ಇಸ್ರೇಲ್​ನಿಂದ ಗಾಜಾದಲ್ಲಿ ಮೊದಲು ವೈಮಾನಿಕ ದಾಳಿ ನಂತರ ನೆಲದ ಕಾರ್ಯಾಚರಣೆ, ಹಮಾಸ್ ಕಮಾಂಡರ್ ಸೇರಿ 50 ಮಂದಿ ಸಾವು

|

Updated on: Nov 01, 2023 | 8:03 AM

ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಸೇನೆಯ ಆಕ್ರಮಣಕಾರಿ ದಾಳಿ ಮುಂದುವರೆದಿದೆ, ಇಸ್ರೇಲಿ ವಾಯುಪಡೆಯು ಗಾಜಾದಲ್ಲಿನ ಹಮಾಸ್ ಸ್ಥಾನಗಳ ಮೇಲೆ ನಿರಂತರವಾಗಿ ಬಾಂಬ್ ದಾಳಿ ನಡೆಸುತ್ತಿದೆ, ವಾಯು ದಾಳಿಯ ನಂತರ, ನೆಲದ ಪಡೆ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತದೆ.ಇಸ್ರೇಲಿ ರಕ್ಷಣಾ ಪಡೆಗಳು ಮಂಗಳವಾರ ಗಾಜಾದ ಜಬಾಲಿಯಾದಲ್ಲಿ ಪ್ರಮುಖ ಕಾರ್ಯಾಚರಣೆಯನ್ನು ನಡೆಸಿವೆ.

ಇಸ್ರೇಲ್​ನಿಂದ ಗಾಜಾದಲ್ಲಿ ಮೊದಲು ವೈಮಾನಿಕ ದಾಳಿ ನಂತರ ನೆಲದ ಕಾರ್ಯಾಚರಣೆ, ಹಮಾಸ್ ಕಮಾಂಡರ್ ಸೇರಿ 50 ಮಂದಿ ಸಾವು
ಯುದ್ಧ
Image Credit source: Aaj Tak
Follow us on

ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಸೇನೆಯ ಆಕ್ರಮಣಕಾರಿ ದಾಳಿ ಮುಂದುವರೆದಿದೆ, ಇಸ್ರೇಲಿ ವಾಯುಪಡೆಯು ಗಾಜಾದಲ್ಲಿನ ಹಮಾಸ್ ಸ್ಥಾನಗಳ ಮೇಲೆ ನಿರಂತರವಾಗಿ ಬಾಂಬ್ ದಾಳಿ ನಡೆಸುತ್ತಿದೆ, ವಾಯು ದಾಳಿಯ ನಂತರ, ನೆಲದ ಪಡೆ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತದೆ.ಇಸ್ರೇಲಿ ರಕ್ಷಣಾ ಪಡೆಗಳು ಮಂಗಳವಾರ ಗಾಜಾದ ಜಬಾಲಿಯಾದಲ್ಲಿ ಪ್ರಮುಖ ಕಾರ್ಯಾಚರಣೆಯನ್ನು ನಡೆಸಿವೆ.

ಇಲ್ಲಿ ರಕ್ಷಣಾ ಪಡೆಗಳು ಹಮಾಸ್ ಕಮಾಂಡರ್ ಸೇರಿದಂತೆ 50 ಮಂದಿಯನ್ನು ಹತ್ಯೆ ಮಾಡಿದ್ದಾರೆ. ಅಕ್ಟೋಬರ್ 7ರಂದು ಇಸ್ರೇಲ್​ ಮೇಲೆ ಹಮಾಸ್​ ನಡೆಸಿದ ರಾಕೆಟ್ ದಾಳಿಯ ಹಿಂದಿರುವ ಹಮಾಸ್ ಕಮಾಂಡರ್ ನಿಸಾಮ್ ಅಬು ಅಜಿನಾನಲ್ಲಿ ಹತ್ಯೆ ಮಾಡಲಾಗಿದೆ. ಅಬು ಅಜೀನಾ ಹತ್ಯೆ ಹಮಾಸ್​ನ್ನು ದುರ್ಬಲಗೊಳಿಸಿದೆ. ಇಸ್ರೇಲ್ ದಾಳಿಯಲ್ಲಿ ಇದುವರೆಗೆ 10 ಸಾವಿರ ಮಂದಿ ಸಾವನ್ನಪ್ಪಿದ್ದಾರೆ ಎಂದು ಗಾಜಾ ಪಟ್ಟಿಯ ಆರೋಗ್ಯ ಸಚಿವಾಲಯ ಹೇಳಿದೆ.

ಇಸ್ರೇಲ್​ನಲ್ಲಿ ಇದುವರೆಗೆ 1,400 ಮಂದಿ ಸಾವನ್ನಪ್ಪಿದ್ದಾರೆ, ಸುಮಾರು 250 ಮಂದಿಯನ್ನು ಹಮಾಸ್ ಒತ್ತೆಯಾಳಾಗಿ ಇರಿಸಿದೆ.
ಇದೇ ಸಮಯದಲ್ಲಿ, ಈ ಎನ್‌ಕೌಂಟರ್‌ನಲ್ಲಿ ಇಬ್ಬರು ಇಸ್ರೇಲಿ ಸೈನಿಕರು ಸಹ ಸಾವನ್ನಪ್ಪಿದ್ದಾರೆ.

ಮತ್ತಷ್ಟು ಓದಿ: ಗೆಲ್ಲುವವರೆಗೆ ಯುದ್ಧ ಮುಂದುವರೆಯುತ್ತೆ, ಕದನ ವಿರಾಮ ಕುರಿತು ತನ್ನ ನಿಲುವು ಸ್ಪಷ್ಟಪಡಿಸಿದ ಇಸ್ರೇಲ್

ಇಸ್ರೇಲಿ ಸೇನೆಯ ಪ್ರಕಾರ, ಇಸ್ರೇಲಿ ಸೇನೆಯು ಮೊದಲು ವೈಮಾನಿಕ ದಾಳಿಯನ್ನು ಪ್ರಾರಂಭಿಸಿತು, ಇದಾದ ನಂತರ ಹಮಾಸ್‌ನ ಸೆಂಟ್ರಲ್ ಜಬಾಲಿಯಾ ಬೆಟಾಲಿಯನ್ ಬಳಸುತ್ತಿದ್ದ ಕಟ್ಟಡವನ್ನು ಗ್ರೌಂಡ್ ಫೋರ್ಸ್ ವಶಪಡಿಸಿಕೊಂಡಿತು.

ಇಸ್ರೇಲ್ ದಾಳಿಯಲ್ಲಿ ಜಬಾಲಿಯಾದಲ್ಲಿ ಹಲವು ಕಟ್ಟಡಗಳು ನಾಶವಾಗಿವೆ. ಈ ಸಮಯದಲ್ಲಿ, ಇಸ್ರೇಲಿ ಸೇನೆಯು ಬೆಟಾಲಿಯನ್ ಮುಖ್ಯಸ್ಥ ಸೇರಿದಂತೆ 50 ಹಮಾಸ್ ಹೋರಾಟಗಾರರನ್ನು ಕೊಂದಿತು. ಇದಾದ ಬಳಿಕ ಇಲ್ಲಿ ನಿರ್ಮಿಸಲಾಗಿದ್ದ ಸುರಂಗವನ್ನೂ ಭೂಸೇನೆ ಧ್ವಂಸಗೊಳಿಸಿದೆ.

ಕದನ ವಿರಾಮದ ಕುರಿತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಸ್ಪಷ್ಟಪಡಿಸಿದ್ದಾರೆ, ಈ ಯುದ್ಧವನ್ನು ಗೆಲ್ಲುವವರೆಗೂ ಹೋರಾಟ ಮುಂದುವರೆಯಲಿದೆ ಎಂದಿದ್ದಾರೆ.

ಅರಬ್ ರಾಷ್ಟ್ರಗಳು, ಚೀನಾ, ರಷ್ಯಾದಂತಹ ದೇಶಗಳು ಪ್ಯಾಲೆಸ್ತೀನ್ ಬೆಂಬಲಕ್ಕೆ ನಿಂತಿದ್ದರೆ ಅಮೆರಿಕ, ಬ್ರಿಟನ್, ಫ್ರಾನ್ಸ್​, ಜರ್ಮನಿಯಂತಹ ಪಾಶ್ಚಿಮಾತ್ಯ ರಾಷ್ಟ್ರಗಳು ತನ್ನನ್ನು ತಾನು, ತನ್ನ ನಾಗರಿಕರನ್ನು ರಕ್ಷಿಸಿಕೊಳ್ಳುವ ಹಕ್ಕು ಇಸ್ರೇಲ್​ಗಿದೆ ಎಂದಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ