ಡಿಸೆಂಬರ್‌ನಲ್ಲಿ ಭೂಮಿಯತ್ತ ಧಾವಿಸಲಿದೆ ಐಫೆಲ್ ಟವರ್‌ನ ಗಾತ್ರದ T4660 Nereus ಹೆಸರಿನ ಹೊಸ ಕ್ಷುದ್ರಗ್ರಹ

| Updated By: ರಶ್ಮಿ ಕಲ್ಲಕಟ್ಟ

Updated on: Nov 09, 2021 | 3:30 PM

T4660 Nereus ನಾಸಾ ಪ್ರಕಾರ, ಇದು 'ಮೊಟ್ಟೆಯ ಆಕಾರ' ಮತ್ತು ಫುಟ್‌ಬಾಲ್ ಮೈದಾನಕ್ಕಿಂತ ಮೂರು ಪಟ್ಟು ದೊಡ್ಡದಾಗಿದ್ದರೂ, ಡಿಸೆಂಬರ್ 11 ರಂದು ಮಾತ್ರ ಭೂಮಿಯ ಸಮೀಪ ಹಾದುಹೋಗುತ್ತದೆ.

ಡಿಸೆಂಬರ್‌ನಲ್ಲಿ ಭೂಮಿಯತ್ತ ಧಾವಿಸಲಿದೆ ಐಫೆಲ್ ಟವರ್‌ನ ಗಾತ್ರದ T4660 Nereus ಹೆಸರಿನ ಹೊಸ ಕ್ಷುದ್ರಗ್ರಹ
ಪ್ರಾತಿನಿಧಿಕ ಚಿತ್ರ
Follow us on

ವಾಷಿಂಗ್ಟನ್: ಐಫೆಲ್ ಟವರ್ (Eiffel Tower) ಗಾತ್ರದ ಕ್ಷುದ್ರಗ್ರಹವು (asteroid) ನೇರವಾಗಿ ಭೂಮಿಯತ್ತ ಸಾಗುತ್ತಿದೆ.  ನಾಸಾ ಪ್ರಕಾರ ಇದು ಮನುಕುಲಕ್ಕೆ ಯಾವುದೇ ಹಾನಿ ಉಂಟುಮಾಡುವುದಿಲ್ಲವಾದ್ದರಿಂದ ಗಾಬರಿಯಾಗುವ ಅಗತ್ಯವಿಲ್ಲ. ಟಿ4660 ನೆರಿಯಸ್ (T4660 Nereus) ಅನ್ನು ‘ಸಂಭಾವ್ಯ ಅಪಾಯಕಾರಿ ಕ್ಷುದ್ರಗ್ರಹ’ (Potentially Hazardous Asteroid PHA) ಎಂದು ಹೇಳಲಾಗಿದೆ. ನಾಸಾ ಪ್ರಕಾರ, ಇದು ‘ಮೊಟ್ಟೆಯ ಆಕಾರ’ ಮತ್ತು ಫುಟ್‌ಬಾಲ್ ಮೈದಾನಕ್ಕಿಂತ ಮೂರು ಪಟ್ಟು ದೊಡ್ಡದಾಗಿದ್ದರೂ, ಡಿಸೆಂಬರ್ 11 ರಂದು ಮಾತ್ರ ಭೂಮಿಯ ಸಮೀಪ ಹಾದುಹೋಗುತ್ತದೆ. ಇದು 330 ಮೀಟರ್ ಉದ್ದವಾಗಿದ್ದು ಇತರ ಎಲ್ಲಾ ಕ್ಷುದ್ರಗ್ರಹಗಳಿಗಿಂತ ಶೇ 90 ರಷ್ಟು ದೊಡ್ಡದಾಗಿದೆ. ಬಾಹ್ಯಾಕಾಶ ಉಲ್ಲೇಖದ ಪ್ರಕಾರ ದೊಡ್ಡದಾದವುಗಳಿಗೆ ಹೋಲಿಸಿದರೆ ಇದು ಚಿಕ್ಕದಾಗಿದೆ. ಅದೃಷ್ಟವಶಾತ್ ನೆರಿಯಸ್ ನಮ್ಮ ಗ್ರಹಕ್ಕೆ ಅಪಾಯವನ್ನುಂಟು ಮಾಡುವುದಿಲ್ಲ ಮತ್ತು 3.9 ಮಿಲಿಯನ್ ಕಿಲೋಮೀಟರ್ ದೂರದಲ್ಲಿ ಹಾದುಹೋಗುತ್ತದೆ. ನಾಸಾ ಪ್ರಕಾರ, ಕ್ಷುದ್ರಗ್ರಹವು ಪ್ರತಿ 664 ದಿನಗಳಿಗೊಮ್ಮೆ ಸೂರ್ಯನನ್ನು ಸುತ್ತುತ್ತದೆ. ಇದು ಭೂಮಿಯ ಹಿಂದೆ ಬಹಳ ದೂರದಲ್ಲಿ ಹಾದು ಹೋಗಲಿದ್ದು ಮಾರ್ಚ್ 2, 2031 ರವರೆಗೆ ಮತ್ತೆ ಭೂಗೋಳದ ಸಮೀಪಕ್ಕೆ ಬರಲು ನಿರೀಕ್ಷಿಸಲಾಗುವುದಿಲ್ಲ. ನೆರಿಯಸ್ ಒಂದು ಹೊಸ ಕ್ಷುದ್ರಗ್ರಹವಲ್ಲ.

1982 ರಲ್ಲಿ ಅಮೆರಿಕ ಖಗೋಳಶಾಸ್ತ್ರಜ್ಞರಾದ ಎಲೀನರ್ ಎಫ್. ಹೆಲಿನ್ ಇದನ್ನು ಮೊದಲ ಬಾರಿಗೆ ಕಂಡುಹಿಡಿದರು. ನಂತರ ಇದನ್ನು ಅಪೋಲೋ ಗುಂಪಿನ ಕ್ಷುದ್ರಗ್ರಹಗಳ ಸದಸ್ಯ ಎಂದು ಗುರುತಿಸಲಾಯಿತು. ಇದು ಸೂರ್ಯನನ್ನು ಸುತ್ತುತ್ತಿರುವಾಗ ಭೂಮಿಯ ಮಾರ್ಗವನ್ನು ದಾಟುತ್ತದೆ.

ಇತರ ಅಪೊಲೊ-ವರ್ಗದ ಕ್ಷುದ್ರಗ್ರಹಗಳಂತೆ, ನೆರಿಯಸ್ ನ ಕಕ್ಷೆಯು ಅದನ್ನು ನಿಯಮಿತವಾಗಿ ಭೂಮಿಯ ಸಮೀಪಕ್ಕೆ ತರುತ್ತದೆ. ಇದು ಭೂಮಿಗಿಂತ ಸುಮಾರು ಎರಡು ಪಟ್ಟು ವೇಗವಾಗಿ ಸುತ್ತುತ್ತದೆ, ನಾಸಾ ಸಂಶೋಧಕರು ಈ ಹಿಂದೆ ಕ್ಷುದ್ರಗ್ರಹ ನೆರಿಯಸ್‌ಗೆ ಯಾತ್ರೆಗಳನ್ನು ಯೋಜಿಸಿದ್ದರು. ಆದಾಗ್ಯೂ, ವಿವಿಧ ಕಾರಣಗಳಿಗಾಗಿ, ಯೋಜನೆಗಳು ಕಾರ್ಯರೂಪಕ್ಕೆ ಬರಲಿಲ್ಲ. ಬಾಹ್ಯಾಕಾಶ ಸಂಸ್ಥೆಯು ನಿಯರ್ ಅರ್ಥ್ ಆಸ್ಟೆರಾಯ್ಡ್ ರೆಂಡೆಜ್ವಸ್ – ಶೂಮೇಕರ್ (NEAR Shoemaker) ಎಂಬ ಕ್ಷುದ್ರಗ್ರಹಕ್ಕೆ ತನಿಖೆಯನ್ನು ನಿಯೋಜಿಸಲು ಯೋಜಿಸಿದೆ. ಮತ್ತೊಂದೆಡೆ ಜಪಾನ್ ರೋಬೋಟಿಕ್ ಬಾಹ್ಯಾಕಾಶ ನೌಕೆ ಹಯಬುಸಾವನ್ನು ನೆರಿಯಸ್‌ಗೆ ನಿಯೋಜಿಸಲು ಪರಿಗಣಿಸಿದೆ. ಬಿಗ್ ಬೆನ್ ಗಡಿಯಾರ ಗೋಪುರದ ಗಾತ್ರದ ಕ್ಷುದ್ರಗ್ರಹವು ಸೆಪ್ಟೆಂಬರ್‌ನಲ್ಲಿ ಭೂಮಿಯ ಕಕ್ಷೆಗೆ ಬೀಳುತ್ತದೆ ಎಂದು ಹೇಳಲಾಗಿತ್ತು. ಇದು ಭೂಮಿಯಿಂದ ಕೇವಲ 1,804,450 ಮೈಲುಗಳಷ್ಟು ದೂರದಲ್ಲಿದೆ.

ಇದನ್ನೂ ಓದಿ: Rafale deal ರಾಹುಲ್ ಗಾಂಧಿ ಉತ್ತರಿಸಲಿ: ಹೊಸ ರಫೇಲ್ ವರದಿ ಕುರಿತು ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ