ದಕ್ಷಿಣ ಕೊರಿಯಾ ಬಿಕ್ಕಟ್ಟು: ಅಧ್ಯಕ್ಷ ಯೂನ್ ವಿರುದ್ಧ ಸಂಸತ್ತಿನಲ್ಲಿ ದೋಷಾರೋಪಣೆ ಮತ ಹಾಕಿದ 204 ಸಂಸದರು

ದಕ್ಷಿಣ ಕೊರಿಯಾದಲ್ಲಿ ರಾಜಕೀಯ ಬಿಕ್ಕಟ್ಟು ಶುರುವಾಗಿದೆ. ಅಧ್ಯಕ್ಷ ಯೂನ್ ಸುಕ್ ಯೋಲ್ ಅವರು ದಕ್ಷಿಣ ಕೊರಿಯಾದಲ್ಲಿ ಸಮರ ಕಾನೂನನ್ನು ಹೇರಿದರು. ಇಲ್ಲಿಂದ ಶುರುವಾದ ಪ್ರಜಾಪ್ರಭುತ್ವ ಸಮರಕ್ಕೆ ಇದೀಗ ಜಯ ಸಿಕ್ಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವಾಧಿಕಾರ ನಡೆಯಲ್ಲ ಎಂಬದಕ್ಕೆ ಈ ಘಟನೆ ಉದಾಹರಣೆಯಾಗಿದೆ. ಸಂಸತ್ತಿನಲ್ಲಿ ಅಧ್ಯಕ್ಷ ವಿರುದ್ಧವೇ ಜನರ ಪರವಾಗಿ ಸ್ವಪಕ್ಷದವರೇ ಅಧ್ಯಕ್ಷನ ವಿರುದ್ಧ ದೋಷಾರೋಪಣೆ ಮತ ಹಾಕಿದ್ದಾರೆ. ಇದೀಗ ಈ ವಿಚಾರದಲ್ಲಿ ಪಕ್ಷ ಬೇಧ ಮರೆತು ಪ್ರಜಾಪ್ರಭುತ್ವದ ಉಳಿಯುವಿಗಾಗಿ ಅಧ್ಯಕ್ಷರ ವಿರುದ್ಧ ದೋಷಾರೋಪಣೆ ಮತ ಹಾಕಿದ್ದಾರೆ. ಈ ಬಗ್ಗೆ ಇಲ್ಲಿದೆ ನೋಡಿ ವರದಿ

ದಕ್ಷಿಣ ಕೊರಿಯಾ ಬಿಕ್ಕಟ್ಟು: ಅಧ್ಯಕ್ಷ ಯೂನ್ ವಿರುದ್ಧ ಸಂಸತ್ತಿನಲ್ಲಿ ದೋಷಾರೋಪಣೆ ಮತ ಹಾಕಿದ 204 ಸಂಸದರು
ಅಧ್ಯಕ್ಷ ಯೂನ್ ಸುಕ್ ಯೋಲ್
Follow us
ಅಕ್ಷಯ್​ ಪಲ್ಲಮಜಲು​​
|

Updated on:Dec 14, 2024 | 4:29 PM

ಒಂದು ದೇಶದ ಪ್ರಜಾಪ್ರಭುತ್ವ ಎಷ್ಟು ಮುಖ್ಯ, ಅದು ಎಷ್ಟು ಗಟ್ಟಿಯಾಗಿರಬೇಕು ಎನ್ನುವುದಕ್ಕೆ ಈ ವರದಿ ಸಾಕ್ಷಿ. ಒಂದು ದೇಶದ ಅಧ್ಯಕ್ಷನ ವಿರುದ್ಧ ಇಡೀ ದೇಶವೇ ಅದರಲ್ಲೂ ಅವರದ್ದೇ ಪಕ್ಷದ ನಾಯಕರು, ಜನರ ಪರ ನಿಂತು ಅಧ್ಯಕ್ಷರ ವಿರುದ್ಧ ದೋಷಾರೋಪಣೆ ಮತ ಹಾಕಿದ್ದಾರೆ. ಇದೀಗ ಈ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹೌದು ದಕ್ಷಿಣ ಕೊರಿಯದಲ್ಲಿ ರಾಜಕೀಯ ಬಿಕ್ಕಟ್ಟು ಶುರುವಾಗಿದೆ. ಅಧ್ಯಕ್ಷ ಯೂನ್ ಸುಕ್ ಯೋಲ್ ಅವರು ದಕ್ಷಿಣ ಕೊರಿಯಾದಲ್ಲಿ ಸಮರ ಕಾನೂನನ್ನು ಹೇರಿದರು. ಕೆಲವು ಗಂಟೆಗಳ ನಂತರ, ಸಂಸತ್ತಿನಲ್ಲಿ ಮತ ಚಲಾಯಿಸುವ ಮೂಲಕ ಸಂಸದರು ಅದನ್ನು ತೆಗೆದುಹಾಕಿದರು. ಇದೀಗ ಅಲ್ಲಿ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರ ವಿರುದ್ಧ ದೋಷಾರೋಪಣೆ ಮತ ಹಾಕಿದ್ದಾರೆ. ಇದರಲ್ಲಿ ಅಚ್ಚರಿಯ ಸಂಗತಿ ಎಂದರೆ ಅವರ ಪಕ್ಷದ ಸಂಸದರೇ ಅವರ ವಿರುದ್ಧ ದೋಷಾರೋಪಣೆ ಮತ ಹಾಕಲು ಮುಂದಾಗಿದ್ದಾರೆ.

300 ಶಾಸಕರಲ್ಲಿ, 204 ಜನರು ಬಂಡಾಯದ ಆರೋಪದ ಮೇಲೆ ಇಂದು (ಡಿ.14) ದೋಷಾರೋಪಣೆಯ ಪರವಾಗಿ ಮತ ಚಲಾಯಿಸಿದ್ದಾರೆ. ಅದರಲ್ಲಿ 85 ಜನರು ಅದರ ವಿರುದ್ಧ ಮತ ಚಲಾಯಿಸಿದರು. ಇದರ ಜತೆಗೆ ಮೂವರು ಸಂಸದರು ಗೈರು ಹಾಜರಾಗಿದ್ದು, ಎಂಟು ಮತಗಳು ರದ್ದಾಗಿವೆ. ಮೂರನೆ ಎರಡರಷ್ಟು ಬಹುಮತದ ಅಗತ್ಯವಿದ್ದ ದೋಷಾರೋಪಣೆ ನಿರ್ಣಯವು ಯೂನ್ ಸರಣಿ ಗಲಭೆಗಳನ್ನು ನಡೆಸುವ ಮೂಲಕ ಮತ್ತು ರಾಷ್ಟ್ರೀಯ ಅಸೆಂಬ್ಲಿ ಮತ್ತು ಸಾರ್ವಜನಿಕರಿಗೆ ಬೆದರಿಕೆ ಹಾಕುವ ಮೂಲಕ ದಂಗೆ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಇದೀಗ ಈ ಮತ ಚಲಾಯಿಸುವ ಮೂಲಕ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಲಾಗಿದೆ. ಹಾಗೂ ಹಂಗಾಮಿ ಅಧ್ಯಕ್ಷರಾಗಿ ಪ್ರಧಾನಿ ಹಾನ್ ಡಕ್-ಸೂ ಆಯ್ಕೆ ಆಗಿದ್ದಾರೆ. ಇದೀಗ ಈ ವಿಚಾರದ ಬಗ್ಗೆ ಅಲ್ಲಿನ ಸಾಂವಿಧಾನಿಕ ಸ್ಥಾನದಲ್ಲಿರುವ ಸುಪ್ರೀಂ ಕೋರ್ಟ್​​​​ ಎತ್ತಿಹಿಡಿಯಬೇಕಿದೆ ಎಂಬ ಚರ್ಚೆಗಳು ನಡೆಯುತ್ತಿದೆ. ಇದೀಗ ಈ ನಿರ್ಧಾರವು 180 ದಿನಗಳಲ್ಲಿ ಆಗಬೇಕಿದೆ. ಒಂದು ವೇಳೆ ಅಧ್ಯಕ್ಷ ಯೂನ್ ವಿರುದ್ಧ ನ್ಯಾಯಾಲಯ ತೀರ್ಪು ನೀಡಿದರೆ. ಇದು ದಕ್ಷಿಣ ಕೊರಿಯಾದ ಇತಿಹಾಸದಲ್ಲಿ ದೋಷಾರೋಪಣೆಗೆ ಒಳಗಾದ ಎರಡನೇ ಅಧ್ಯಕ್ಷರಾಗುತ್ತಾರೆ. ಇದು 60 ದಿನದ ಒಳಗೆ ಅಧ್ಯಕ್ಷ ಚುನಾವಣೆ ಸಮ್ಮತಿ ನೀಡಿದಂತೆ.

ಇದನ್ನೂ ಓದಿ: ಅಂಡರ್​ವೇರ್​ ಬಳಸಿ ನೇಣುಹಾಕಿಕೊಳ್ಳಲು ಹೊರಟಿದ್ದ ದಕ್ಷಿಣ ಕೊರಿಯಾದ ಮಾಜಿ ರಕ್ಷಣಾ ಸಚಿವ

ದಕ್ಷಿಣ ಕೊರಿಯಾ ಬಿಕ್ಕಟ್ಟು

ದೋಷಾರೋಪಣೆಯ ಮತವು ದಕ್ಷಿಣ ಕೊರಿಯಾದ ರಾಜಕೀಯದಲ್ಲಿ ಪ್ರಕ್ಷುಬ್ಧಕ್ಕೆ ಕಾರಣವಾಗಿದೆ. ಈಗಾಗಲೇ ಅಧ್ಯಕ್ಷ ಯೂನ್ ಸುಕ್ ಯೋಲ್ ವಿರುದ್ಧ ಪ್ರತಿಭಟನೆಗಳು ಹಾಗೂ ಅವರನ್ನು ಸಂಸತ್​​​ನಿಂದ ಹೊರ ಹಾಕಿ ಹಾಗೂ ಬಂಧಿಸಿ ಎಂಬ ಕೂಗು ಕೇಳಿ ಬರುತ್ತಿದೆ. ಇನ್ನು ಮೆಟ್ರೋಪಾಲಿಟನ್ ಸರ್ಕಾರವು ಸುವ್ಯವಸ್ಥೆ ಕಾಪಾಡಲು 1,000 ಸುರಕ್ಷತಾ ಸಿಬ್ಬಂದಿಯನ್ನು ನಿಯೋಜಿಸಿದೆ. ಡಿಸೆಂಬರ್ 3 ರಂದು ಸಮರ ಕಾನೂನನ್ನು ಹೇರುವ ಯೂನ್ ಅವರ ಪ್ರಯತ್ನವನ್ನು ವ್ಯಾಪಕವಾಗಿ ಟೀಕಿಸಲಾಯಿತು, ವಿರೋಧ ಪಕ್ಷಗಳು ಮತ್ತು ತಜ್ಞರು ಅವರನ್ನು ಬಂಡಾಯ ನಾಯಕವೆಂದು ಆರೋಪಿಸಿದರು. ರಾಷ್ಟ್ರದ ಮಾಜಿ ರಕ್ಷಣಾ ಸಚಿವರನ್ನು ಬಂಧಿಸಲಾಗಿದೆ ಮತ್ತು ಹಲವಾರು ಪ್ರಮುಖ ಮಿಲಿಟರಿ ಅಧಿಕಾರಿಗಳು ತನಿಖೆ ನಡೆಸುವ ಕಾರಣ ಯೂನ್ ಸುಕ್ ಯೋಲ್ ಅಧಿಕಾರದಲ್ಲಿದ್ದ ಪ್ರಭಾವ ಬೀರುಬಹುದು ಎಂದು ಹೇಳಲಾಗಿತ್ತು. ಇದರ ಜತೆಗೆ ದೇಶದ ರಾಜಕೀಯ ಬಿಕ್ಕಟ್ಟು, ಶುತ್ರರಾಷ್ಟ್ರಗಳಿಗೆ ಆಹಾರವಾಗಬಹುದು, ಹಾಗೂ ದೇಶದ ಭದ್ರತೆಗೆ ತೊಂದರೆ ಉಂಟಾಗಬಹುದು. ಅದಕ್ಕೆ ತಕ್ಷಣ ನಿರ್ಧಾರಗಳು ಸಂವಿಧಾನಿಕ ಪೀಠ ತೆಗೆದುಕೊಳ್ಳಬೇಕಿದೆ.

ನಾನೇ ಪಕ್ಕಕ್ಕೆ ಸರಿಯುತ್ತೇನೆ:

ಇದೀಗ ದಕ್ಷಿಣ ಕೊರಿಯಾ ಸಂಸತ್ತಿನಲ್ಲಿ ಅಧ್ಯಕ್ಷ ಯೂನ್ ಸುಕ್ ಯೋಲ್ ವಿರುದ್ಧ ದೋಷಾರೋಪಣೆ ಮತ ಚಲಾವಣೆ ನಂತರ ನಾನು ಅಧಿಕಾರದಿಂದ ಕೆಳಗೆ ಇಳಿಯುತ್ತೇನೆ ಎಂದು ಹೇಳಿದ್ದಾರೆ. ಆದರೂ ಛಲ ಬಿಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ ಯೂನ್, ಕೊನೆಯ ಕ್ಷಣದವರೆಗೂ ದೇಶಕ್ಕಾಗಿ ತನ್ನ ಕೈಲಾದಷ್ಟು ಕೆಲಸ ಮಾಡುವುದಾಗಿ ಹೇಳಿದ್ದಾರೆ. ನಾನು ಈಗ ಸ್ವಲ್ಪ ಸಮಯದವರೆಗೆ ಪಕ್ಕಕ್ಕೆ ಹೋಗಬೇಕಾಗಿದ್ದರೂ, ಭವಿಷ್ಯದ ಕಡೆಗೆ ಪ್ರಯಾಣ ಎಂದಿಗೂ ನಿಲ್ಲಬಾರದು ಎಂದು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 4:23 pm, Sat, 14 December 24

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!