AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯೂಟ್ಯೂಬ್​​ನಲ್ಲಿ ಮಕ್ಕಳು ಮನರಂಜನೆ ಒಂದೇ ಅಲ್ಲಾ, ಹಿಂಸಾತ್ಮಕ ದೃಶ್ಯಗಳನ್ನೂ ನೋಡ್ತಾರೆ, ಹುಷಾರು! 

ಹುಷಾರು!  ಮಕ್ಕಳು online ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ಪಾಲಕರು ನಿರಾಳವಾಗಿ ಇರೋ ಹಾಗಿಲ್ಲ. ಅಥವಾ, online ವಿದ್ಯಾಭ್ಯಾಸಕ್ಕೆ ಬೇಕಾಗುವ ಪೂರಕ ಮಾಹಿತಿ Google ನಲ್ಲಿ ಸಿಗುತ್ತೆ ಎಂದು ಪಾಲಕರು ಆಲಸ್ಯದಿಂದ ಇರೋ ಹಾಗಿಲ್ಲ. ಚಿಕ್ಕಮಕ್ಕಳು ಮನರಂಜನೆಗಾಗಿ ಯೂಟ್ಯೂಬ್ ನೋಡುವಾಗ ಹಿಂಸಾತ್ಮಕ ಜಾಹಿರಾತುಗಳನ್ನೂ ನೋಡುತ್ತಾರೆ ಎಂಬ ಅಂಶ ಈಗ ಹೊರ ಬಂದಿದೆ. ಅಮೇರಿಕಾದ ಮಿಚಿಗನ್ ಮೆಡಿಸಿನ್ ಮಕ್ಕಳ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಾಗಿರುವ ಜೆನ್ನಿ ರಾಡೆಸ್ಕಿ ಅವರ ನೇತೃತ್ವದಲ್ಲಿ ನಡೆದ ಸಂಶೋಧನೆಯಲ್ಲಿ ಈ ಅಂಶ ಹೊರಬಂದಿದೆ. ಇವರು ನಡೆಸಿದ ಕಿರು ಸಂಶೋಧನೆಯ […]

ಯೂಟ್ಯೂಬ್​​ನಲ್ಲಿ ಮಕ್ಕಳು ಮನರಂಜನೆ ಒಂದೇ ಅಲ್ಲಾ, ಹಿಂಸಾತ್ಮಕ ದೃಶ್ಯಗಳನ್ನೂ ನೋಡ್ತಾರೆ, ಹುಷಾರು! 
ಪ್ರಾತಿನಿಧಿಕ ಚಿತ್ರ
ಸಾಧು ಶ್ರೀನಾಥ್​
|

Updated on:Nov 18, 2020 | 5:37 PM

Share

ಹುಷಾರು!  ಮಕ್ಕಳು online ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ಪಾಲಕರು ನಿರಾಳವಾಗಿ ಇರೋ ಹಾಗಿಲ್ಲ. ಅಥವಾ, online ವಿದ್ಯಾಭ್ಯಾಸಕ್ಕೆ ಬೇಕಾಗುವ ಪೂರಕ ಮಾಹಿತಿ Google ನಲ್ಲಿ ಸಿಗುತ್ತೆ ಎಂದು ಪಾಲಕರು ಆಲಸ್ಯದಿಂದ ಇರೋ ಹಾಗಿಲ್ಲ. ಚಿಕ್ಕಮಕ್ಕಳು ಮನರಂಜನೆಗಾಗಿ ಯೂಟ್ಯೂಬ್ ನೋಡುವಾಗ ಹಿಂಸಾತ್ಮಕ ಜಾಹಿರಾತುಗಳನ್ನೂ ನೋಡುತ್ತಾರೆ ಎಂಬ ಅಂಶ ಈಗ ಹೊರ ಬಂದಿದೆ.

ಅಮೇರಿಕಾದ ಮಿಚಿಗನ್ ಮೆಡಿಸಿನ್ ಮಕ್ಕಳ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಾಗಿರುವ ಜೆನ್ನಿ ರಾಡೆಸ್ಕಿ ಅವರ ನೇತೃತ್ವದಲ್ಲಿ ನಡೆದ ಸಂಶೋಧನೆಯಲ್ಲಿ ಈ ಅಂಶ ಹೊರಬಂದಿದೆ. ಇವರು ನಡೆಸಿದ ಕಿರು ಸಂಶೋಧನೆಯ ವೇಳೆ ಅನೇಕ ಮಾಹಿತಿಗಳು ಹೊರಬಿದ್ದಿವೆ. ಈ ಸಂದರ್ಭದಲ್ಲಿ ಹೊರಬಂದ ಕೆಲವು ಸ್ವಾರಸ್ಯಕರ ಅಂಶಗಳು ಹೀಗಿವೆ: 8 ವರ್ಷಕ್ಕಿಂತ ಚಿಕ್ಕ ವಯಸ್ಸಿನ ಮಕ್ಕಳನ್ನು ಹೊಂದಿದ 191 ಪೋಷಕರು 1,600ಕ್ಕೂ ಹೆಚ್ಚು ವೀಡಿಯೊಗಳನ್ನು ವೀಕ್ಷಿಸಿದರು. ಅಧ್ಯಯನದಲ್ಲಿ ಶೇಕಡಾ 95ರಷ್ಟು ವಿಡಿಯೋಗಳಲ್ಲಿ ಜಾಹಿರಾತುಗಳು ಇದ್ದವು ಎಂದು ಸಂಶೋಧಕರು ತಿಳಿಸಿದ್ದಾರೆ.

ವೀಡಿಯೋಗಳಲ್ಲಿ ಶೇ. 5ರಷ್ಟು ಮಾತ್ರ ಉನ್ನತ ಶಿಕ್ಷಣ ಮೌಲ್ಯಗಳನ್ನು ಹೊಂದಿವೆ. ಚಿಕ್ಕಮಕ್ಕಳು ಮನರಂಜನೆಗಾಗಿ ಯೂಟ್ಯೂಬ್ ನೋಡುವಾಗ ಹಿಂಸಾತ್ಮಕ ಜಾಹಿರಾತುಗಳನ್ನೂ ನೋಡುತ್ತಾರೆ. ಇದು ಮಕ್ಕಳ ಗೌಪ್ಯತೆ ಕಾನೂನಿಗೆ ವಿರುದ್ಧವಾಗಿದೆ ಎಂದು ಶಿಕ್ಷಣ ತಜ್ಞರು ಮತ್ತು ಕಾಮನ್ ಸೆನ್ಸ್ ಮೀಡಿಯಾ ವರದಿಯಲ್ಲಿ ತಿಳಿಸಿದೆ.

ಮಕ್ಕಳು ದಿನಕ್ಕೆ ಸರಾಸರಿ 39 ನಿಮಿಷಗಳ ವೀಡಿಯೋಗಳನ್ನು ವೀಕ್ಷಿಸುತ್ತಾರೆ. ಇದು 2017ರಿಂದ ದ್ವಿಗುಣವಾಗಿದೆ. ಈ ವರ್ಷದಲ್ಲಿ ಸಾಂಕ್ರಾಮಿಕ ರೋಗ ಹರಡುವಿಕೆಯಿಂದ ಜನರು ಮನೆಯಲ್ಲಿಯೇ ಇದ್ದು ಮನೋರಂಜನೆಯ ಮಾಧ್ಯಮಗಳಿಗೆ ಹೊಂದಿಕೊಂಡಿದ್ದರು. ಈ ಸಮಯದಲ್ಲಿ ಯೂಟ್ಯೂಬ್ ವೀಕ್ಷಕರ ಸಂಖ್ಯೆ ಹೆಚ್ಚಿದೆ ಎಂದು ಅಧ್ಯಯನ ತಿಳಿಸಿದೆ.

ಯೂಟ್ಯೂಬ್​ನಲ್ಲಿ ಪ್ರಸಾರವಾಗುವ ಜಾಹೀರಾತುಗಳಲ್ಲಿ ಐದನೆಯ ಒಂದು ಭಾಗದ ಜಾಹೀರಾತುಗಳು ವಯಸ್ಸಿಗೆ ಸೂಕ್ತವಲ್ಲದ ಜಾಹಿರಾತುಗಳಾಗಿದ್ದವು. ಅಮೇರಿಕಾದಲ್ಲಿ ಕಾನೂನು ಉಲ್ಲಂಘಿಸಿದರೆ ಭಾರೀ ದಂಡ ತೆರಬೇಕಾಗುತ್ತದೆ. ಯೂಟ್ಯೂಬ್​ನ ಮೂಲಸಂಸ್ಥೆ ಆಲ್ಫಾಬಿಟ್ ಇನ್ಕ್​, ಮಕ್ಕಳ ಗೌಪ್ಯತೆ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಾಖಲೆ ಮೊತ್ತದ ದಂಡವನ್ನು ಪಾವತಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Published On - 5:36 pm, Wed, 18 November 20