ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಕೊರಿಯಾದ ವಿರೋಧ ಪಕ್ಷ ನಾಯಕ ಲೀ ಕುತ್ತಿಗೆಗೆ ಚಾಕು ಇರಿತ
ದಕ್ಷಿಣ ಕೊರಿಯಾದ ವಿರೋಧ ಪಕ್ಷದ ನಾಯಕ ಲೀ ಜೇ ಮ್ಯುಂಗ್ ಸುದ್ದಿಗೋಷ್ಠಿ ನಡೆಸುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಯೊಬ್ಬ ಕುತ್ತಿಗೆಗೆ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ.
ದಕ್ಷಿಣ ಕೊರಿಯಾದ ವಿರೋಧ ಪಕ್ಷದ ನಾಯಕ ಲೀ ಜೇ ಮ್ಯುಂಗ್( Lee Jae Myung) ಸುದ್ದಿಗೋಷ್ಠಿ ನಡೆಸುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಯೊಬ್ಬ ಕುತ್ತಿಗೆಗೆ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ. ಪ್ರಮುಖ ಪ್ರತಿಪಕ್ಷ ಡೆಮಾಕ್ರೆಟಿಕ್ ಪಕ್ಷದ ಮುಖ್ಯಸ್ಥರಾಗಿರುವ ಲೀ ಅವರು ಪತ್ರಕರ್ತರ ಜತೆ ಪ್ರಶ್ನೋತ್ತರ ಅವಧಿಯಲ್ಲಿ ಭಾಗಿಯಾಗಿದ್ದಾಗ ದುಷ್ಕರ್ಮಿಯೊಬ್ಬ ಕುತ್ತಿಗೆಯ ಎಡ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾರೆ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಾಳಿಕೋರನನ್ನು ತನ್ನ 50 ಅಥವಾ 60 ರ ಹರೆಯದ ವ್ಯಕ್ತಿ ಎಂದು ಗುರುತಿಸಲಾಗಿದೆ. ಮೊದಲು ಆತ ಲೀ ಬಳಿ ಆಟೋಗ್ರಾಫ್ ಕೇಳಿದ್ದ, ನಂತರ ಇದ್ದಕ್ಕಿದ್ದಂತೆ ದಾಳಿ ನಡೆಸಿದ್ದಾನೆ. ಲೀ ತಕ್ಷಣ ಕುತತ್ಇಗೆ ಹಿಡಿದುಕೊಂಡು ನೆಲಕ್ಕೆ ಬಿದ್ದಿದ್ದರು. ತಕ್ಷಣ ಆರೋಪಿಯನ್ನು ಬಂಧಿಸಲಾಯಿತು.
ಲೀ ಅವರ ಆರೋಗ್ಯ ಸ್ಥಿತಿ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಚಾಕುವಿನಿಂದ ಅವರ ಕತ್ತನ್ನು ಸೀಳಲಾಗಿದೆ. ಲೀ 2022ರ ಅಧ್ಯಕ್ಷೀಯ ಚುನಾವಣೆಯಲ್ಲಿ ಯೂನ್ ಸುಕ್ ಯೆಯೋಲ್ ಅವರ ಎದುರು ಕಡಿಮೆ ಅಂತರದಿಂದ ಸೋಲು ಅನುಭವಿಸಿದ್ದರು.
2006 ರಲ್ಲಿ, ಆಗಿನ ಸಂಪ್ರದಾಯವಾದಿ ವಿರೋಧ ಪಕ್ಷದ ನಾಯಕಿ ಪಾರ್ಕ್ ಗ್ಯುನ್-ಹೈ ನಂತರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:20 am, Tue, 2 January 24