ನ್ಯೂಯಾರ್ಕ್ ನಗರದಲ್ಲಿರುವ (New York City) ದೇವಾಲಯದ ಹೊರಗಿದ್ದ ಮಹಾತ್ಮಗಾಂಧಿಯವರ ಪ್ರತಿಮೆಯನ್ನು (Mahatma Gandhi’s statue) ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಪ್ರತಿಮೆಯನ್ನು ಕೆಡವಿ ಹಾಕಿ ಪುಡಿ ಮಾಡಿಲಾಗಿದ್ದು, ಒಂದೇ ತಿಂಗಳಲ್ಲಿ ಇದೇ ರೀತಿಯ ಎರಡು ಘಟನೆ ಇಲ್ಲಿ ನಡೆದಿದೆ. ಅಮೆರಿಕದಲ್ಲಿ ಗಾಂಧಿ ಪ್ರತಿಮೆ ಮೇಲೆ ಆಗಸ್ಟ್ 16ರಂದು ದಾಳಿ ನಡೆದಿದೆ. 6 ಮಂದಿ ಕಿಡಿಗೇಡಿಗಳು ಶ್ರೀ ತುಳಸೀ ಮಂದಿರದ ಹೊರಭಾಗದಲ್ಲಿದ್ದ ಗಾಂಧಿ ಪ್ರತಿಮೆ ಧ್ವಂಸ ಮಾಡಿದ್ದು, ಕೆಟ್ಟ ಬೈಗುಳವನ್ನು ಪ್ರತಿಮೆ ಮೇಲೆ ಮತ್ತು ರಸ್ತೆಯುದ್ದಕ್ಕೂ ಬರೆದಿದ್ದಾರೆ ಎಂದು ಪೊಲೀಸರು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಕ್ವೀನ್ಸ್ ಡೈಲಿ ಈಗಲ್ ವರದಿ ಪ್ರಕಾರ, ಆಗಸ್ಟ್ 3ರಂದು ಮಹಾತ್ಮ ಗಾಂಧಿಯವರ ಪ್ರತಿಮೆ ಧ್ವಂಸ ಮಾಡಲಾಗಿತ್ತು. ಈ ವಿಡಿಯೊಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದು 25-30ರ ವಯಸ್ಸಿನ ಯುವಕರು ಈ ಕಿಡಿಗೇಡಿ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ.
ಪ್ರತಿಮೆ ಧ್ವಂಸ ಮಾಡಿದ ನಂತರ ಅವರು ಬಿಳಿ ಮೆರ್ಸಿಡೆಸ್ ಕಾರು ಮತ್ತು ಟೊಯೊಟಾ ಕಾರ್ಮಿ ವಾಹನದಲ್ಲಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
Published On - 3:49 pm, Fri, 19 August 22