ಪಾಕಿಸ್ತಾನದ ಹುಳುಕು; ಶ್ರೀನಗರದಿಂದ ಶಾರ್ಜಾಕ್ಕೆ ಹೋಗುವ ವಿಮಾನಗಳು ಪಾಕ್​ ವಾಯುಪ್ರದೇಶ ಪ್ರವೇಶಿಸುವಂತಿಲ್ಲ !

| Updated By: Lakshmi Hegde

Updated on: Nov 03, 2021 | 12:15 PM

ಶ್ರೀನಗರದಿಂದ ಶಾರ್ಜಾಕ್ಕೆ ವಿಮಾನಯಾನಕ್ಕೆ ಇತ್ತೀಚೆಗೆಷ್ಟೇ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ್ದ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಿದ್ದರು. ಆಗನಿಂದಲೂ ಪಾಕಿಸ್ತಾನ ಕ್ಯಾತೆ ತೆಗೆಯುತ್ತಲೇ ಇದೆ.

ಪಾಕಿಸ್ತಾನದ ಹುಳುಕು; ಶ್ರೀನಗರದಿಂದ ಶಾರ್ಜಾಕ್ಕೆ ಹೋಗುವ ವಿಮಾನಗಳು ಪಾಕ್​ ವಾಯುಪ್ರದೇಶ ಪ್ರವೇಶಿಸುವಂತಿಲ್ಲ !
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಜಮ್ಮು-ಕಾಶ್ಮೀರದ ಶ್ರೀನಗರದಿಂದ ಶಾರ್ಜಾ (ಯುನೈಟೆಡ್ ಅರಬ್​ ಎಮಿರೇಟ್ಸ್​)ಕ್ಕೆ ಹೋಗುವ ವಿಮಾನಗಳು  ಇನ್ನು ಮುಂದೆ ಪಾಕಿಸ್ತಾನದ ಭೂಪ್ರದೇಶದ ಮೇಲೆ ಹಾರಬಾರದು ಎಂದು ಆ ದೇಶ ಹೇಳಿದೆ. ಅಂದರೆ ಶ್ರೀನಗರದಿಂದ ಶಾರ್ಜಾಕ್ಕೆ ಪಾಕ್​ ವಾಯುಮಾರ್ಗದ ಮೂಲಕ ತೆರಳುತ್ತಿದ್ದ ವಿಮಾನಗಳು ಇನ್ನು ಮುಂದೆ ಆ ಮಾರ್ಗದಲ್ಲಿ ಹೋಗುವಂತಿಲ್ಲ. ಇದು ಜಮ್ಮು-ಕಾಶ್ಮೀರ ಜನರಿಗೆ ತೀವ್ರ ಸಮಸ್ಯೆಯನ್ನುಂಟು ಮಾಡಿದೆ. 

ಪಾಕಿಸ್ತಾನದ ಈ ಆದೇಶ ಅಂತಾರಾಷ್ಟ್ರೀಯ ವಾಯುಯಾನ ನಿಮಯಗಳ ಉಲ್ಲಂಘನೆಯಾಗಿದೆ. ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ICAO)  ನೀಡಿರುವ ವಾಯುಯಾನ ಸ್ವಾತಂತ್ರ್ಯವನ್ನು ಪಾಕಿಸ್ತಾನ ಇದೀಗ ಜಮ್ಮು-ಕಾಶ್ಮೀರ ಜನರಿಂದ ಕಿತ್ತುಕೊಂಡಂತಾಗಿದೆ. ಶಾರ್ಜಾಕ್ಕೆ ಹೋಗುವ ವಿಮಾನಗಳು ಪಾಕಿಸ್ತಾನದ ಭೂಪ್ರದೇಶದ ಮೇಲೆ ಹಾರುವಂತಿಲ್ಲ ಎಂದು ಅಲ್ಲಿನ ಸರ್ಕಾರ ಹೇಳಿದ್ದರಿಂದ ಇನ್ನು ಮುಂದೆ ಶ್ರೀನಗರದಿಂದ ಶಾರ್ಜಾಕ್ಕೆ ಹೋಗುವ ಫ್ಲೈಟ್​​ಗಳು ಉದಯಪುರ, ಅಹ್ಮದಾಬಾದ್​ ಮತ್ತು ಒಮನ್​ ಮೂಲಕ ಹಾರಬೇಕು. ಇದರಿಂದ ಒಂದರಿಂದ-ಒಂದೂವರೆ ತಾಸು ಹೆಚ್ಚಿನ ಪ್ರಯಾಣ ಮಾಡಬೇಕು ಮತ್ತು ಟಿಕೆಟ್​ ಬೆಲೆಯೂ ಹೆಚ್ಚಾಗಿದೆ. ಹೀಗಾಗಿ ಸಹಜವಾಗಿಯೇ ಜನರಿಗೆ ಹೊರೆಯಾಗಿ ಪರಿಣಮಿಸಲಿದೆ.

ಶ್ರೀನಗರದಿಂದ ಶಾರ್ಜಾಕ್ಕೆ ವಿಮಾನಯಾನಕ್ಕೆ ಇತ್ತೀಚೆಗೆಷ್ಟೇ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ್ದ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಿದ್ದರು. ಆಗನಿಂದಲೂ ಪಾಕಿಸ್ತಾನ ಕ್ಯಾತೆ ತೆಗೆಯುತ್ತಲೇ ಇದೆ. ಈ ವಿಮಾನಗಳು ನಮ್ಮ ಭೂಪ್ರದೇಶದ ಮೇಲ್ಭಾಗದಲ್ಲಿ ಹಾರಾಟ ನಡೆಸಬಾರದು ಎಂದು ಇದೀಗ ಪಾಕಿಸ್ತಾನ ಹೇಳಿದೆ. ಈ ವಿಮಾನ ಹಾರಾಟ ಸಂಬಂಧ ಭಾರತ ಮತ್ತು ದುಬೈ ಸರ್ಕಾರಗಳ ಒಪ್ಪಂದದಿಂದ ಪಾಕಿಸ್ತಾನ ಸಿಟ್ಟಾಗಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ. ಅಲ್ಲದೆ, ಶ್ರೀನಗರದಿಂದ ವಿಮಾನ ಹಾರಾಟ ಶುರುವಾಗುವುದಕ್ಕೂ ಮೊದಲು ನಮ್ಮ ವಾಯುಮಾರ್ಗವನ್ನು ಅವು ಪ್ರವೇಶಿಸಲು ಭಾರತ-ದುಬೈ ಸರ್ಕಾರಗಳು ಪಾಕಿಸ್ತಾನ ಸರ್ಕಾರದ ಅನುಮತಿ ಕೇಳಬೇಕಿತ್ತು ಎಂಬುದು ಆ ದೇಶದ ವಾದ.  ಇದೀಗ ಪಾಕಿಸ್ತಾನ ಸರ್ಕಾರ ತನ್ನ ನಿರ್ಧಾರವನ್ನು ಭಾರತದ ನಾಗರಿಕ ವಿಮಾನ ಯಾನ ಸಚಿವಾಲಯ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಎರಡಕ್ಕೂ ತಿಳಿಸಿದೆ.

ಇದನ್ನೂ ಓದಿ: Puneeth Rajkumar: ನವೆಂಬರ್ 16ಕ್ಕೆ ಅರಮನೆ ಮೈದಾನದಲ್ಲಿ ಪುನೀತ್ ನಮನ ಕಾರ್ಯಕ್ರಮ; ಚಿತ್ರರಂಗದವರಿಗೆ ಮಾತ್ರ ಪ್ರವೇಶ

ಮಗನ ಕಣ್ಣಿಗೆ ಐ ಡ್ರಾಪ್​ ಬದಲು ಅಂಟು ಹಾಕಿದ ಅಪ್ಪ; ಬಾಲಕನ ದೃಷ್ಟಿ ಉಳಿಸಿಕೊಟ್ಟ ವೈದ್ಯರು