ಅಮ್ಮ, ಅವ್ವ, ತಾಯಿ ಹೀಗೆ ಜನ್ಮ ನೀಡಿದಾಕೆಯನ್ನು ಹಲವು ಮಂದಿ, ಹಲವು ಕಡೆ ವಿವಿಧ ರೀತಿಯಿಂದ ಕರೆಯುತ್ತಾರೆ. ಆದರೆ, ಎಲ್ಲದರ ಭಾವವೂ ಒಂದೇ ಆಗಿರುತ್ತದೆ. ಮನುಷ್ಯರಷ್ಟೇ ಏಕೆ? ಪ್ರಾಣಿ, ಪಕ್ಷಿಗಳು ಕೂಡ ತನ್ನ ಅಮ್ಮನ ಜೊತೆ ಹೇಗೆ ವರ್ತಿಸುತ್ತದೆ, ಎಂತಹಾ ಭಾವ ಪ್ರದರ್ಶಿಸುತ್ತದೆ ಎಂದು ನಾವೆಲ್ಲರೂ ಒಂದಿಲ್ಲೊಂದು ಸಂದರ್ಭದಲ್ಲಿ ಕಂಡಿರುತ್ತೇವೆ. ಹಕ್ಕಿಯೊಂದು ತನ್ನ ಮರಿಗೆ ಹಣ್ಣು ತಿನ್ನಿಸುವುದರಿಂದ, ಹಸುವೊಂದು ಕರುವಿಗೆ ಹಾಲುಣಿಸುವರೆಗೆ ತಾಯಿಯ ಮಮತೆ ಹೃದಯ ತುಂಬಿ ಬರುತ್ತದೆ.
ಮಾನವರೂ ಅಷ್ಟೇ. ಹೆಣ್ಣು ಜನ್ಮಕ್ಕೆ ವಿಶೇಷ ಸ್ಥಾನ ನೀಡಿ ಗೌರವಿಸುವುದು ಅಮ್ಮ ಎಂಬ ನೆಲೆಯಲ್ಲಿ ಪೂಜಿಸುವುದೂ ಇದೆ. ಒಂಭತ್ತು ತಿಂಗಳ ಕಾಲ, ತನ್ನ ಕರುಳ ಕುಡಿಯೊಂದನ್ನು ಹೆತ್ತು, ಹೊತ್ತು ಸಾಕಿ ಸಲಹುತ್ತಾಳೆ. ತಾಯಿಯ ಬಗ್ಗೆ ಈ ಪೀಠಿಕೆ ಯಾಕೆ ಅಂತೀರಾ? ಇಲ್ಲಿದೆ ನೋಡಿ ವಿವರ.
ಸೌತ್ ಆಫ್ರಿಕಾದ ಮಹಿಳೆಯೊಬ್ಬಳು ಏಕಕಾಲಕ್ಕೆ ಹತ್ತು ಕಂದಮ್ಮಗಳಿಗೆ ಜೀವ ನೀಡಿದ್ದಾಳೆ. ಆ ಮುಖೇನ, ಹೊಸ ಗಿನ್ನಿಸ್ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾಳೆ. ಈ ಮೊದಲು ಮಲಿಯಾನ್ ಹಲೀಮಾ ಎಂಬ ಮೊರಕ್ಕೋದ ತಾಯಿ, ಒಂಭತ್ತು ಮಕ್ಕಳಿಗೆ ಜನ್ಮ ನೀಡಿ ವಿಶ್ವ ದಾಖಲೆ ನಿರ್ಮಿಸಿದ್ದಳು. ಈಗ ಆ ದಾಖಲೆಯನ್ನು ಈ ಯುವತಿ ಸರಿಗಟ್ಟಿದ್ದಾಳೆ. ಹತ್ತು ಮಕ್ಕಳಿಗೆ ತಾಯಿಯಾಗಿದ್ದಾಳೆ.
UPDATE: South African woman gives birth to 10 babies, breaking the Guinness World Record held by Malian Halima Cissé who gave birth to nine children in Morocco last month. pic.twitter.com/3U6LvFQuBo
— Pulse Live Kenya (@PulseLiveKenya) June 8, 2021
ಹಿಂದಿನ ಕಾಲದಲ್ಲೆಲ್ಲಾ ನಮ್ಮಲ್ಲಿ ಒಬ್ಬೊಬ್ಬರಿಗೆ ಐದಾರು, ಹತ್ತು ಅಥವಾ ಅದಕ್ಕಿಂತ ಹೆಚ್ಚಿನ ಮಕ್ಕಳೂ ಇರುತ್ತಿದ್ದರು. ಆದರೆ, ಇತ್ತೀಚೆಗೆ ಒಂದು ಅಥವಾ ಎರಡು ಮಕ್ಕಳು ಇರುತ್ತಾರೆ. ಅವಳಿ ಮಕ್ಕಳು ಆಗುವುದು ಸಾಮಾನ್ಯವಾಗಿ ನಾವು ನೋಡಿರುತ್ತೇವೆ. ಕೆಲವೊಮ್ಮೆ ತ್ರಿವಳಿ ಮಕ್ಕಳು ಆಗುವುದೂ ಇದೆ. ಆದರೆ, ಇದಂಥೂ ಸುಮ್ಮನೆ ಊಹಿಸಲೂ ಅಸಾಧ್ಯ. ಆದರೆ, ಈ ಘಟನೆ ನಡೆದಿದೆ.
If you were this woman, what’s the first thing you would do after giving birth to 10 kids?#PulseTeaser pic.twitter.com/X0We5NcaKQ
— Pulse Live Kenya (@PulseLiveKenya) June 8, 2021
ಈ ಬಗ್ಗೆ ನೆಟ್ಟಿಗರು ಕುತೂಹಲದಿಂದ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ವಿವಿಧ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನೀವು ಈ ಮಹಿಳೆಯಾಗಿದ್ದರೆ, ಮಕ್ಕಳಿಗೆ ಜನ್ಮ ನೀಡಿದ ನಂತರ ಮೊದಲ ಕೆಲಸ ಏನು ಮಾಡುತ್ತಿದ್ದಿರಿ ಎಂದು ಒಬ್ಬರು ತಮಾಷೆಯಾಗಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Viral Video: ಒಂದು ಕಾಲು ಕಳೆದುಕೊಂಡರೇನು? ಈಕೆಯ ಸಾಲ್ಸಾ ನೃತ್ಯ ನೋಡಿದರೆ ನಾವೇ ನಾಚಬೇಕು!
Published On - 10:55 pm, Tue, 8 June 21