AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾನವ ಕಳ್ಳಸಾಗಣೆದಾರರ ನೆರವಿನಿಂದ ಅಫ್ಘಾನಿಸ್ತಾನ ತೊರೆಯುತ್ತಿರುವ ಜನ; ಗಡಿಗಳಿಂದ ಪರಾರಿ

ಝರಂಜ್​​ನಿಂದ ಜನ ಹೋಗುತ್ತಿರುವುದು ತಾಲಿಬಾನಿಗಳಿಗೆ ಗೊತ್ತಿಲ್ಲ ಎಂದಲ್ಲ. ಅಲ್ಲಿ ಸ್ಥಳೀಯವಾಗಿ ಕಾವಲಿರುವ ತಾಲಿಬಾನ್​ ಉಗ್ರರರ ಗಮನಕ್ಕೆ ಇದು ಹೋಗಿದೆ. ಆದರೆ ಮಾನವ ಕಳ್ಳಸಾಗಣೆದಾರರು ಅವರಿಗೆ ಸ್ವಲ್ಪ ಹಣ ನೀಡಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ.

ಮಾನವ ಕಳ್ಳಸಾಗಣೆದಾರರ ನೆರವಿನಿಂದ ಅಫ್ಘಾನಿಸ್ತಾನ ತೊರೆಯುತ್ತಿರುವ ಜನ; ಗಡಿಗಳಿಂದ ಪರಾರಿ
ಸಾಂಕೇತಿಕ ಚಿತ್ರ
TV9 Web
| Edited By: |

Updated on: Nov 10, 2021 | 8:53 AM

Share

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ (Taliban)​ ಆಡಳಿತಕ್ಕೆ ಬಂದ ನಂತರ ಅಲ್ಲಿನ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಜನರ ಜೀವನ, ಕೆಲಸದ ಶೈಲಿಗಳನ್ನೂ ತಾಲಿಬಾನ್​ ಬದಲಿಸಿದೆ. ಈ ಮಧ್ಯೆ ಅಫ್ಘಾನಿಸ್ತಾನವನ್ನು ಬಿಟ್ಟು ಹೋಗುವ ಅಲ್ಲಿನ ಜನರ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ ನೇರಾನೇರ ಹೋದರೆ ತಾಲಿಬಾನಿಗಳು ತಮಗೆ ತೊಂದರೆ ಉಂಟು ಮಾಡಬಹುದು ಎಂಬ ಕಾರಣಕ್ಕೆ ಕೆಲವು ಅಫ್ಘಾನರು ಮಾನವ ಕಳ್ಳಸಾಗಣೆದಾರರ ಸಹಾಯದಿಂದ ದೇಶಬಿಡುತ್ತಿದ್ದಾರೆ. ಕಾರು, ಟ್ರಕ್​​ಗಳಲ್ಲಿ ತಮ್ಮ ಲಗೇಜ್​ಗಳನ್ನು ಸಾಗಿಸುತ್ತಿದ್ದಾರೆ.

ಅಫ್ಘಾನಿಸ್ತಾನದ ಝರಂಜ್​ ಎಂಬ ದುರ್ಗಮ ಪ್ರದೇಶದ ಜನರು ಈ ಮಾರ್ಗದಲ್ಲಿಯೇ ಹೋಗುತ್ತಿದ್ದಾರೆ. ಈ ಪ್ರದೇಶ ಅಫ್ಘಾನಿಸ್ತಾನವನ್ನು ಪಾಕಿಸ್ತಾನ ಮತ್ತು ಇರಾನ್​​ನೊಟ್ಟಿಗೆ ಸೇರಿಸುವ ಗಡಿ ಪ್ರದೇಶದಲ್ಲಿದ್ದು, ಮಾನವ ಕಳ್ಳಸಾಗಣೆದಾರರು ಇವರಿಗೆ ಸಹಾಯ ಮಾಡುತ್ತಿದ್ದಾರೆ. ಅಫ್ಘಾನ್​​​ನಲ್ಲಿ ಆರ್ಥಿಕ ಸಮಸ್ಯೆ ಹೆಚ್ಚಾಗಿದೆ. ಹೆಜ್ಜೆಹೆಜ್ಜೆಗೂ ಹಿಂಸೆಯನ್ನು ಎದುರಿಸುವ ಸನ್ನಿವೇಶ ಇದೆ. ಈ ಹೊತ್ತಲ್ಲಿ ಅಫ್ಘಾನ್​​ನ ಮಂದಿ ಹೇಗೆ ಪಲಾಯನ ಮಾಡುತ್ತಿದ್ದಾರೆ ಎಂಬುದನ್ನು ಬಿಬಿಸಿ ಚಿತ್ರಗಳ ಮೂಲಕ ವರದಿ ಮಾಡಿದೆ.

ತಾಲಿಬಾನ್ ಉಗ್ರರಿಗಿಂತಲೂ ಮನುಷ್ಯರನ್ನು ಕಳ್ಳತನ ಮಾಡುವವರೇ ಎಷ್ಟೋ ಪಾಲು ವಾಸಿ ಎಂದು ಭಾವಿಸಿರುವ ಝರಂಜಿಯ ಜನರು, ತಮ್ಮ ಲಗೇಜ್​​ಗಳನ್ನೆಲ್ಲ ಕಾರಿನಲ್ಲಿ ತುಂಬಿಕೊಂಡು ಹೋಗಿದ್ದಾರೆ. ಸುಮಾರು 18-20 ಜನರ ಈಗಾಗಲೇ ಅಲ್ಲಿಂದ ತೆರಳಿದ್ದಾರೆ. ಅದರಲ್ಲೂ ಒಂದಷ್ಟು ಜನ ಪಾಕಿಸ್ತಾನ ಮರಭೂಮಿಯತ್ತ ಪ್ರಯಾಣ ಬೆಳೆಸಿದ್ದರೆ, ಇನ್ನೊಂದಷ್ಟು ಮಂದಿ ಇರಾನ್​​ಗೆ ಕಾಲಿಟ್ಟಿದ್ದಾರೆ.

ಹೀಗೆ ಗಡಿಭಾಗಗಳಿಂದ ಮಾನವ ಕಳ್ಳಸಾಗಣೆದಾರರ ಜತೆ ಬೇರೆ ದೇಶಗಳಿಗೆ ಹೋಗಲು ವೀಸಾ, ಪಾಸ್​ಪೋರ್ಟ್​ ಅಗತ್ಯವಿರುವಿದಲ್ಲ. ತಾಲಿಬಾನಿಗಳು ತಡೆಒಡ್ಡುವುದಿಲ್ಲ. ಆದರೆ ಈ ಕಳ್ಳಸಾಗಣೆದಾರರು ಪೂರ್ವ ಒಪ್ಪಂದದಂತೆ ತಾಲಿಬಾನಿಗಳಿಗೆ ಸಣ್ಣಮಟ್ಟದ ಶುಲ್ಕ ನೀಡಬೇಕಾಗಿದೆ. ಅಫ್ಘಾನಿಸ್ತಾನದಿಂದ ಪಲಾಯನ ಮಾಡುತ್ತಿರುವವರಲ್ಲಿ ಪುರುಷರೇ ಹೆಚ್ಚಾಗಿದ್ದಾರೆ. ಅವರು ಹೊಸ ಉದ್ಯೋಗ ಹುಡುಕಿ ಹಿಡಿಯಲು ಹೀಗೊಂದು ಮಾರ್ಗ ಕಂಡುಹಿಡಿದುಕೊಂಡಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

ಝರಂಜ್​​ನಿಂದ ಜನ ಹೋಗುತ್ತಿರುವುದು ತಾಲಿಬಾನಿಗಳಿಗೆ ಗೊತ್ತಿಲ್ಲ ಎಂದಲ್ಲ. ಅಲ್ಲಿ ಸ್ಥಳೀಯವಾಗಿ ಕಾವಲಿರುವ ತಾಲಿಬಾನ್​ ಉಗ್ರರರ ಗಮನಕ್ಕೆ ಇದು ಹೋಗಿದೆ. ಆದರೆ ಮಾನವ ಕಳ್ಳಸಾಗಣೆದಾರರು ಅವರಿಗೆ ಸ್ವಲ್ಪ ಹಣ ನೀಡಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಒಂದು ಟ್ರಕ್  ಅಥವಾ ಕಾರು ಗಡಿಯಿಂದ ಹೊರಹೋಗುವಾಗ 10-11 ಯುಎಸ್​ ಡಾಲರ್​ ಗಳನ್ನು ಅಲ್ಲಿರುವ ತಾಲಿಬಾನ್​ ಸೈನಿಕರಿಗೆ ನೀಡಿದರೆ ಅವರು ಬಿಟ್ಟುಬಿಡುತ್ತಾರೆ.  ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಒಬ್ಬ ತಾಲಿಬಾನಿ, ಅಫ್ಘಾನಿಸ್ತಾನದ ಆರ್ಥಿಕತೆ ತಳಕಂಡಿದೆ. ನಮ್ಮ ಸರ್ಕಾರವನ್ನು ಅಂತಾರಾಷ್ಟ್ರೀಯ ಸಮುದಾಯ ಮಾನ್ಯತೆ ಮಾಡುತ್ತಿಲ್ಲ. ಹಾಗಾಗಿ ಜನರು ವಲಸೆ ಹೋಗುವುದನ್ನು ತಪ್ಪಿಸುವುದು ಸಾಧ್ಯವೂ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ: ಭೂಮಿಯೊಳಗಿನ ಕೆಲ ರಾಸಾಯನಿಕ ಪ್ರಕ್ರಿಯೆಗಳಿಂದ ಲಘು ಭೂಕಂಪನ ಸಂಭವಿಸುತ್ತಿದೆ -ತಜ್ಞರ ಅಧ್ಯಯನ

ದೇವೇಗೌಡರ ಈ ನಿರ್ಧಾರದ ಹಿಂದಿರುವ ರಾಜಕೀಯ ಲೆಕ್ಕಾಚಾರವೇನು ಗೊತ್ತಾ?
ದೇವೇಗೌಡರ ಈ ನಿರ್ಧಾರದ ಹಿಂದಿರುವ ರಾಜಕೀಯ ಲೆಕ್ಕಾಚಾರವೇನು ಗೊತ್ತಾ?
ರಾಯರ ಮಠಕ್ಕೂ ತಟ್ಟಿದ ಭಾಷಾ ವಿವಾದ: ತೆಲುಗು ಭಾಷಿಕರ ವಿರೋಧ
ರಾಯರ ಮಠಕ್ಕೂ ತಟ್ಟಿದ ಭಾಷಾ ವಿವಾದ: ತೆಲುಗು ಭಾಷಿಕರ ವಿರೋಧ
ಡಬಲ್ ಎಲಿಮಿನೇಷನ್​​: ಮನೆ ಮಂದಿಗೆ ಶಾಕ್ ಕೊಟ್ಟ ಬಿಗ್​​ಬಾಸ್
ಡಬಲ್ ಎಲಿಮಿನೇಷನ್​​: ಮನೆ ಮಂದಿಗೆ ಶಾಕ್ ಕೊಟ್ಟ ಬಿಗ್​​ಬಾಸ್
ಏಕಾಏಕಿ ಮುಗಿಬಿದ್ದ ಬೀದಿ ನಾಯಿಗಳಿಂದ ದಂಪತಿ, ಮಗು ಕೂದಲೆಳೆ ಅಂತರದಲ್ಲಿ ಪಾರು
ಏಕಾಏಕಿ ಮುಗಿಬಿದ್ದ ಬೀದಿ ನಾಯಿಗಳಿಂದ ದಂಪತಿ, ಮಗು ಕೂದಲೆಳೆ ಅಂತರದಲ್ಲಿ ಪಾರು
ಹೊಸ ವರ್ಷಾಚರಣೆ: ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷಾಚರಣೆ: ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಹೇಗಿರುತ್ತೆ ಗೊತ್ತಾ?
‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?
‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!