AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಚ್ಚು ಮಕ್ಕಳನ್ನು ಹೆರುವಂತೆ ಯುವ ಜನತೆಗೆ ಸಲಹೆ ನೀಡಿದ ಸಿಂಗಾಪುರ ಪ್ರಧಾನಿ ಲೀ

ಸಿಂಗಾಪುರದಲ್ಲಿ ಜನನ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಹೆಚ್ಚು ಮಕ್ಕಳನ್ನು ಹೆರುವಂತೆ ಪ್ರಧಾನಿ ಲೀ ಸಿಯೆನ್ ಲೂಂಗ್ ಸಲಹೆ ನೀಡಿದ್ದಾರೆ. ಸಿಂಗಾಪುರದಲ್ಲಿ ಚೀನೀ ಹೊಸ ವರ್ಷವನ್ನು ಫೆಬ್ರವರಿ 10-11 ರಂದು ಆಚರಿಸುತ್ತಿದ್ದಾರೆ. ಅಂದು ಹೆಚ್ಚುವರಿ ರಜೆಯನ್ನು ಘೋಷಿಸಲಾಗಿದೆ. 2022 ರಲ್ಲಿ, ಸಿಂಗಾಪುರವು 2020 ಮತ್ತು 2021 ರಲ್ಲಿ ಜನನ ದರ 1.1 ಮತ್ತು 1.12 ಇತ್ತು ಅದು ಈಗ 1.05 ಕಡಿಮೆ ಜನನ ಪ್ರಮಾಣವನ್ನು ದಾಖಲಿಸಿದೆ.

ಹೆಚ್ಚು ಮಕ್ಕಳನ್ನು ಹೆರುವಂತೆ ಯುವ ಜನತೆಗೆ ಸಲಹೆ ನೀಡಿದ ಸಿಂಗಾಪುರ ಪ್ರಧಾನಿ ಲೀ
ಸಿಂಗಾಪುರ ಪ್ರಧಾನಿ ಲೀ
ನಯನಾ ರಾಜೀವ್
|

Updated on:Feb 09, 2024 | 11:47 AM

Share

ಜಗತ್ತಿನ ಜನಸಂಖ್ಯೆ(Population) ಎಂಟು ನೂರು ಕೋಟಿ ಮೀರಿದೆ. ಹಲವಾರು ದೇಶಗಳು ಹೆಚ್ಚುತ್ತಿರುವ ಜನಸಂಖ್ಯೆಯ ಬಗ್ಗೆ ಚಿಂತಿತರಾಗಿದ್ದಾರೆ ಮತ್ತು ಅನೇಕ ದೇಶಗಳು ಜನಸಂಖ್ಯೆಯನ್ನು ಹೆಚ್ಚಿಸುವ ಕುರಿತು ಅಭಿಯಾನ ಹಾಗೂ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ. ಹಾಗೆಯೇ ಸಿಂಗಾಪುರ ಪ್ರಧಾನಿ ಲೀ ಹೆಚ್ಚು ಮಕ್ಕಳನ್ನು ಹೆರುವಂತೆ ಯುವ ಜನತೆಗೆ ಸಲಹೆ ನೀಡಿದ್ದಾರೆ.  ವಾಸ್ತವವಾಗಿ, ಚೀನೀ ಕ್ಯಾಲೆಂಡರ್ ಪ್ರಕಾರ ಈ ವರ್ಷ ಫೆಬ್ರವರಿ 10 ರಿಂದ ಪ್ರಾರಂಭವಾಗಲಿದೆ. ಚೀನೀ ಮೂಲದ ಅನೇಕ ಕುಟುಂಬಗಳು ಡ್ರ್ಯಾಗನ್ ವರ್ಷದಲ್ಲಿ ಜನಿಸಿದ ಮಕ್ಕಳನ್ನು ಮಂಗಳಕರವೆಂದು ಪರಿಗಣಿಸಿ, ಮಕ್ಕಳನ್ನು ಹೊಂದಲು ಸರ್ಕಾರ ಒತ್ತಾಯಿಸಿದೆ.

ಚೀನೀ ಕ್ಯಾಲೆಂಡರ್ 2024 ಈ ವರ್ಷ 10 ಫೆಬ್ರವರಿ 2024 ರಿಂದ ಪ್ರಾರಂಭವಾಗಲಿದೆ ಮತ್ತು ಚೀನೀ ಜಾತಕದ ಪ್ರಕಾರ, ಈ ವರ್ಷವನ್ನು ‘ಡ್ರ್ಯಾಗನ್ ವರ್ಷ’ ಎಂದು ಕರೆಯಲಾಗುತ್ತದೆ. ಚೀನೀ ಪುರಾಣದಲ್ಲಿ ಡ್ರ್ಯಾಗನ್ ಧೈರ್ಯ, ಸೃಜನಶೀಲತೆ ಮತ್ತು ನಾವೀನ್ಯತೆಯನ್ನು ಪ್ರತಿನಿಧಿಸುವ ಶಕ್ತಿಯುತ ಮತ್ತು ಮಂಗಳಕರ ಸಂಕೇತವೆಂದು ಪರಿಗಣಿಸಲಾಗಿದೆ.

ಫೆಬ್ರವರಿ 10 ರಂದು ಪ್ರಧಾನಿ ಲೀ ಅವರ ಜನ್ಮದಿನ, ಅದೇ ದಿನ ಡ್ರ್ಯಾಗನ್ ವರ್ಷ ಪ್ರಾರಂಭವಾಗುತ್ತದೆ. ಅವರು 1952 ರಲ್ಲಿ, ಡ್ರ್ಯಾಗನ್ ವರ್ಷದಲ್ಲಿ ಜನಿಸಿದರು. ಮಕ್ಕಳ ಆರೈಕೆ ಮತ್ತು ಕೆಲಸದ ಜೀವನದ ನಡುವಿನ ಸಮತೋಲನವನ್ನು ಕಾಪಾಡಿಕೊಳ್ಳಲು, ಎರಡು ವಾರಗಳಿಂದ ನಾಲ್ಕು ವಾರಗಳವರೆಗೆ ನೀಡಲು ಕ್ರಮ ಕೈಗೊಳ್ಳಲಾಗಿದೆ, ಈ ಕ್ರಮಗಳು ಪೋಷಕರ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ.

ಮತ್ತಷ್ಟು ಓದಿ: World Population Day 2023: ವಿಶ್ವ ಜನಸಂಖ್ಯಾ ದಿನದ ಆಚರಣೆಯ ಹಿಂದಿನ ಕಾರಣ, ಮಹತ್ವ

ಅಂತಿಮವಾಗಿ ದಂಪತಿಗೆ ಬಿಟ್ಟ ನಿರ್ಧಾರ ದಂಪತಿ ಹೆಚ್ಚು ಮಕ್ಕಳನ್ನು ಹೊಂದಬೇಕೆಂದು ನಾನು ಹೇಳುತ್ತೇನೆ ಆದರೆ ಆದರೆ, ಅಂತಿಮವಾಗಿ ದಂಪತಿಗಳು ಮಕ್ಕಳನ್ನು ಹೊಂದಬೇಕೆ ಅಥವಾ ಬೇಡವೇ ಎಂದು ನಿರ್ಧರಿಸುತ್ತಾರೆ.

2022ರಲ್ಲಿ ಜನನ ದರ ತೀರಾ ಕಡಿಮೆಯಾಗಿದೆ, 2020ರಲ್ಲಿ 1.1 ಹಾಗೂ 2021ರಲ್ಲಿ 1.12ರಷ್ಟಿತ್ತು. ಕುಟುಂಬ ಜೀವನದ ಪ್ರಮುಖ ಅಂಶವೆಂದರೆ ಮಕ್ಕಳನ್ನು ಹೊಂದುವುದು ಮತ್ತು ಬೆಳೆಸುವುದು. ಮಕ್ಕಳನ್ನು ಈ ಜಗತ್ತಿಗೆ ಕರೆತರುವುದು ಮತ್ತು ಅವರನ್ನು ವಿದ್ಯಾವಂತರನ್ನಾಗಿ ಮಾಡುವುದು ಅವರನ್ನು ಎತ್ತರಕ್ಕೆ ಬೆಳೆಯುವುದನ್ನು ನೋಡಿಯೇ ಪೋಷಕರು ಖುಷಿ ಪಡುತ್ತಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:21 am, Fri, 9 February 24

ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್