ದೇಶ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವಾಗ ಅಲ್ಲಿಂದ ಪಲಾಯನ ಮಾಡಿರುವ ಶ್ರೀಲಂಕಾ (Sri Lanka) ಅಧ್ಯಕ್ಷ ಗೊಟಬಯ ರಾಜಪಕ್ಸ (Gotabaya Rajapaksa) ಅವರ ರಾಜೀನಾಮೆ ಪತ್ರ ಲಭಿಸಿದೆ ಎಂದು ಶ್ರೀಲಂಕಾದ ಸ್ಪೀಕರ್ ಕಚೇರಿ ಹೇಳಿದೆ. ಕೊಲಂಬೊದಿಂದ ಸಿಂಗಾಪುರ್ (Singapore) ತಲುಪಿರುವ ಗೊಟಬಯ, ಶ್ರೀಲಂಕಾ ತೊರೆಯುವ ಹೊತ್ತಲ್ಲಿ ತಾನು ಬುಧವಾರ ರಾತ್ರಿಯೊಳಗೆ ರಾಜೀನಾಮೆ ಪತ್ರ ಕಳುಹಿಸುವುದಾಗಿ ಹೇಳಿದ್ದರು. ಆದರೆ ಇಲ್ಲಿಯವರೆಗೆ ರಾಜೀನಾಮೆ ಪತ್ರ ಸಿಕ್ಕಿಲ್ಲ ಎಂದು ಗುರುವಾರ ಬೆಳಗ್ಗೆ ಸ್ಪೀಕರ್ ಹೇಳಿದ್ದರು. ಏತನ್ಮಧ್ಯೆ ಗುರುವಾರ ಸಂಜೆ ಗೊಟಬಯ ಅವರ ರಾಜೀನಾಮೆ ಪತ್ರ ಶ್ರೀಲಂಕಾ ಸಂಸತ್ ಗೆ ತಲುಪಿರುವುದಾಗಿ ಶ್ರೀಲಂಕಾದ ಸ್ಪೀಕರ್ ಕಚೇರಿ ಹೇಳಿದೆ. ಸಿಂಗಾಪುರದಿಂದಲೇ ಶ್ರೀಲಂಕಾ ಅಧ್ಯಕ್ಷರು ಸಂಸತ್ ಸ್ಪೀಕರ್ ಗೆ ರಾಜೀನಾಮೆ ಪತ್ರವನ್ನು ಇಮೇಲ್ ಮೂಲಕ ಕಳುಹಿಸಿದ್ದಾರೆ ಎನ್ನಲಾಗಿದ್ದರೂ ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಸಾಂವಿಧಾನಿಕ ಪ್ರಕ್ರಿಯೆಗಳು ಮುಗಿದ ನಂತರವೇ ರಾಜಪಕ್ಸ ಅವರ ರಾಜೀನಾಮೆ ಘೋಷಣೆ ಮಾಡಲಾಗುವುದು ಎಂದು ಸ್ಪೀಕರ್ ಕಚೇರಿ ಮೂಲಗಳು ಹೇಳಿವೆ.
?? President GR has resigned. I hope Sri Lanka can now move forward. I believe the President would not have resigned if he were still in Sri Lanka, and fearful of losing his life. I commend the thoughtful actions of the Govt of Maldives. My best wishes to the people of Sri Lanka.
— Mohamed Nasheed (@MohamedNasheed) July 14, 2022
ಶ್ರೀಲಂಕಾ ಅಧ್ಯಕ್ಷ ಗೊಟಬಯ ಅವರು ರಾಜೀನಾಮೆ ನೀಡಿದ್ದಾರೆ. ಶ್ರೀಲಂಕಾ ಇನ್ನು ಮುಂದೆ ಹೋಗಬಹುದು ಎಂದು ನಾನು ಭಾವಿಸುತ್ತೇವೆ. ಅವರು ಶ್ರೀಲಂಕಾದಲ್ಲೇ ಇರುತ್ತಿದ್ದರೆ ರಾಜೀನಾಮೆ ನೀಡುತ್ತಿರಲಿಲ್ಲ, ಅವರಿಗೆ ಅಲ್ಲಿ ಪ್ರಾಣಭಯವೂ ಇತ್ತು.ಮಾಲ್ಡೀವ್ಸ್ ನ ಕ್ರಮಗಳನ್ನು ನಾನು ಶ್ಲಾಘಿಸುತ್ತೇನೆ. ಶ್ರೀಲಂಕಾದ ಜನರಿಗೆ ನನ್ನ ಶುಭಾಶಯಗಳು ಎಂದು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ನಶೀದ್ ಟ್ವೀಟ್ ಮಾಡಿದ್ದಾರೆ.
Published On - 8:07 pm, Thu, 14 July 22