ಕ್ಯಾಲಿಫೋರ್ನಿಯಾದಲ್ಲಿ ಅಂಗಡಿ ಲೂಟಿ ಮಾಡಿದ ಕಳ್ಳನಿಗೆ ಹಿಗ್ಗಾಮುಗ್ಗ ಥಳಿಸಿದ ಸಿಖ್ ವ್ಯಕ್ತಿ; ಕೃತ್ಯದ ವಿಡಿಯೊ ವೈರಲ್
ನೀಲಿ ಮಂಕಿ ಕ್ಯಾಪ್ ಧರಿಸಿದ ವ್ಯಕ್ತಿಯೊಬ್ಬ ಸಿಗರೇಟ್ ಮತ್ತು ತಂಬಾಕು ಪ್ಯಾಕೆಟ್ ಗಳನ್ನು ಬಾಸ್ಕೆಟ್ ಗೆ ಹಾಕಿ ಅದನ್ನು ತಳ್ಳುತ್ತಾ ಹೋಗುತ್ತಿರುವುದು ವಿಡಿಯೊದಲ್ಲಿ ಕಾಣಿಸುತ್ತದೆ. ಅಷ್ಟರಲ್ಲಿ ಅಂಗಡಿಯ ನೌಕರ ಆತನನ್ನು ಹಿಡಿದು ನೆಲಕ್ಕೆ ಬೀಳಿಸುತ್ತಾನೆ.
ಕ್ಯಾಲಿಫೋರ್ನಿಯಾ ಆಗಸ್ಟ್ 04: ದರೋಡೆಗಳು ಹೊಸ ಸುದ್ದಿಯಲ್ಲ. ಆದರೆ ಕ್ಯಾಲಿಫೋರ್ನಿಯಾದ (California) ಅಂಗಡಿಯೊಂದರಲ್ಲಿ ಕಳ್ಳ ಲೂಟಿ ಮಾಡುತ್ತಿರುವುದು, ಅದನ್ನು ಗಮನಿಸಿದ ಅಂಗಡಿ ಮಾಲೀಕ ಮತ್ತು ನೌಕರ ಸೇರಿ ಕಳ್ಳನಿಗೆ ಹಿಗ್ಗಾಮುಗ್ಗ ಥಳಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral video) ಆಗಿದೆ. ನೀಲಿ ಮಂಕಿ ಕ್ಯಾಪ್ ಧರಿಸಿದ ವ್ಯಕ್ತಿಯೊಬ್ಬ ಸಿಗರೇಟ್ ಮತ್ತು ತಂಬಾಕು ಪ್ಯಾಕೆಟ್ ಗಳನ್ನು ಬಾಸ್ಕೆಟ್ಗೆ ಹಾಕಿ ಅದನ್ನು ತಳ್ಳುತ್ತಾ ಹೋಗುತ್ತಿರುವುದು ವಿಡಿಯೊದಲ್ಲಿ ಕಾಣಿಸುತ್ತದೆ. ಅಷ್ಟರಲ್ಲಿ ಅಂಗಡಿಯ ನೌಕರ ಆತನನ್ನು ಹಿಡಿದು ನೆಲಕ್ಕೆ ಬೀಳಿಸುತ್ತಾನೆ. ಆಗ ಸಿಖ್ ವ್ಯಕ್ತಿಯೊಬ್ಬರು ದೊಡ್ಡ ದೊಣ್ಣೆಯಿಂದ ಕಳ್ಳನಿಗೆ ಹಿಗ್ಗಾಮುಗ್ಗ ಥಳಿಸುತ್ತಾರೆ.
ವಿಡಿಯೊವನ್ನು ಚಿತ್ರೀಕರಿಸಿದ ವ್ಯಕ್ತಿ ಕಳ್ಳನನ್ನು ಬಿಡುವಂತೆ ಅಂಗಡಿಯ ಮಾಲೀಕರಿಗೆ ಸಲಹೆ ನೀಡುತ್ತಾರೆ. ಅದೇ ವೇಳೆ ಪೊಲೀಸರು ಬರುವವರೆಗೆ ಏನೂ ಮಾಡಲಾಗುವುದಿಲ್ಲ ಎಂದು ಹೇಳಿ ಅಂಗಡಿಯ ಮಾಲೀಕರ ಕಾರ್ಯಗಳನ್ನು ಪ್ರಶಂಸಿಸಿದ್ದಾರೆ.
ಇದನ್ನೂ ಓದಿ: Mexico Bus Accident: ಬಸ್ ಕಂದಕಕ್ಕೆ ಬಿದ್ದು ಭಾರತೀಯರು ಸೇರಿ 18 ಮಂದಿ ಸಾವು, 20 ಜನರಿಗೆ ಗಂಭೀರ ಗಾಯ
ಅದನ್ನು ವಾಪಸ್ ಕೊಡು ಎಂದು ಹೇಳುತ್ತಿರುವುದು ವಿಡಿಯೊದಲ್ಲಿದೆ. ಆಗ ಕಳ್ಳ ನನ್ನನ್ನು ಬಿಟ್ಟು ಬಿಡಿ ಎಂದು ಅಂಗಾಲಾಚುತ್ತಾನೆ. ಆತ ಪರಿಪರಿಯಾಗಿ ಬೇಡಿಕೊಳ್ಳುತ್ತಿರುವಾಗ ಅಂಗಡಿಯವರು ಆತನನ್ನು ದಬಾಯಿಸುತ್ತಾರೆ. ಹೀಗೆ ಹೇಳುವಾಗ ನನಗೊಂದು ಸೋಡಾ ಸಿಗಬಹುದೇ ಎಂದು ಆತ ಕೇಳುತ್ತಾನೆ. ಅದೇನು ಹೇಳುತ್ತಿದ್ದೀ? ನೀನು ಇದೆಲ್ಲ ಮಾಡಿ ಸೋಡಾ ಕೇಳುತ್ತಿದ್ದೀಯಾ? ಇಲ್ಲಿ ಆಚೆ ಹೊರಡು ಎಂದು ಅಲ್ಲಿದ್ದ ವ್ಯಕ್ತಿ ಗದರಿಸುತ್ತಿರುವುದು ವಿಡಿಯೊದಲ್ಲಿದೆ.
ಘಟನೆ ಎಲ್ಲಿ ನಡೆದಿದೆ ಎಂಬುದು ಸಂಪೂರ್ಣವಾಗಿ ಸ್ಪಷ್ಟವಾಗಿಲ್ಲವಾದರೂ, ವಿಡಿಯೊದ ಆರಂಭದಲ್ಲಿ ಗೋಚರಿಸುವ ಲಾಟರಿ ಸಂಖ್ಯೆಗಳು ಇದು ಕ್ಯಾಲಿಫೋರ್ನಿಯಾದಲ್ಲಿ ಸಂಭವಿಸಿದೆ ಎಂದು ಸೂಚಿಸುತ್ತದೆ. ಇದು ಸ್ಯಾಕ್ರಮೆಂಟೊದಿಂದ ದಕ್ಷಿಣಕ್ಕೆ 50 ಮೈಲುಗಳಷ್ಟು ದೂರದಲ್ಲಿರುವ ಸ್ಟಾಕ್‌ಟನ್‌ನಲ್ಲಿ ಸಂಭವಿಸಿದೆ ಎಂದು ಕ್ಯಾಮರಾಮನ್ ಹೇಳಿಕೊಂಡಿದ್ದಾನೆ. ಆದರೆ ಬುಧವಾರ ರಾತ್ರಿವರೆಗೆ ಪೊಲೀಸ್ ಇಲಾಖೆಗೆ ಈ ಘಟನೆ ಬಗ್ಗೆ ತಿಳಿದಿರಲಿಲ್ಲ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ
7-Eleven ಸ್ಟೋರ್ ನ್ಲಲಿ ಈ ಘಟನೆ ನಡೆದಿದ್ದು, ಅಲ್ಲನ ಉದ್ಯೋಗಿಗಳು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿ ಉಲ್ಲೇಖಿಸಿದೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:09 pm, Fri, 4 August 23