AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Turkey: ಬರೀ ಮೂತ್ರ ಕುಡಿದು 12 ದಿನ ಜೀವ ಉಳಿಸಿಕೊಂಡಿದ್ದ ಸಿರಿಯಾ ವ್ಯಕ್ತಿ

Miracle Save In Turkey Earthquake: ಸಿರಿಯಾ ಮೂಲದ ಸಮೀರ್ ಮುಹಮ್ಮದ್ ಅಚ್ಚರ್ ಎಂಬ ವ್ಯಕ್ತಿ ಹಾಗೂ ಆತನ ಪತ್ನಿ ಮತ್ತು ಒಂದು ಮಗು ಟರ್ಕಿ ಭೂಕಂಪವಾಗಿ 296 ಗಂಟೆಗಳ ಬಳಿಕ ಪವಾಡಸದೃಶ ರೀತಿಯಲ್ಲಿ ಜೀವಂತ ಪತ್ತೆಯಾಗಿದ್ದಾರೆ. ಸಮೀರ್ ತಾನು ಮೂತ್ರ ಕುಡಿದು ಬದುಕಿದ್ದಾಗಿ ಹೇಳಿಕೊಂಡಿದ್ದಾನೆ.

Turkey: ಬರೀ ಮೂತ್ರ ಕುಡಿದು 12 ದಿನ ಜೀವ ಉಳಿಸಿಕೊಂಡಿದ್ದ ಸಿರಿಯಾ ವ್ಯಕ್ತಿ
ಸಾಂದರ್ಭಿಕ ಚಿತ್ರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 19, 2023 | 5:38 PM

ಇಸ್ತಾಂಬುಲ್: ಟರ್ಕಿ ಭೂಕಂಪದಿಂದ ಧರೆಗುರುಳಿದ ಕಟ್ಟಡಗಳ ಅವಶೇಷಗಳ ಅಡಿಯಿಂದ 10 ದಿನಗಳ ಬಳಿಕ ಜೀವಂತವಾಗಿ (Alive In the rubbles) ಜನರು ಸಿಕ್ಕಿದ್ದಾರೆ. 12ನೇ ದಿನ ರಕ್ಷಣಾ ಕಾರ್ಯಕರ್ತರು ಒಂದೇ ಕುಟುಂಬದ ಮೂವರನ್ನು ಜೀವಂತವಾಗಿ ಹೊರತಂದಿದ್ದರು. 13ನೇ ದಿನ 45 ವರ್ಷದ ಒಬ್ಬ ವ್ಯಕ್ತಿ ಬದುಕಿ ಬಂದಿದ್ದನು. ಟರ್ಕಿ ಭೂಕಂಪದಂಥ ಘನಘೋರ ಘಟನೆಯಲ್ಲಿ ಇಂಥ ಹತ್ತಾರು ಅಚ್ಚರಿ, ಚಮತ್ಕಾರಗಳೂ ನಡೆದಿವೆ.

ಮೊನ್ನೆ ಕಿರ್ಗಿಸ್ತಾನದ ರಕ್ಷಣಾ ತಂಡವೊಂದು ಟರ್ಕಿಯ ಅಂಟಾಕ್ಯಾ (Antakya) ನಗರದಲ್ಲಿ ಕುಸಿದಿದ್ದ ಅಪಾರ್ಟ್ಮೆಂಟ್ ಕಟ್ಟಡಗಳ ಅವಶೇಷಗಳನ್ನು ತೆರವುಗೊಳಿಸುವಾಗ ಒಂದೇ ಕುಟುಂಬದ ಮೂವರು ವ್ಯಕ್ತಿಗಳು ಜೀವಂತ ಸಿಕ್ಕಿದ್ದರು. ಸಮೀರ್ ಮುಹಮ್ಮದ್ ಅಚ್ಚರ್ (49 ವರ್ಷ), ಪತ್ನಿ ರಗಡಾ (40 ವರ್ಷ) ಮತ್ತು ಮಗ (12 ವರ್ಷ) 12 ದಿನಗಳ ಕಾಲ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಜೀವ ಉಳಿಸಿಕೊಂಡಿದ್ದರು.

ಈ ಪೈಕಿ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಸಮೀರ್ ಕುಟುಂಬದ ಇತರ ಮೂವರು ಮಕ್ಕಳೂ ಕೂಡ ಮೊದಲೇ ಸಾವನ್ನಪ್ಪಿದ್ದು, ಅವರ ಶವಗಳು ಸಿಕ್ಕಿವೆ.

ಫೆಬ್ರುವರಿ 6ರಂದು ಭೂಕಂಪ ಸಂಭವಿಸಿದ್ದು. ಅದಾಗಿ 296 ಗಂಟೆ ಕಾಲ ಸಮೀರ್ ಮುಹಮ್ಮದ್ ಅಚ್ಚರ್ ಹಾಗೂ ಅವರ ಪತ್ನಿ ಹೇಗೆ ಬದುಕಿದ್ದರು ಎಂಬುದು ಅಚ್ಚರಿ. ಈತ ತನ್ನದೇ ಮೂತ್ರ ಕುಡಿದಿದ್ದರಿಂದ ಅಷ್ಟು ದಿನ ಬದುಕಲು ಸಾಧ್ಯವಾಯಿತಂತೆ. ಹಾಗಂತ ಈತ ಹೇಳಿದನೆಂದು ಟರ್ಕಿಯ ಸ್ಥಳೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಈತನ ಪತ್ನಿ ಮತ್ತು ಮಗ ಹೇಗೆ ಜೀವ ಉಳಿಸಿಕೊಂಡಿದ್ದರು ಎಂಬುದು ಗೊತ್ತಾಗಿಲ್ಲ.

ಇದನ್ನೂ ಓದಿ: Miracle: 12 ದಿನ ನಂತರವೂ ಬದುಕುಳಿದ ವ್ಯಕ್ತಿ; ಟರ್ಕಿಯಲ್ಲಿ ಸಾವು, ನೋವು, ಅಚ್ಚರಿಗಳ ಸರಮಾಲೆ

ಭೂಕಂಪವಾಗಿ ತಾವು ವಾಸವಿದ್ದ ಕಟ್ಟಡ ಬಿದ್ದಾಗ ಇವರ ಕುಟುಂಬದವರೆಲ್ಲರೂ ಅವಶೇಷಗಳ ಅಡಿಯಲ್ಲಿ ಸಿಲುಕಿದರಂತೆ. ಮೊದಲ ಎರಡು ಮೂರು ದಿನ ಸಮೀರ್ ಧ್ವನಿಗೆ ಅವರ ಮಕ್ಕಳು ಸ್ಪಂದಿಸುತ್ತಿದ್ದರಂತೆ. ಅದಾದ ಬಳಿಕ ಧ್ವನಿ ಕೇಳಿಬರಲಿಲ್ಲ ಎಂದು ಈತ ನೋವಿನಿಂದ ಹೇಳಿಕೊಂಡಿದ್ದಾನೆ. ಸಿರಿಯಾ ಮೂಲದ ಈ ಕುಟುಂಬದವರು ಟರ್ಕಿಯಲ್ಲಿ ವಾಸವಿದ್ದರು.

ಟರ್ಕಿ ಭೂಕಂಪದಿಂದ ಇಲ್ಲಿಯವರೆಗೆ ಮೃತಪಟ್ಟಿರುವವರ ಸಂಖ್ಯೆ 46 ಸಾವಿರ ಗಡಿ ದಾಟಿ ಹೋಗಿದೆ. ಸಿರಿಯಾದಲ್ಲಿ ಸುಮಾರು 5 ಸಾವಿರದಷ್ಟು ಜನರು ಸತ್ತಿರಬಹುದು. ಟರ್ಕಿಯಲ್ಲಿ 40 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆನ್ನಲಾಗಿದೆ.

ಟರ್ಕಿ ಭೂಕಂಪದ ಹೆಚ್ಚಿನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Daily horoscope: ಇಂದು ಮಿಥುನ ರಾಶಿಯವರಿಗೆ ಆರು ಗ್ರಹಗಳ ಶುಭಫಲ
Daily horoscope: ಇಂದು ಮಿಥುನ ರಾಶಿಯವರಿಗೆ ಆರು ಗ್ರಹಗಳ ಶುಭಫಲ
ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?