Sign In

By signing in or creating an account, you agree with Associated Broadcasting Company's Terms & Conditions and Privacy Policy.

World Population: 2023ರಲ್ಲಿ ವಿಶ್ವದ ಜನಸಂಖ್ಯೆ ಎಷ್ಟು ಹೆಚ್ಚಾಗಿದೆ ಇಲ್ಲಿದೆ ಮಾಹಿತಿ

ಕಳೆದ ವರ್ಷ ವಿಶ್ವದ ಜನಸಂಖ್ಯೆಯು 75 ಮಿಲಿಯನ್ ಹೆಚ್ಚಾಗಿದೆ ಮತ್ತು ಹೊಸ ವರ್ಷದ ದಿನದಂದು ಒಟ್ಟು ಜಾಗತಿಕ ಜನಸಂಖ್ಯೆಯು ಎಂಟು ಬಿಲಿಯನ್ ಮೀರುವ ನಿರೀಕ್ಷೆಯಿದೆ. ಯುಎಸ್ ಸೆನ್ಸಸ್ ಬ್ಯೂರೋ ಗುರುವಾರ ಬಿಡುಗಡೆ ಮಾಡಿದ ಡೇಟಾದಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ. ಜನಗಣತಿ ಬ್ಯೂರೊದ ಮಾಹಿತಿಯ ಪ್ರಕಾರ, ಕಳೆದ ವರ್ಷ ವಿಶ್ವಾದ್ಯಂತ ಜನಸಂಖ್ಯೆಯ ಬೆಳವಣಿಗೆ ದರವು ಶೇಕಡಾ ಒಂದಕ್ಕಿಂತ ಕಡಿಮೆಯಿತ್ತು.

World Population: 2023ರಲ್ಲಿ ವಿಶ್ವದ ಜನಸಂಖ್ಯೆ ಎಷ್ಟು ಹೆಚ್ಚಾಗಿದೆ ಇಲ್ಲಿದೆ ಮಾಹಿತಿ
Follow us
ನಯನಾ ರಾಜೀವ್
|

Updated on: Dec 29, 2023 | 10:25 AM

ಕಳೆದ ವರ್ಷ ವಿಶ್ವದ ಜನಸಂಖ್ಯೆ(World Population)ಯು 75 ಮಿಲಿಯನ್ ಹೆಚ್ಚಾಗಿದೆ ಮತ್ತು ಹೊಸ ವರ್ಷದ ದಿನದಂದು ಒಟ್ಟು ಜಾಗತಿಕ ಜನಸಂಖ್ಯೆಯು ಎಂಟು ಬಿಲಿಯನ್ ಮೀರುವ ನಿರೀಕ್ಷೆಯಿದೆ. ಯುಎಸ್ ಸೆನ್ಸಸ್ ಬ್ಯೂರೋ ಗುರುವಾರ ಬಿಡುಗಡೆ ಮಾಡಿದ ಡೇಟಾದಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ. ಜನಗಣತಿ ಬ್ಯೂರೊದ ಮಾಹಿತಿಯ ಪ್ರಕಾರ, ಕಳೆದ ವರ್ಷ ವಿಶ್ವಾದ್ಯಂತ ಜನಸಂಖ್ಯೆಯ ಬೆಳವಣಿಗೆ ದರವು ಶೇಕಡಾ ಒಂದಕ್ಕಿಂತ ಕಡಿಮೆಯಿತ್ತು.

2024 ರ ಆರಂಭದ ವೇಳೆಗೆ, ಪ್ರಪಂಚದಾದ್ಯಂತ ಪ್ರತಿ ಸೆಕೆಂಡಿಗೆ 4.3 ಮಕ್ಕಳು ಜನಿಸುತ್ತಾರೆ ಮತ್ತು ಇಬ್ಬರು ಸಾಯುತ್ತಾರೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ ಅಮೆರಿಕದ ಜನಸಂಖ್ಯೆಯ ಬೆಳವಣಿಗೆ ದರವು 0.53 ಪ್ರತಿಶತದಷ್ಟಿತ್ತು, ಇದು ಪ್ರಪಂಚದಾದ್ಯಂತದ ಬೆಳವಣಿಗೆಯ ದರದ ಅರ್ಧದಷ್ಟು. ಈ ವರ್ಷ ಅಮೆರಿಕದ ಜನಸಂಖ್ಯೆ 17 ಲಕ್ಷ ಹೆಚ್ಚಿದ್ದು, ಹೊಸ ವರ್ಷದಂದು ಅದರ ಒಟ್ಟು ಜನಸಂಖ್ಯೆ 33 ಕೋಟಿ 58 ಲಕ್ಷ ಆಗಲಿದೆ.

ಬ್ರೂಕಿಂಗ್ಸ್ ಇನ್‌ಸ್ಟಿಟ್ಯೂಷನ್‌ನ ಜನಸಂಖ್ಯಾಶಾಸ್ತ್ರಜ್ಞ ವಿಲಿಯಂ ಫ್ರೇ, ಈ ದಶಕದ ಅಂತ್ಯದವರೆಗೆ ಜನಸಂಖ್ಯೆಯ ಬೆಳವಣಿಗೆಯ ಪ್ರಸ್ತುತ ವೇಗವು ಮುಂದುವರಿದರೆ, ಜನಸಂಖ್ಯೆಯ ಬೆಳವಣಿಗೆಯ ವಿಷಯದಲ್ಲಿ 2020 ರ ದಶಕವು ಅಮೆರಿಕದ ಇತಿಹಾಸದಲ್ಲಿ ನಿಧಾನಗತಿಯ ದಶಕವಾಗಬಹುದು ಎಂದು ಹೇಳಿದರು. 2030 ರಿಂದ 2030 ರವರೆಗೆ, ಬೆಳವಣಿಗೆಯ ದರವು ನಾಲ್ಕು ಪ್ರತಿಶತಕ್ಕಿಂತ ಕಡಿಮೆಯಿರಬಹುದು.

ಮತ್ತಷ್ಟು ಓದಿ: World Population Day 2023: ವಿಶ್ವ ಜನಸಂಖ್ಯಾ ದಿನದ ಆಚರಣೆಯ ಹಿಂದಿನ ಕಾರಣ, ಮಹತ್ವ

ಕಳೆದ ವರ್ಷದಲ್ಲಿ ವಿಶ್ವಾದ್ಯಂತ ಬೆಳವಣಿಗೆ ದರವು ಕೇವಲ ಶೇ.1ಕ್ಕಿಂತ ಕಡಿಮೆ ಇತ್ತು.2024ರ ಆರಂಭದಲ್ಲಿ ಪ್ರತಿ 9 ಸೆಕೆಂಡುಗಳಿಗೆ ಒಂದು ಜನನವನ್ನು ಮತ್ತು ಪ್ರತಿ 9.5 ಸೆಕೆಂಡಿಗೆ ಒಂದು ಸಾವು ಸಂಭವಿಸಬಹುದು.

ಜೀವಿತಾವಧಿ ಹೆಚ್ಚಳ ಮತ್ತು ಮಕ್ಕಳನ್ನು ಪಡೆಯುವ ಸಾಮರ್ಥ್ಯವುಳ್ಳ ಗಂಡು-ಹೆಣ್ಣಿನ ಸಂಖ್ಯೆಯನ್ನು ಗಮನಿಸಿದಲ್ಲಿ ವಿಶ್ವದ ಜನಸಂಖ್ಯೆಯು 2030ರಲ್ಲಿ ಸುಮಾರು 8.5 ಶತಕೋಟಿ, 2050ರ ಹೊತ್ತಿಗೆ 9.7 ಶತಕೋಟಿ ಮತ್ತು 2080ರ ವೇಳೆಗೆ 10.4 ಶತಕೋಟಿ ತಲುಪಲಿದೆ.

ಅದೇ ರೀತಿ 2100ರ ಹೊತ್ತಿಗೆ ಜಾಗತಿಕ ಸಂಖ್ಯೆಯು 8.8 ಶತಕೋಟಿಗೆ ಕುಸಿಯಲಿದೆ ಎಂದು ಅಮೆರಿಕ ಮೂಲದ ಹೆಲ್ತ್‌ ಮೆಟ್ರಿಕ್ಸ್‌ ಆ್ಯಂಡ್‌ ಇವ್ಯಾಲುಯೇಷನ್‌ ಸಂಸ್ಥೆಯು ಅಂದಾಜಿಸಿದೆ.

ಚೀನಾದ 140 ಕೋಟಿ ಜನಸಂಖ್ಯೆಯು ಕ್ರಮೇಣವಾಗಿ ಇಳಿಕೆಯಾಗಲಿದೆ. 2050ರ ವೇಳೆಗೆ ಇದು 130 ಕೋಟಿಗೆ ತಗ್ಗಲಿದೆ. ಈ ಶತಮಾನದ ಅಂತ್ಯಕ್ಕೆ ಚೀನಾ ಜನಸಂಖ್ಯೆ ಕೇವಲ 800 ಮಿಲಿಯನ್‌ಗೆ ಇಳಿಕೆಯಾಗಲಿದೆ. ಪ್ರಸ್ತುತ ಚೀನಾಕ್ಕಿಂತ ಕೊಂಚ ಹಿಂದಿರುವ ಭಾರತದ ಜನಸಂಖ್ಯೆಯು 2023ರಲ್ಲಿ ನೆರೆಯ ದೇಶವನ್ನು ಹಿಂದಿಕ್ಕುವ ನಿರೀಕ್ಷೆ ಇದೆ. 2050ರ ವೇಳೆಗೆ ಇದು 170 ಕೋಟಿ ದಾಟಲಿದೆ. ದೇಶದಲ್ಲಿನ ಜನರ ಫಲವತ್ತತೆ ಶಕ್ತಿ ಈಗಾಗಲೇ ಸಾಕಷ್ಟು ಇಳಿಕೆಯಾಗಿದ್ದರೂ, ಜನಸಂಖ್ಯೆಯ ಏರಿಕೆಯ ಗತಿ ನಿಯಂತ್ರಣಕ್ಕೆ ಬರುವುದಿಲ್ಲ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ
ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್
ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್
ಪಹಲ್ಗಾಮ್​ ಉಗ್ರರ ದಾಳಿ: ಗುಪ್ತಚರ ಇಲಾಖೆ ವೈಫಲ್ಯ ಎಂದ ಸಿದ್ದರಾಮಯ್ಯ
ಪಹಲ್ಗಾಮ್​ ಉಗ್ರರ ದಾಳಿ: ಗುಪ್ತಚರ ಇಲಾಖೆ ವೈಫಲ್ಯ ಎಂದ ಸಿದ್ದರಾಮಯ್ಯ
ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ
ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ
ವಯಸ್ಸಾದವರು ಅಪಾಯದಿಂದ ಪಾರಾಗಲು ಬಹಳ ಕಷ್ಟಪಟ್ಟರು: ದೊಡ್ಡಬಸಯ್ಯ
ವಯಸ್ಸಾದವರು ಅಪಾಯದಿಂದ ಪಾರಾಗಲು ಬಹಳ ಕಷ್ಟಪಟ್ಟರು: ದೊಡ್ಡಬಸಯ್ಯ
ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್​ಗೆ ಅಮಿತ್​ ಶಾ ಭೇಟಿ
ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್​ಗೆ ಅಮಿತ್​ ಶಾ ಭೇಟಿ
ಉಗ್ರರ ಮನಸ್ಥಿತಿ, ಉದ್ದೇಶ ಏನಾಗಿತ್ತು ಅಂತ ಈಗಲೇ ಹೇಳಲಾಗದು: ಜಾರಕಿಹೊಳಿ
ಉಗ್ರರ ಮನಸ್ಥಿತಿ, ಉದ್ದೇಶ ಏನಾಗಿತ್ತು ಅಂತ ಈಗಲೇ ಹೇಳಲಾಗದು: ಜಾರಕಿಹೊಳಿ
ಹೆಂಡತಿ, ಮಕ್ಕಳೊಂದಿಗೆ ಮಧುಸೂದನ್ ಭಾನುವಾರ ಕಾಶ್ಮೀರ ಪ್ರವಾಸ ತೆರಳಿದ್ದರು
ಹೆಂಡತಿ, ಮಕ್ಕಳೊಂದಿಗೆ ಮಧುಸೂದನ್ ಭಾನುವಾರ ಕಾಶ್ಮೀರ ಪ್ರವಾಸ ತೆರಳಿದ್ದರು