Yoon Suk Yeol: ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ವಿರುದ್ಧ ಅರೆಸ್ಟ್​ ವಾರಂಟ್ ಜಾರಿ

|

Updated on: Dec 31, 2024 | 9:45 AM

ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಲಾಗಿದೆ. ದಕ್ಷಿಣ ಕೊರಿಯಾದಲ್ಲಿ ಹಾಲಿ ಅಧ್ಯಕ್ಷರ ವಿರುದ್ಧ ಹೊರಡಿಸಲಾದ ಮೊದಲ ಬಂಧನ ವಾರಂಟ್ ಇದಾಗಿದೆ.ಮಂಗಳವಾರ ದಕ್ಷಿಣ ಕೊರಿಯಾದ ನ್ಯಾಯಾಲಯವು ಅಧ್ಯಕ್ಷ ಯೂನ್ ಸುಕ್ ಯೋಲ್ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ. ಡಿಸೆಂಬರ್ 3 ರಂದು ದೇಶದಲ್ಲಿ ಮಾರ್ಷಲ್ ಕಾನೂನನ್ನು ಹೇರುವ ನಿರ್ಧಾರದಿಂದಾಗಿ ಅವರ ವಿರುದ್ಧ ದೂರು ನೀಡಲಾಗಿದೆ.

Yoon Suk Yeol: ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ವಿರುದ್ಧ ಅರೆಸ್ಟ್​ ವಾರಂಟ್ ಜಾರಿ
ಯೂನ್
Image Credit source: CNN
Follow us on

ದಕ್ಷಿಣ ಕೊರಿಯಾ ನ್ಯಾಯಾಲವು ಅಧ್ಯಕ್ಷ ಯೂನ್ ಸುಕ್ ಯೋಲ್ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಿದೆ. ಡಿಸೆಂಬರ್ 3 ರಂದು ಸಮರ ಕಾನೂನನ್ನು ಹೇರುವ ಅವರ ನಿರ್ಧಾರದ ಮೇಲೆ ಅಧಿಕಾರದಿಂದ ಅಮಾನತುಗೊಳಿಸಲಾಯಿತು. ಅಮಾನತುಗೊಂಡಿರುವ ಅಧ್ಯಕ್ಷ ಯೂನ್ ಸುಕ್ ಯೋಲ್ ವಿರುದ್ಧ ಬಂಧನ ವಾರಂಟ್ ಮತ್ತು ಸರ್ಚ್ ವಾರೆಂಟ್ ಜಾರಿಗೊಳಿಸಲಾಗಿದೆ.

ಸಿಯೋಲ್ ವೆಸ್ಟರ್ನ್ ಡಿಸ್ಟ್ರಿಕ್ಟ್ ಕೋರ್ಟ್ ವಾರಂಟ್ ಅನ್ನು ಅನುಮೋದಿಸಿದೆ.ದಕ್ಷಿಣ ಕೊರಿಯಾದಲ್ಲಿ ಹಾಲಿ ಅಧ್ಯಕ್ಷರಿಗೆ ಹೊರಡಿಸಲಾದ ಮೊದಲ ಬಂಧನ ವಾರಂಟ್ ಇದಾಗಿದೆ. ದಕ್ಷಿಣ ಕೊರಿಯಾದಲ್ಲಿ ಮೊದಲ ಬಾರಿಗೆ ಸಮರ ಕಾನೂನನ್ನು ಘೋಷಿಸಲಾಗಿತ್ತು.

ಅಪಾರ ಒತ್ತಡದ ನಂತರ ಅದನ್ನು ಹಿಂತೆಗೆದುಕೊಳ್ಳಲಾಯಿತು. ರಾಷ್ಟ್ರ ವಿರೋಧಿ ಶಕ್ತಿಗಳನ್ನು ನಾಶಮಾಡಲು ಮಾರ್ಷಲ್ ಕಾನೂನನ್ನು ಘೋಷಿಸಲಾಗುತ್ತಿದೆ ಎಂದು ಹೇಳಿದ್ದರು. ಈ ಆದೇಶದಿಂದ ದೇಶವು ತಾತ್ಕಾಲಿಕ ಮಿಲಿಟರಿ ನಿಯಂತ್ರಣಕ್ಕೆ ಬರುತ್ತಿತ್ತು.

ದಕ್ಷಿಣ ಕೊರಿಯಾದಲ್ಲಿ ಮಾರ್ಷಲ್ ಕಾನೂನು ಜಾರಿ ಎಂದರೆ ತುರ್ತು ಪರಿಸ್ಥಿತಿ ಘೋಷಣೆ ಎಂದರ್ಥ. ಈ ಸಮಯದಲ್ಲಿ ಎಲ್ಲಾ ಆಡಳಿತವು ಮಿಲಿಟರಿ ಕೈಯಲ್ಲಿರುತ್ತದೆ. ಚುನಾಯಿತ ಸರ್ಕಾರಕ್ಕೆ ತನ್ನ ಕೆಲಸ ಮಾಡಲು ಸಾಧ್ಯವಾಗದೇ ಇರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.

ಮತ್ತಷ್ಟು ಓದಿ: ದಕ್ಷಿಣ ಕೊರಿಯಾ ಬಿಕ್ಕಟ್ಟು: ಅಧ್ಯಕ್ಷ ಯೂನ್ ವಿರುದ್ಧ ಸಂಸತ್ತಿನಲ್ಲಿ ದೋಷಾರೋಪಣೆ ಮತ ಹಾಕಿದ 204 ಸಂಸದರು

1979 ರಲ್ಲಿ ದಕ್ಷಿಣ ಕೊರಿಯಾದಲ್ಲಿ ದಂಗೆಯ ಸಮಯದಲ್ಲಿ ದಕ್ಷಿಣ ಕೊರಿಯಾದ ಆಗಿನ ಮಿಲಿಟರಿ ಸರ್ವಾಧಿಕಾರಿ ಪಾರ್ಕ್ ಚುಂಗ್-ಹೀ ಹತ್ಯೆಯಾದಾಗ ಇದನ್ನು ಕೊನೆಯದಾಗಿ ಘೋಷಿಸಿತ್ತು. 1987 ರಲ್ಲಿ ದಕ್ಷಿಣ ಕೊರಿಯಾ ಸಂಸದೀಯ ಪ್ರಜಾಪ್ರಭುತ್ವವಾದ ನಂತರ ಇದು ಎಂದಿಗೂ ಜಾರಿಗೆ ಬಂದಿಲ್ಲ, ಆದರೆ ಅಧ್ಯಕ್ಷ ಯೂನ್ ದೇಶದಲ್ಲಿ ಮಾರ್ಷಲ್ ಕಾನೂನನ್ನು ಹೇರಿದ್ದರು.

ಡಿಸೆಂಬರ್ 3ರ ರಾತ್ರಿ ದಕ್ಷಿಣ ಕೊರಿಯಾದಲ್ಲಿ ತುರ್ತುಪರಿಸ್ಥಿತಿ ಅಂದರೆ ಸಮರ ಕಾನೂನನ್ನು ಘೋಷಿಸಲಾಗಿತ್ತು. ಇದನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ಆರಂಭವಾಗಿದ್ದವು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ