ಸದ್ಯಕ್ಕೆ ಪಾಕಿಸ್ತಾನಕ್ಕೆ ವೀಸಾ ವಿತರಣೆ ಸ್ಥಗಿತಗೊಳಿಸಿದ UAE
ಪಾಕಿಸ್ತಾನ ಮತ್ತು ಇತರ 11 ದೇಶಗಳ ಪ್ರವಾಸಿಗರಿಗೆ ಹೊಸ ವೀಸಾಗಳ ವಿತರಣೆಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು UAE ವಿದೇಶಾಂಗ ಕಚೇರಿ ತಿಳಿಸಿದೆ. 12 ದೇಶಗಳ ವೀಸಾ ವಿತರಣೆ ಸ್ಥಗಿತ.. ಪಾಕಿಸ್ತಾನ ಸೇರಿದಂತೆ 12 ದೇಶಗಳಿಗೆ ಮುಂದಿನ ಪ್ರಕಟಣೆ ಬರುವವರೆಗೂ ಯುಎಇ ಸರ್ಕಾರ ಹೊಸ ಭೇಟಿ ವೀಸಾಗಳ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರಬಹುದೆಂದು ನಾವು ತಿಳಿದುಕೊಂಡಿದ್ದೇವೆ ಎಂದು ಪಾಕ್ ವಿದೇಶಾಂಗ ಕಚೇರಿ ವಕ್ತಾರ ಜಾಹಿದ್ ಹಫೀಜ್ ಚೌಧರಿ ಹೇಳಿದ್ದಾರೆ. ಜೊತೆಗೆ ಈ ಬಗ್ಗೆ ಯುಎಇ […]
ಪಾಕಿಸ್ತಾನ ಮತ್ತು ಇತರ 11 ದೇಶಗಳ ಪ್ರವಾಸಿಗರಿಗೆ ಹೊಸ ವೀಸಾಗಳ ವಿತರಣೆಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು UAE ವಿದೇಶಾಂಗ ಕಚೇರಿ ತಿಳಿಸಿದೆ.
12 ದೇಶಗಳ ವೀಸಾ ವಿತರಣೆ ಸ್ಥಗಿತ.. ಪಾಕಿಸ್ತಾನ ಸೇರಿದಂತೆ 12 ದೇಶಗಳಿಗೆ ಮುಂದಿನ ಪ್ರಕಟಣೆ ಬರುವವರೆಗೂ ಯುಎಇ ಸರ್ಕಾರ ಹೊಸ ಭೇಟಿ ವೀಸಾಗಳ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರಬಹುದೆಂದು ನಾವು ತಿಳಿದುಕೊಂಡಿದ್ದೇವೆ ಎಂದು ಪಾಕ್ ವಿದೇಶಾಂಗ ಕಚೇರಿ ವಕ್ತಾರ ಜಾಹಿದ್ ಹಫೀಜ್ ಚೌಧರಿ ಹೇಳಿದ್ದಾರೆ. ಜೊತೆಗೆ ಈ ಬಗ್ಗೆ ಯುಎಇ ಅಧಿಕಾರಿಗಳಿಂದ ಅಧಿಕೃತ ಪ್ರಕಟಣೆಯನ್ನು ಸರ್ಕಾರ ಬಯಸುತ್ತಿದೆ ಎಂದು ಕೇಳಿಕೊಂಡಿದ್ದಾರೆ.
ಆದಾಗ್ಯೂ, ಈಗಾಗಲೇ ನೀಡಲಾದ ವೀಸಾಗಳಲ್ಲಿ ಅಮಾನತು ಅನ್ವಯಿಸುವುದಿಲ್ಲ ಎಂದು ವಿದೇಶಾಂಗ ಕಚೇರಿ ತಿಳಿಸಿದೆ. ಜೊತೆಗೆ ಯುಎಇ ಸರ್ಕಾರದ ಹೊಸ ವೀಸಾ ನಿರ್ದೇಶನಗಳಿಗೆ ತುತ್ತಾದ ಇತರ ದೇಶಗಳಲ್ಲಿ ಟರ್ಕಿ, ಇರಾನ್, ಯೆಮೆನ್, ಸಿರಿಯಾ, ಇರಾಕ್, ಸೊಮಾಲಿಯಾ, ಲಿಬಿಯಾ, ಕೀನ್ಯಾ ಮತ್ತು ಅಫ್ಘಾನಿಸ್ತಾನ ಸೇರಿವೆ.
ಸುಮಾರು ಒಂದು ವಾರದಿಂದ ಪಾಕಿಸ್ತಾನದಲ್ಲಿ 2,000 ಕ್ಕೂ ಹೆಚ್ಚು ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳಿಂದಾಗಿ ಈ ಬೆಳವಣಿಗೆ ಕಂಡುಬಂದಿದೆ ಎಂದು ತಿಳಿದುಬಂದಿದೆ.
30 ಪಾಕಿಸ್ತಾನಿಗಳಿಗೆ ಕೊರೊನಾ.. ಜೂನ್ ತಿಂಗಳಿನಲ್ಲಿ ಪಾಕಿಸ್ತಾನದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದಾಗ, ಯುಎಇ ವಿಮಾನಯಾನ ಸಂಸ್ಥೆ ಎಮಿರೇಟ್ಸ್, ಜುಲೈ 3 ರವರೆಗೆ ಪಾಕಿಸ್ತಾನದಿಂದ ಬರುವ ಪ್ರಯಾಣಿಕರ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿತ್ತು. ಅಲ್ಲದೆ, ಎಮಿರೇಟ್ಸ್ ವಿಮಾನದಲ್ಲಿ ಹಾಂಗ್ ಕಾಂಗ್‌ಗೆ ಆಗಮಿಸಿದ ಸುಮಾರು 30 ಪಾಕಿಸ್ತಾನಿಗಳಿಗೆ ಕೊರೊನಾ ವೈರಸ್ ತಗುಲಿರುವುದು ಪತ್ತೆಯಾಗಿತ್ತು.
ಕಳೆದ ತಿಂಗಳ ಅಂತ್ಯದಿಂದ ಪಾಕಿಸ್ತಾನದಲ್ಲಿ ಸೋಂಕುಗಳ ಸಂಖ್ಯೆ ಹೆಚ್ಚುತ್ತಿದೆ. ಮತ್ತು ಪಾಕಿಸ್ತಾನದಲ್ಲಿ COVID-19 ಎರಡನೇ ಅಲೆ ಹೆಚ್ಚಾಗಿದೆ ಎಂದು ಅಧಿಕಾರಿಗಳು ಘೋಷಿಸಿದ್ದಾರೆ. ಅಲ್ಲದೆ ವಿಶೇಷವಾಗಿ ಕರಾಚಿ, ಲಾಹೋರ್, ಇಸ್ಲಾಮಾಬಾದ್, ಫೈಸಲಾಬಾದ್ ಮತ್ತು ಹೈದರಾಬಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿ ರೋಗದ ಪ್ರಮಾಣ ಹೆಚ್ಚಾಗಿದೆ ಎಂದಿದ್ದಾರೆ.
ಒಟ್ಟಾರೆ ಪಾಕಿಸ್ತಾನದಲ್ಲಿ ಇದುವರೆಗೆ 3,63,380 ಕೊರೊನಾ ವೈರಸ್ ಪ್ರಕರಣಗಳು ಮತ್ತು 7,230 ಸಾವುಗಳು ದಾಖಲಾಗಿವೆ. ಪಾಕ್‌ನಲ್ಲಿ ಸದ್ಯ 30,362 ಸಕ್ರಿಯ ಕೋವಿಟ್-19 ಪ್ರಕರಣಗಳಿವೆ.
Published On - 2:24 pm, Thu, 19 November 20