Shocking News: ಮಕ್ಕಳ ಮುಂದೆಯೇ ಪತ್ನಿಯನ್ನು ಕಡಾಯಿಯಲ್ಲಿ ಹಾಕಿ ಬೇಯಿಸಿ ಕೊಂದ ಕ್ರೂರ ಪತಿ

ಮಕ್ಕಳ ಮುಂದೆಯೇ ಪತ್ನಿಯನ್ನು ಕಡಾಯಿಯಲ್ಲಿ ಹಾಕಿ ಬೇಯಿಸಿ ಹತ್ಯೆ ಮಾಡಿರುವ ದುರ್ಘಟನೆ ಪಾಕಿಸ್ತಾನದ ಸಿಂದ್ ಪ್ರಾಂತ್ಯದಲ್ಲಿ ವರದಿಯಾಗಿದೆ. ಇದೊಂದು ಕ್ರೂರ ಕೃತ್ಯವಾಗಿದ್ದು, ವ್ಯಕ್ತಿಯೊಬ್ಬ ತನ್ನ ಆರು ಮಕ್ಕಳ ಮುಂದೆ ತನ್ನ ಹೆಂಡತಿಯನ್ನು ಕಡಾಯಿಯಲ್ಲಿ ಬೇಯಿಸಿ ಹತ್ಯೆ ಮಾಡಿದ್ದಾರೆ.

Shocking News: ಮಕ್ಕಳ ಮುಂದೆಯೇ ಪತ್ನಿಯನ್ನು ಕಡಾಯಿಯಲ್ಲಿ ಹಾಕಿ ಬೇಯಿಸಿ ಕೊಂದ ಕ್ರೂರ ಪತಿ
Fire
Edited By:

Updated on: Jul 14, 2022 | 9:56 PM

ಮಕ್ಕಳ ಮುಂದೆಯೇ ಪತ್ನಿಯನ್ನು ಕಡಾಯಿಯಲ್ಲಿ ಹಾಕಿ ಬೇಯಿಸಿ ಹತ್ಯೆ ಮಾಡಿರುವ ದುರ್ಘಟನೆ ಪಾಕಿಸ್ತಾನದ ಸಿಂದ್ ಪ್ರಾಂತ್ಯದಲ್ಲಿ ವರದಿಯಾಗಿದೆ. ಇದೊಂದು ಕ್ರೂರ ಕೃತ್ಯವಾಗಿದ್ದು, ವ್ಯಕ್ತಿಯೊಬ್ಬ ತನ್ನ ಆರು ಮಕ್ಕಳ ಮುಂದೆ ತನ್ನ ಹೆಂಡತಿಯನ್ನು ಕಡಾಯಿಯಲ್ಲಿ ಬೇಯಿಸಿ ಹತ್ಯೆ ಮಾಡಿದ್ದಾರೆ.

ಜಿಯೋ ನ್ಯೂಸ್ ಪ್ರಕಾರ, ಈ ಘಟನೆಯ ನಂತರ, ಪೊಲೀಸರು ಬುಧವಾರ ನಗರದ ಗುಲ್ಶನ್-ಎ-ಇಕ್ಬಾಲ್ ಪ್ರದೇಶದ ಖಾಸಗಿ ಶಾಲೆಯ ಅಡುಗೆಮನೆಯಲ್ಲಿ ಪ್ಯಾನ್‌ನಲ್ಲಿ ನರ್ಗೀಸ್ ಶವವನ್ನು ಪತ್ತೆ ಹಚ್ಚಿದ್ದಾರೆ.

ಪೊಲೀಸರ ಪ್ರಕಾರ, ಮಹಿಳೆಯ ಪತಿ ಶಾಲೆಯಲ್ಲಿ ವಾಚ್‌ಮನ್ ಆಗಿ ಕೆಲಸ ಮಾಡುತ್ತಿದ್ದರು ಮತ್ತು ಸುಮಾರು ಎಂಟರಿಂದ ಒಂಬತ್ತು ತಿಂಗಳಿನಿಂದ ಮುಚ್ಚಲ್ಪಟ್ಟ ಶಾಲೆಯ ಸೇವಕರ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದರು.

ಆಘಾತಕಾರಿ ಘಟನೆಯ ನಂತರ ಆಕೆಯ ಪತಿ ತಮ್ಮ ಮೂವರು ಮಕ್ಕಳೊಂದಿಗೆ ಪರಾರಿಯಾದಾಗ ಸಂತ್ರಸ್ತೆಯ 15 ವರ್ಷದ ಮಗಳು ಅವರಿಗೆ ಕರೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇತರೆ ಮೂರು ಮಕ್ಕಳನ್ನು ಪಾಲನೆ ಮಾಡುವ ಜವಾಬ್ದಾರಿ ಇದೀಗ ಪೊಲೀಸರ ಮೇಲಿದೆ. ಘಟನೆಯಿಂದ ಆಘಾತ ಹಾಗೂ ನೋವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಾಥಮಿಕ ತನಿಖೆ ಮತ್ತು ಮಕ್ಕಳ ಹೇಳಿಕೆಯನ್ನು ಪಡೆದಿರುವ ಪೊಲೀಸರು, ಬಾಣಲೆಯಲ್ಲಿ ಕುದಿಸುವ ಮೊದಲು ದಿಂಬಿನಿಂದ ಕತ್ತು ಹಿಸುಕಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮಹಿಳೆಯ ಒಂದು ಕಾಲು ಕೂಡ ದೇಹದಿಂದ ಬೇರ್ಪಡಿಸಲಾಗಿದೆ ಎಂದು ಅವರು ಹೇಳಿದರು. ಘಟನೆಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ, ಪತಿ ತನ್ನ ಪತ್ನಿಯನ್ನು ಅಕ್ರಮ ಸಂಬಂಧಕ್ಕೆ ಬಲವಂತಪಡಿಸಿದ್ದು, ಅದಕ್ಕೆ ನಿರಾಕರಿಸಿದ್ದಕ್ಕೆ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಊಹಿಸಲಾಗಿದೆ. ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಗಾಳ ಬೀಸಲಾಗುತ್ತಿದೆ.

Published On - 9:55 pm, Thu, 14 July 22