀರವಾಗಿದೆ. ಅವರನ್ನು ಉಳಿಸಲು ವೈದ್ಯರು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಅವರು ಬದುಕಬಹುದೆಂಬ ಭರವಸೆಯಿದೆ ಎಂದು ಹೇಳಿದ್ದಾರೆ.
“ಶಿಂಜೋ ಅಬೆ ಈ ಅಗ್ನಿಪರೀಕ್ಷೆಯಿಂದ ಬದುಕುಳಿಯಲಿ ಎಂದು ನಾನು ಹೃದಯಪೂರ್ವಕವಾಗಿ ಪ್ರಾರ್ಥಿಸುತ್ತಿದ್ದೇನೆ. ಚುನಾವಣೆ ಹಿನ್ನೆಲೆಯಲ್ಲೇ ಈ ಹಿಂಸಾತ್ಮಕ ಕೃತ್ಯ ನಡೆದಿದೆ ಎಂಬುದನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ” ಎಂದು ಜಪಾನ್ ಪ್ರಧಾನಿ ಕಿಶಿಡಾ ಹೇಳಿದ್ದಾರೆ.
High quality footage of the ex PM of Japan, Shinzo Abe being shot at from behind with an improvised double barreled shotgun .pic.twitter.com/5XFbUAjNUj
— Dr Moriarty (@aarjunx) July 8, 2022
ಇದನ್ನೂ ಓದಿ: Shinjo Abe: ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಮೇಲೆ ಗುಂಡಿನ ದಾಳಿ
ಗುಂಡಿನ ದಾಳಿಯಿಂದ ತೀವ್ರ ರಕ್ತಸ್ರಾವವಾಗಿ ಕುಸಿದ ಸ್ಥಳದಲ್ಲಿಯೇ ಕುಸಿದುಬಿದ್ದ ಶಿಂಜೊ ಅಬೆಯವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪೊಲೀಸರು ಗುಂಡಿನ ದಾಳಿ ನಡೆಸಿದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮುಂದಿನ ಭಾನುವಾರ (ಜುಲೈ 10) ಜಪಾನ್ ಸಂಸತ್ನ ಮೇಲ್ಮನೆಗೆ ಚುನಾವಣೆ ನಡೆಯಲಿದ್ದು, ಶಿಂಜೋ ಅಬೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಲಾಗಿದೆ.
Deeply distressed by the attack on my dear friend Abe Shinzo. Our thoughts and prayers are with him, his family, and the people of Japan.
— Narendra Modi (@narendramodi) July 8, 2022
ಜಪಾನ್ನಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಶಿಂಜೋ ಅಬೆ ಅವರ ಮೇಲೆ ಪಶ್ಚಿಮ ಜಪಾನ್‌ನ ನಾರಾ ನಗರದಲ್ಲಿ ಚುನಾವಣಾ ಪ್ರಚಾರದ ವೇಳೆ ಗುಂಡು ಹಾರಿಸಲಾಗಿದೆ. ಅವರನ್ನು ಉಳಿಸಲು ವೈದ್ಯರು ತಮ್ಮ ಕೈಲಾದಷ್ಟು ಶ್ರಮಿಸುತ್ತಿದ್ದಾರೆ ಎಂದು ಹಾಲಿ ಪ್ರಧಾನಿ ಫ್ಯೂಮಿಯೊ ಕಿಶಿಡಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 67 ವರ್ಷದ ಶಿಂಜೋ ಅಬೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮೊದಲು ಅವರಿಗೆ ಹೃದಯ ಸ್ತಂಭನವಾಗಿತ್ತು.
LATEST: Shooting suspect used 手製の銃 a hand made gun, per police report.
Shinzo #Abe speaking at that location was only decided last night. So unclear how attacker had time to plan, reports NHK. Footage is of the hospital. pic.twitter.com/mh0uHWolE3
— Kurumi Mori (@rumireports) July 8, 2022
ಇದನ್ನೂ ಓದಿ: ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಮೇಲೆ ಗುಂಡಿನ ದಾಳಿ, ಅಸ್ಪತ್ರೆಗೆ ದಾಖಲು
ನಾರಾ ಸಿಟಿಯ ನಿವಾಸಿ ಎನ್ನಲಾದ 41 ವರ್ಷದ ಟೆಟ್ಸುಯಾ ಯಮಗಾಮಿ ಎಂಬಾತನನ್ನು ಶಿಂಜೋ ಅಬೆ ಮೇಲೆ ಗುಂಡಿಕ್ಕಿ ಕೊಲೆ ಯತ್ನದ ಶಂಕೆಯ ಮೇಲೆ ಬಂಧಿಸಲಾಗಿದೆ. ಟಿವಿಯಲ್ಲಿ ಪ್ರಸಾರವಾದ ದೃಶ್ಯಗಳಲ್ಲಿ, ಶಿಂಜೋ ಅಬೆ ಗುಂಡೇಟಿನಿಂದ ಕುಸಿದು ಬೀಳುತ್ತಿರುವುದನ್ನು ಕಾಣಬಹುದು. ತಕ್ಷಣ ಹಲವಾರು ಭದ್ರತಾ ಸಿಬ್ಬಂದಿ ಅವರ ಕಡೆಗೆ ಓಡಿದ್ದಾರೆ. ಅಬೆ ಕುಸಿದು ಬಿದ್ದಾಗ ಅವರು ತಮ್ಮ ಎದೆಯನ್ನು ಗಟ್ಟಿಯಾಗಿ ಒತ್ತಿ ಹಿಡಿದಿರುವುದನ್ನು ನೋಡಬಹುದು. ಅವರ ಶರ್ಟ್ ಪೂರ್ತಿ ರಕ್ತದಿಂದ ತೊಯ್ದುಹೋಗಿತ್ತು.
Published On - 12:57 pm, Fri, 8 July 22