Syria strikes on Turkey: ಸಿರಿಯನ್ ರಾಕೆಟ್‌ ಟರ್ಕಿ ಗಡಿಗೆ ಅಪ್ಪಳಿಸಿ 3 ಸಾವು, 6 ಮಂದಿಗೆ ಗಾಯ

ಕರ್ಕಮಿಸ್ ಕಡೆಗೆ ಹಾರಿದ ರಾಕೆಟ್‌ ಟರ್ಕಿಯ ಗಡಿ ಭಾಗಕ್ಕೆ ಅಪ್ಪಳಿಸಿ ಮಗು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ ಎಂದು ಟರ್ಕಿಯ ಆಂತರಿಕ ಸಚಿವರು ತಿಳಿಸಿದ್ದಾರೆ.

Syria strikes on Turkey: ಸಿರಿಯನ್ ರಾಕೆಟ್‌ ಟರ್ಕಿ ಗಡಿಗೆ ಅಪ್ಪಳಿಸಿ 3 ಸಾವು, 6 ಮಂದಿಗೆ ಗಾಯ
Syrian rocket
Updated By: ಅಕ್ಷಯ್​ ಪಲ್ಲಮಜಲು​​

Updated on: Nov 21, 2022 | 5:37 PM

ಇಸ್ತಾಂಬುಲ್: ಕರ್ಕಮಿಸ್ (Curcumin)ಕಡೆಗೆ ಹಾರಿದ ರಾಕೆಟ್‌ ಟರ್ಕಿ(Turkey) ಗಡಿ ಭಾಗಕ್ಕೆ ಅಪ್ಪಳಿಸಿ ಮಗು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ ಎಂದು ಟರ್ಕಿಯ ಆಂತರಿಕ ಸಚಿವರು ತಿಳಿಸಿದ್ದಾರೆ. ಈ ಘಟನೆ ಇಂದು (ಸೋಮವಾರ) ಸಿರಿಯಾದಿಂದ ಟರ್ಕಿಯ ಗಡಿ ಪಟ್ಟಣದಲ್ಲಿ ನಡೆದಿದೆ. ಈ ಘಟನೆಯಿಂದ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಒಂದು ಮಗು ಇನ್ನೊಬ್ಬರು ಶಿಕ್ಷಕ ಸಾವನ್ನಪ್ಪಿದ್ದಾರೆ ಎಂದು ಸಲೇಮಾನ್ ಸೋಯ್ಲು ದೂರದರ್ಶನದಲ್ಲಿ ತಿಳಿಸಲಾಗಿದೆ. ಒಟ್ಟು 10 ಜನರು ಗಾಯಗೊಂಡಿದ್ದಾರೆ ಎಂದು ಸಚಿವ ಮಹ್ಮುತ್ ಓಜರ್ ಹೇಳಿದ್ದಾರೆ. ಆಗ್ನೇಯ ಗಾಜಿಯಾಂಟೆಪ್ ಪ್ರಾಂತ್ಯದ ಗವರ್ನರ್ ದಾವುತ್ ಗುಲ್ ತಿಳಿಸಿರುವಂತೆ ಈ ಹಿಂದೆ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು.

ಅನಾಡೋಲು ಅಧಿಕೃತ ಪತ್ರಿಕಾ ಏಜೆನ್ಸಿಯ ಪ್ರಕಾರ, ರಾಕೆಟ್​ಗಳು ಹೈಸ್ಕೂಲ್ ಮತ್ತು ಎರಡು ಮನೆಗಳು ಮತ್ತು ಕಾರ್ಕಮಿಸ್​​ನ ಸಿರಿಯನ್ ಪಟ್ಟಣದ ಜರಾಬ್ಲಸ್‌ಗೆ ಸಂಪರ್ಕಿಸುವ ಗಡಿ ಬಳಿ ಟ್ರಕ್​ಗೆ ರಾಕೆಟ್ ಅಪ್ಪಳಿಸಿದೆ. ಭಾನುವಾರ, ಸಿರಿಯಾದಿಂದ ಹಾರಿಸಲಾದ ರಾಕೆಟ್‌ಗಳು ಗಡಿ ದಾಟಿ ಬಂದು ನೆಲಕ್ಕೆ ಅಪ್ಪಳಿಸಿದ ಪರಿಣಾಮ ಆರು ಪೊಲೀಸರು ಮತ್ತು ಇಬ್ಬರು ಸೈನಿಕರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.

ಇದನ್ನು ಓದಿ: Turkey Blast ಇಸ್ತಾಂಬುಲ್‌ನಲ್ಲಿ ಬಾಂಬ್ ಇರಿಸಿದ್ದು ಸಿರಿಯಾದ ಮಹಿಳೆ: ಟರ್ಕಿ ಪೊಲೀಸ್

ಉತ್ತರ ಸಿರಿಯಾ ಮತ್ತು ಇರಾಕ್‌ನಾದ್ಯಂತ ನಿಷೇಧಿತ ಕುರ್ದಿಶ್ ಭಯೋತ್ಪಾದಕರ ನೆಲೆಗಳ ವಿರುದ್ಧ ಟರ್ಕಿ ಭಾನುವಾರ ವೈಮಾನಿಕ ದಾಳಿ ನಡೆಸಿತು, ಈ ರಾಕೆಟ್​ಗಳನ್ನು ಟರ್ಕಿಯ ನೆಲದ ಮೇಲೆ ಭಯೋತ್ಪಾದ ದಾಳಿಗಳನ್ನು ಪ್ರಾರಂಭಿಸಲು ಬಳಸಲಾಗುತ್ತಿದೆ ಎಂದು ಹೇಳಿದೆ. ಉತ್ತರ ಮತ್ತು ಈಶಾನ್ಯ ಸಿರಿಯಾದಲ್ಲಿ ರಾತ್ರಿ ದಾಳಿಗಳು ನಡೆದು 31 ಜನರು ಸಾವನ್ನಪ್ಪಿದ್ದಾರೆ ಎಂದು ಬ್ರಿಟಿಷ್ ಮೂಲದ ಮೇಲ್ವಿಚಾರಣಾ ಗುಂಪು ಸಿರಿಯನ್ ಮಾನವ ಹಕ್ಕುಗಳ ವೀಕ್ಷಣಾಲಯ ಹೇಳಿದೆ.

ಆಪರೇಷನ್ ಕ್ಲಾ-ಸ್ವೋರ್ಡ್ ಮೂಲಕ ಕೇಂದ್ರ ಇಸ್ತಾನ್‌ಬುಲ್‌ನಲ್ಲಿ ಸ್ಫೋಟ ಸಂಭವಿಸಿದ ಒಂದು ವಾರದ ನಂತರ ಆರು ಜನರು ಸಾವನ್ನಪ್ಪಿದರು ಮತ್ತು 81 ಮಂದಿ ಗಾಯಗೊಂಡರು, ಈ ದಾಳಿಯು ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿ (ಪಿಕೆಕೆ) ಮೇಲೆ ಎಂದು ಟರ್ಕಿ ಆರೋಪಿಸಿದೆ. PKKಯಲ್ಲಿ ದಶಕಗಳಿಂದ ರಕ್ತಪಾತದ ದಂಗೆಯನ್ನು ನಡೆಸಿದೆ ಮತ್ತು ಅಂಕಾರಾ ಮತ್ತು ಅದರ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳಿಂದ ಭಯೋತ್ಪಾದಕ ಗುಂಪು ಎಂದು ಗೊತ್ತುಪಡಿಸಲಾಗಿದೆ. ಆದರೆ ಇಸ್ತಾಂಬುಲ್ ಸ್ಫೋಟದಲ್ಲಿ ಭಾಗಿಯಾಗಿರುವುದನ್ನು ನಿರಾಕರಿಸಿದೆ.

ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:37 pm, Mon, 21 November 22