Alzheimer’s Disease ಅಲ್ಜೈಮರ್ ಕಾಯಿಲೆಯ ಹೊಸ ಔಷಧಿಗೆ ಎಫ್​ಡಿಎ ಅನುಮೋದನೆ

Alzheimer's Disease ಅಲ್ಜೈಮರ್ ಕಾಯಿಲೆಯ ಹೊಸ ಔಷಧಿಗೆ ಎಫ್​ಡಿಎ ಅನುಮೋದನೆ
ಪ್ರಾತಿನಿಧಿಕ ಚಿತ್ರ

Alzheimer’s drug: ಆತಂಕ ಮತ್ತು ನಿದ್ರಾಹೀನತೆಯಂತಹ ರೋಗಲಕ್ಷಣಗಳನ್ನು ನಿರ್ವಹಿಸುವ ಬದಲು ಕಾಯಿಲೆಗೆ ಚಿಕಿತ್ಸೆ ನೀಡಬಹುದಾದ ಏಕೈಕ ಔಷಧ ಇದು ಎಂದು ಅಮೆರಿಕದ ನಿಯಂತ್ರಕರು ಹೇಳಿದ್ದಾರೆ.

TV9kannada Web Team

| Edited By: Rashmi Kallakatta

Jun 08, 2021 | 4:55 PM

ವಾಷಿಂಗ್ಟನ್: ಸುಮಾರು 20 ವರ್ಷಗಳ ನಂತರ ಅಲ್ಜೈಮರ್ ಕಾಯಿಲೆಗಿರುವ ಹೊಸ ಔಷಧಿಗೆ ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಸೋಮವಾರ ಅನುಮೋದನೆ ನೀಡಿದೆ. ಬಹು ಚರ್ಚಿತವಾದ ಈ ಚಿಕಿತ್ಸೆಯು ಮೆದುಳನ್ನು ನಾಶಪಡಿಸುವ ರೋಗವನ್ನು ಕುಂಠಿತಗೊಳಿಸಲು ಸಹಾಯ ಮಾಡುತ್ತದೆ ಎಂದು ತೋರಿಸಲಾಗಿಲ್ಲ ಎಂಬ ಸ್ವತಂತ್ರ ಸಲಹೆಗಾರರ ಎಚ್ಚರಿಕೆಗಳನ್ನು ಕಡೆಗಣಿಸಿ ಸರ್ಕಾರದ ಆರೋಗ್ಯ ಇಲಾಖೆಯ ಅಧಿಕಾರಿಗಳು ಅನುಮೋದನೆ ನೀಡಿದ್ದಾರೆ.  ಅಲ್ಜೈಮರ್ ಕಾಯಿಲೆಯ ರೋಗಿಗಳಿಗೆ ಬಯೋಜೆನ್ ಅಭಿವೃದ್ಧಿಪಡಿಸಿದ ಔಷಧಿಗೆ ಅನುಮೋದನೆ ನೀಡಿದೆ ಎಂದು ಆಹಾರ ಮತ್ತು ಔಷಧ ಆಡಳಿತ ಹೇಳಿದೆ.

ಆತಂಕ ಮತ್ತು ನಿದ್ರಾಹೀನತೆಯಂತಹ ರೋಗಲಕ್ಷಣಗಳನ್ನು ನಿರ್ವಹಿಸುವ ಬದಲು ಕಾಯಿಲೆಗೆ ಚಿಕಿತ್ಸೆ ನೀಡಬಹುದಾದ ಏಕೈಕ ಔಷಧ ಇದು ಎಂದು ಅಮೆರಿಕದ ನಿಯಂತ್ರಕರು ಹೇಳಿದ್ದಾರೆ. ಲಕ್ಷಾಂತರ ಹಿರಿಯ ಅಮೆರಿಕನ್ನರು ಮತ್ತು ಅವರ ಕುಟುಂಬಗಳ ಮೇಲೆ ಪರಿಣಾಮ ಬೀರುವ ಈ ನಿರ್ಧಾರವು ವೈದ್ಯರು, ವೈದ್ಯಕೀಯ ಸಂಶೋಧಕರು ಮತ್ತು ರೋಗಿಗಳ ಗುಂಪುಗಳಲ್ಲಿ ಭಿನ್ನಾಭಿಪ್ರಾಯಗಳನ್ನು ಹುಟ್ಟುಹಾಕುವುದು ಖಚಿತ. ಪ್ರಾಯೋಗಿಕ ಚಿಕಿತ್ಸೆಯನ್ನು ಮೌಲ್ಯಮಾಪನ ಮಾಡಲು ಬಳಸುವ ಮಾನದಂಡಗಳಿಗೆ ಇದು ಬಹುದೊಡ್ಡ ಪರಿಣಾಮಗಳನ್ನು ಹೊಂದಿದೆ, ಇದರಲ್ಲಿ ಹೆಚ್ಚುತ್ತಿರುವ ಪ್ರಯೋಜನಗಳನ್ನು ಮಾತ್ರ ತೋರಿಸುತ್ತದೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಜಪಾನ್‌ನ ಐಸೈ ಕಂಪನಿಯ ಸಹಯೋಗದೊಂದಿಗೆ ಬಯೋಜೆನ್ ಅಭಿವೃದ್ಧಿಪಡಿಸಿದ ಹೊಸ ಔಷಧವು ಮಾನಸಿಕ ಕುಸಿತವನ್ನು ಹಿಮ್ಮೆಟ್ಟಿಸಲಿಲ್ಲ. ಇದು ಕೇವಲ ಅದನ್ನು ಕುಂಠಿತಗೊಳಿಸುತ್ತದೆ ಎಂದು ಅಧ್ಯಯನವೊಂದು ಹೇಳಿದೆ. ಅಡುಹೆಲ್ಮ್ (Aduhelm) ಎಂದು ಕರೆಯಲ್ಪಡುವ ಈ ಔಷಧಿಗಳನ್ನು ಪ್ರತಿ ನಾಲ್ಕು ವಾರಗಳಿಗೊಮ್ಮೆ ನೀಡಲಾಗುತ್ತದೆ.

ಎಫ್‌ಡಿಎಯ ಉನ್ನತ ಔಷಧ ನಿಯಂತ್ರಕವು ಔಷಧದ ಬಗ್ಗೆ ಅನಿಶ್ಚಿತತೆಗಳು ಉಳಿದಿವೆ ಎಂದು ಪ್ರಕಟಣೆಯಲ್ಲಿ ಒಪ್ಪಿಕೊಂಡಿದೆ, ಆದರೆ ಮೆದುಳಿನಲ್ಲಿರುವ ಪ್ಲೇಕ್‌ನ ಹಾನಿಕಾರಕ ಕ್ಲಂಪ್‌ಗಳನ್ನು ಕಡಿಮೆ ಮಾಡುವ ಅಡುಹೆಲ್ಮ್‌ನ ಸಾಮರ್ಥ್ಯವು ಬುದ್ಧಿಮಾಂದ್ಯತೆಯನ್ನು ಕುಂಠಿತ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಿದೆ.

ಅನುಮೋದನೆಯ ನಿಯಮಗಳ ಪ್ರಕಾರ, ರೋಗಿಗಳಿಗೆ ಪ್ರಯೋಜನಗಳನ್ನು ದೃಢೀಕರಿಸಲು ಔಷಧಿ ತಯಾರಕರಿಗೆ ಮುಂದಿನ ಅಧ್ಯಯನವನ್ನು ನಡೆಸುವ ಅಗತ್ಯವಿದೆ. ಅಧ್ಯಯನವು ಪರಿಣಾಮಕಾರಿತ್ವವನ್ನು ತೋರಿಸಲು ವಿಫಲವಾದರೆ, ಎಫ್‌ಡಿಎಔ ಷಧಿಯನ್ನು ಮಾರುಕಟ್ಟೆಯಿಂದ ವಾಪಸ್ ತೆಗೆದುಕೊಳ್ಳಬಹುದು. ಆದರೆ ಈ ರೀತಿ ಮಾಡುವುದು ವಿರಳ.

ಬಯೋಜೆನ್ ತಕ್ಷಣವೇ ಬೆಲೆಯನ್ನು ಬಹಿರಂಗಪಡಿಸಲಿಲ್ಲ, ಆದರೂ ವಿಶ್ಲೇಷಕರ ಅಂದಾಜಿನ ಪ್ರಕಾರ ಒಂದು ವರ್ಷದ ಚಿಕಿತ್ಸೆಗೆ ಔಷಧವು ಮೌಲ್ಯ ₹ 30,000 ಮತ್ತು ₹ 50,000 ನಡುವೆ ಇರುತ್ತದೆ.

ಒಂದು ಗುಂಪಿನ ಪ್ರಾಥಮಿಕ ವಿಶ್ಲೇಷಣೆಯ ಪ್ರಕಾರ ಔಷಧಿಯ ಬೆಲೆ ವರ್ಷಕ್ಕೆ ₹2,500 ರಿಂದ ₹8,300 ಬೆಲೆಯ ನಿಗದಿಪಡಿಸಬಹುದಿತ್ತು. ಫಾಲೋ ಅಪ್ ಅಧ್ಯಯನಗಳಲ್ಲಿ ಔಷಧದ ಪ್ರಯೋಜನವನ್ನು ದೃ ಢೀಕರಿಸದಿದ್ದರೆ “ಯಾವುದೇ ಬೆಲೆಯು ತುಂಬಾ ಹೆಚ್ಚಾಗಿದೆ” ಎಂದು ಲಾಭರಹಿತ ಇನ್ಸ್ಟಿಟ್ಯೂಟ್ ಫಾರ್ ಕ್ಲಿನಿಕಲ್ ಮತ್ತು ಎಕನಾಮಿಕ್ ರಿವ್ಯೂ ಹೇಳಿದೆ.

ಅಮೆರಿಕದಲ್ಲಿ ಸರಿ ಸುಮಾರು 6 ಮಿಲಿಯನ್ ಜನರು ಮತ್ತು ವಿಶ್ವಾದ್ಯಂತ ಅನೇಕ ಜನರು ಅಲ್ಜೈಮರ್ ಅನ್ನು ಹೊಂದಿದ್ದಾರೆ, ಇದು ನೆನಪಿನ ಶಕ್ತಿ, ತಾರ್ಕಿಕತೆ, ಸಂವಹನ ಮತ್ತು ಮೂಲಭೂತ ದೈನಂದಿನ ಕಾರ್ಯಗಳಿಗೆ ಅಗತ್ಯವಾದ ಮೆದುಳಿನ ಪ್ರದೇಶಗಳನ್ನು ಕ್ರಮೇಣ ಆಕ್ರಮಿಸುತ್ತದೆ. ರೋಗದ ಅಂತಿಮ ಹಂತದಲ್ಲಿ, ಪೀಡಿತರು ನುಂಗುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ.

ಆಡ್​ಯೂಕಾನ್​ಯೂಮಾಬ್ (“Aducanumab) ಮೆದುಳಿನಿಂದ ಬೀಟಾ-ಅಮಿಲಾಯ್ಡ್ ಎಂದು ಕರೆಯಲ್ಪಡುವ ಅಲ್ಜೈಮರ್​ಗೆ ಲಿಂಕ್ ಮಾಡಲಾದ ಪ್ರೋಟೀನ್ ಅನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ. ಇತರ ಪ್ರಾಯೋಗಿಕ ಔಷಧಿಗಳು ಇದನ್ನು ಮೊದಲೇ ಮಾಡಿವೆ. ಆದರೆ ರೋಗಿಗಳ ಆಲೋಚನೆ, ತಮ್ಮನ್ನು ತಾವು ಕಾಳಜಿ ವಹಿಸುವ ಅಥವಾ ಸ್ವತಂತ್ರವಾಗಿ ಬದುಕುವ ಸಾಮರ್ಥ್ಯದಲ್ಲಿ ಅವು ಯಾವುದೇ ವ್ಯತ್ಯಾಸವನ್ನು ಮಾಡಿಲ್ಲ.

ಹೊಸ ಔಷಧಿಯನ್ನು ಜೀವಂತ ಕೋಶಗಳಿಂದ ತಯಾರಿಸಲಾಗುತ್ತದೆ, ಅದನ್ನು ವೈದ್ಯರ ಕಚೇರಿ ಅಥವಾ ಆಸ್ಪತ್ರೆಯಲ್ಲಿ ದೇಹದೊಳಗೆ ನಳಿಕೆ ಮೂಲಕ ನೀಡಬೇಕಾಗುತ್ತದೆ.

ಅಲ್ಜೈಮರ್ ಗೆ ಕಾರಣವೇನು ಎಂಬುದನ್ನು ಸಂಶೋಧಕರು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದಿಲ್ಲ. ಆದರೆ ಆಡ್​ಯೂಕಾನ್​ಯೂಮಾಬ್​ನಿಂದ ಗುರಿಯಾಗುವ ಮೆದುಳಿನ ಫಲಕವು ಕೇವಲ ಒಂದು ಅಂಶವಾಗಿದೆ. ಪುರಾವೆಗಳು ಕುಟುಂಬದ ಇತಿಹಾಸ, ಶಿಕ್ಷಣ ಮತ್ತು ದೀರ್ಘಕಾಲದ ಪರಿಸ್ಥಿತಿಗಳಾದ ಮಧುಮೇಹ ಮತ್ತು ಹೃದ್ರೋಗಗಳೆಲ್ಲವೂ ಒಂದು ಪಾತ್ರವನ್ನು ವಹಿಸಬಹುದು ಎಂದು ಸೂಚಿಸುತ್ತದೆ.

“ಇದು ಕೇವಲ ಒಂದು ಒಗಟು  ಆಗಿದೆ ಮತ್ತು ಈ ಎಲ್ಲಾ ಇತರ ಆಯ್ಕೆಗಳನ್ನು ಅನ್ವೇಷಿಸಬೇಕು ಮತ್ತು ವರ್ಧಿಸಬೇಕಾಗಿದೆ ಎಂದು ನಾನು ಭಾವಿಸುತ್ತೇನೆ” ಎಂದು ಬಯೋಜೆನ್ ಮತ್ತು ಇತರ ಔ ಷಧಿ ತಯಾರಕರಿಗೆ ಸಮಾಲೋಚಿಸಿರುವ ಮೇಯೊ ಕ್ಲಿನಿಕ್ ಬುದ್ಧಿಮಾಂದ್ಯತೆಯ ತಜ್ಞ ಡಾ. ರೊನಾಲ್ಡ್ ಪೀಟರ್ಸನ್ ಹೇಳಿದರು.

ಇದನ್ನೂ ಓದಿ:  Wuhan Lab ಕೊರೊನಾವೈರಸ್ ವುಹಾನ್ ಲ್ಯಾಬ್​ನಿಂದ ಸೋರಿಕೆಯಾಗಿರಬಹುದು: ಅಮೆರಿಕ ವರದಿ

(Food and Drug Administration approves first new drug for Alzheimer’s disease in nearly 20 years)

Follow us on

Related Stories

Most Read Stories

Click on your DTH Provider to Add TV9 Kannada