ಸಿಂಗಾಪುರದಲ್ಲಿ ಕ್ರೂಸ್​ನಿಂದ ಬಿದ್ದು ಭಾರತೀಯ ಮಹಿಳೆ ಸಾವು

ಸಿಂಗಾಪುರ(Singapore)ದಲ್ಲಿ ಕ್ರೂಸ್ ನಲ್ಲಿ ಹೋಗುವಾಗ ಬಿದ್ದು ಭಾರತೀಯ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

ಸಿಂಗಾಪುರದಲ್ಲಿ ಕ್ರೂಸ್​ನಿಂದ ಬಿದ್ದು ಭಾರತೀಯ ಮಹಿಳೆ ಸಾವು
ಕ್ರೂಸ್​( ಸಾಂದರ್ಭಿಕ ಚಿತ್ರ)
Image Credit source: India Today

Updated on: Aug 02, 2023 | 8:56 AM

ಸಿಂಗಾಪುರ(Singapore)ದಲ್ಲಿ ಕ್ರೂಸ್ ನಲ್ಲಿ ಹೋಗುವಾಗ ಬಿದ್ದು ಭಾರತೀಯ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ರಾಯಲ್ ಕೆರಿಬಿಯನ್ ಕ್ರೂಸ್‌ನಿಂದ ಬಿದ್ದು ಭಾರತೀಯ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮೆಲ್ಬೋರ್ನ್ ಮೂಲದ ಉದ್ಯಮಿಯಾಗಿರುವ ಅವರ ಮಗ, ತನ್ನ ತಾಯಿಯನ್ನು ಪತ್ತೆಹಚ್ಚಲು ಸಹಾಯ ಕೋರಿ ಭಾರತ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.

ಅಪೂರ್ವ ಸಹಾನಿ ಎಂಬ ವ್ಯಕ್ತಿ ಟ್ವಿಟ್ಟರ್​ನಲ್ಲಿ ಕಾಣೆಯಾದ ತನ್ನ ತಾಯಿಯನ್ನು ಹುಡುಕಲು ಸಹಾಯ ಮಾಡಿ ಎಂದು ಪ್ರಧಾನ ಮಂತ್ರಿ ಕಚೇರಿಗೆ ಮನವಿ ಮಾಡಿದ್ದರು. ತನ್ನ ತಾಯಿ ಸಿಂಗಾಪುರದಿಂದ ರಾಯಲ್ ಕೆರೆಬಿಯನ್ ಕ್ರೈಸ್​ನಲ್ಲಿ ಪ್ರಯಾಣಿಸುತ್ತಿದ್ದರು. ಹಡಗಿನಿಂದ ನಾಪತ್ತೆಯಾಗಿದ್ದಾರೆ. ಅವರು ಹಾರಿದ್ದಾರೆ ಎಂದು ಕ್ರೂಸ್ ಸಿಬ್ಬಂದಿ ಹೇಳುತ್ತಿದ್ದಾರೆ. ಆದರೆ ನಮಗೆ ಯಾವುದೇ ದೃಶ್ಯವನ್ನು ತೋರಿಸುತ್ತಿಲ್ಲ ಎಂದು ವಿದೇಶಾಂಗ ಸಚಿವ ಎಸ್​ ಜೈಶಂಕರ್​ಗೆ ಟ್ವಿಟ್ಟರ್​ನಲ್ಲಿ ಟ್ಯಾಗ್ ಮಾಡಿ ಮನವಿ ಮಾಡಿದ್ದಾರೆ.

ಕಾಣೆಯಾದ ಪತ್ನಿಯನ್ನು ಹಡುಕಲು ಸಹಾಯ ಮಾಡದೆ ಅವರ ತಂದೆಯನ್ನು ಕ್ರೂಸ್​ನಿಂದ ಹೊರಹಾಕಿದ್ದಾರೆ, ಅವರು ಯಾವುದೇ ರಕ್ಷಣಾ ಕಾರ್ಯ ನಡೆಸಿಲ್ಲ, ಕ್ರೂಸ್ ಲೈನರ್ ಅಂತಿಮವಾಗಿ ತನ್ನೊಂದಿಗೆ ತುಣುಕನ್ನು ಹಂಚಿಕೊಂಡರು ಮತ್ತು ಅವರ ತಾಯಿ ಸತ್ತಿದ್ದಾರೆ ಎಂದು ದೃಢಪಡಿಸಿದರು.

ಮತ್ತಷ್ಟು ಓದಿ: Europa 2: ನವಮಂಗಳೂರು ಬಂದರಿಗೆ ಆಗಮಿಸಿದ ಕ್ರೂಸ್ ಹಡಗು

ನನ್ನ ಕುಟುಂಬಕ್ಕೆ ಈ ಸಂಕಷ್ಟದ ಸಮಯದಲ್ಲಿ ನಿಮ್ಮ ಅಗಾಧ ಬೆಂಬಲವನ್ನು ತೋರಿಸಿದ್ದಕ್ಕಾಗಿ ಧನ್ಯವಾದಗಳು ಮತ್ತು ನಾನು ಎಂದೆಂದಿಗೂ ಕೃತಜ್ಞರಾಗಿರುತ್ತೇನೆ. ಕ್ರೂಸ್ ಲೈನರ್ ಅಂತಿಮವಾಗಿ ನಮ್ಮೊಂದಿಗೆ ತುಣುಕನ್ನು ಹಂಚಿಕೊಂಡಿದೆ ಮತ್ತು ಹುಡುಕಾಟವೂ ನಡೆಯುತ್ತಿದೆ.

ಸ್ಟ್ರೈಟ್ ಟೈಮ್ಸ್ ವರದಿಯ ಪ್ರಕಾರ, ಅಪೂರ್ವ್ ಸಹಾನಿ ಅವರ ತಾಯಿ ರೀತಾ ಸಹಾನಿ ಅವರು ತಮ್ಮ ಪತಿ ಜಾಕೇಶ್ ಸಹಾನಿ ಅವರೊಂದಿಗೆ “ಸ್ಪೆಕ್ಟ್ರಮ್ ಆಫ್ ದಿ ಸೀಸ್” ಕ್ರೂಸ್ ಹಡಗಿನಲ್ಲಿ ಸಿಂಗಾಪುರಕ್ಕೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:52 am, Wed, 2 August 23