ನ್ಯಾನ್ಸಿ ಪೆಲೋಸಿ ಭೇಟಿಯ ನಂತರ ಚೀನಾ ತೈವಾನ್ ನಡುಗಡ್ಡೆಯ ಸುತ್ತಮುತ್ತ ಮಿಲಿಟರಿ ಕವಾಯತುಗಳನ್ನು ಹೆಚ್ಚಿಸಿದೆ: ತೈವಾನ್ ಸರ್ಕಾರ

ಚೀನಾದ ಮುಂದುವರೆದ ಮಿಲಿಟರಿ ಕವಾಯತು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿಲ್ಲವೇ ಮತ್ತು ನಾಗರಿಕ ಹಡಗು ಮತ್ತು ವಿಮಾನಗಳಗೆ ಹೊಸ ಎಚ್ಚರಿಕೆಯನ್ನು ನೀಡಲಾಗುವುದೇ ಎಂದು ವ್ಯಾಂಗ್ ಅವರನ್ನು ಮಾಧ್ಯಮದವರು ಕೇಳಿದರು.

ನ್ಯಾನ್ಸಿ ಪೆಲೋಸಿ ಭೇಟಿಯ ನಂತರ ಚೀನಾ ತೈವಾನ್ ನಡುಗಡ್ಡೆಯ ಸುತ್ತಮುತ್ತ ಮಿಲಿಟರಿ ಕವಾಯತುಗಳನ್ನು ಹೆಚ್ಚಿಸಿದೆ: ತೈವಾನ್ ಸರ್ಕಾರ
ತೈವಾನ್ ನಡುಗಡ್ಡೆಯ ಮೇಲೆ ಚೀನಾ ಸೇನೆಯ ಕವಾಯತು
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 09, 2022 | 8:02 AM

ತೈಪೆ: ಅಮೆರಿಕಾ ಸದನ ಪ್ರತಿನಿಧಿ ಸ್ಪೀಕರ್ ನ್ಯಾನ್ಸಿ ಪೆಲೋಸಿ (Nancy Pelosi) ಅವರು ತನ್ನ ವಿರೋಧದ ನಡುವೆಯೂ ತೈವಾನ್ಗೆ (Taiwan) ಭೇಟಿ ನೀಡಿದ್ದರಿಂದ ಕೆರಳಿರುವ ಚೀನಾ (China) ಪ್ರತೀಕಾರದ ಭಾಗವಾಗಿ ತೈವಾನ್ ನಡುಗಡ್ಡೆ ಮೇಲೆ ಸೇನಾ ಕವಾಯತುಗಳನ್ನು ಹೆಚ್ಚಿಸಿದೆ ಎಂದು ಹೇಳಿರುವ ತೈವಾನ್ ಸರ್ಕಾರ ಚೀನಾದ ಧೋರಣೆಯನ್ನು ತೀವ್ರವಾಗಿ ಖಂಡಿಸಿದೆ.

‘ತನ್ನ ಮಿಲಿಟರಿ ಕವಾಯತುಗಳನ್ನು ಹೆಚ್ಚಿಸಲು ಚೀನಾ ತೆಗೆದುಕೊಂಡಿರುವ ನಿರ್ಧಾರವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬಲವಾಗಿ ಖಂಡಿಸುತ್ತದೆ. ಚೀನಾದ ಆಕ್ರಮಣಶೀಲತೆ ಮತ್ತು ಪ್ರಚೋದನೆಯು ತೈವಾನ್ ಜಲಸಂಧಿಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಪಾಡಿಕೊಳ್ಳುವ ಒಪ್ಪಂದವನ್ನು ಉಲ್ಲಂಘಿಸಿದಂತಾಗಿದೆ ಮತ್ತು ಸದರಿ ಪ್ರದೇಶದಲ್ಲಿ ಉದ್ರಿಕ್ತ ವಾತಾವರಣವನ್ನು ನಿರ್ಮಿಸಿದೆ,’ ಎಂದು ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.

ತೈವಾನ್ ವ್ಯಕ್ತಪಡಿಸಿರುವ ಆಕ್ಷೇಪಣೆಗೆ ಪ್ರತಿಕ್ರಿಯಿಸಿರುವ ಬೀಜಿಂಗ್ ಸೋಮವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ತೈವಾನ್ ಚೀನಾದ ಒಂದು ಭಾಗವಾಗಿದೆ ಮತ್ತು ತನ್ನ ಸ್ವಂತ ನೀರಿನ ಮೇಲೆ ಸೇನಾ ಕವಾಯತುಗಳನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ಅತ್ಯಂತ ವೃತ್ತಿಪರವಾಗಿ ನಡೆಸುತ್ತಿದೆ, ಎಂದು ಹೇಳಿದೆ.

ಸಂಬಂಧಪಟ್ಟ ಎಲ್ಲ ಇಲಾಖೆಗಳು ಸೂಕ್ತವಾದ ಸಮಯದಲ್ಲಿ ಪ್ರಕಟಣೆಗಳನ್ನು ದೇಶೀಯ ಮತ್ತು ಅಂತರರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಬಿಡುಗಡೆ ಮಾಡುತ್ತಲೇ ಇವೆ, ಎಂದು ಚೀನಾ ವಿದೇಶಾಂಗ ಸಚಿವಾಲಯದ ಬಾತ್ಮೀದಾರ ವ್ಯಾಂಗ್ ವೆನ್ಬಿನ್ ನಿಯಮಿತ ಪತ್ರಿಕಾ ಗೋಷ್ಟಿಯೊಂದರಲ್ಲಿ ಹೇಳಿದ್ದಾರೆ.

ಚೀನಾದ ಮುಂದುವರೆದ ಮಿಲಿಟರಿ ಕವಾಯತು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿಲ್ಲವೇ ಮತ್ತು ನಾಗರಿಕ ಹಡಗು ಮತ್ತು ವಿಮಾನಗಳಗೆ ಹೊಸ ಎಚ್ಚರಿಕೆಯನ್ನು ನೀಡಲಾಗುವುದೇ ಎಂದು ವ್ಯಾಂಗ್ ಅವರನ್ನು ಮಾಧ್ಯಮದವರು ಕೇಳಿದರು.

ತೈವಾನ್ ತಾನೊಂದು ಸ್ವತಂತ್ರ ರಾಷ್ಟ್ರವೆಂದು ಹೇಳಿಕೊಂಡರೂ ಬೀಜಿಂಗ್ ಮಾತ್ರ ಅದು ಚೀನಾದ ಭಾಗವೆಂದು ಹೇಳುತ್ತಿದೆ. ಸೋಮವಾರದಂದು ಈ ನಡುಗಡ್ಡೆಯ ಮೇಲೆ ಚೀನಾ ಹೊಸ ಮಿಲಿಟಿರಿ ಕವಾಯತುಗಳನ್ನು ಆರಂಭಿಸಿತು. ಚೀನಾದ ಇದನ್ನು ಮಾಡುತ್ತಿರುವುದೆಲ್ಲ ಅಮೆರಿಕಾ ಸದನ ಪ್ರತಿನಿಧಿ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ಕಳೆದ ವಾರ ತೈಪೆ ಭೇಟಿ ನೀಡಿದ್ದರ ವಿರುದ್ಧ ತನ್ನ ಅಸಮಾಧಾನ ಪ್ರದರ್ಶಿಸಲು.

ಜಾಮೀನು ಸಿಕ್ಕ 6 ದಿನದ ಬಳಿಕ ಶಿವಮೊಗ್ಗ ಜೈಲಿನಿಂದ ಆರೋಪಿ ಜಗದೀಶ್ ರಿಲೀಸ್​
ಜಾಮೀನು ಸಿಕ್ಕ 6 ದಿನದ ಬಳಿಕ ಶಿವಮೊಗ್ಗ ಜೈಲಿನಿಂದ ಆರೋಪಿ ಜಗದೀಶ್ ರಿಲೀಸ್​
ಮುಖ್ಯಮಂತ್ರಿ ಮಾತಾಡುತ್ತಿದ್ದರೂ ಹೊರಗೆ ಹೋದ ವಿರೋಧಪಕ್ಷಗಳ ಶಾಸಕರು
ಮುಖ್ಯಮಂತ್ರಿ ಮಾತಾಡುತ್ತಿದ್ದರೂ ಹೊರಗೆ ಹೋದ ವಿರೋಧಪಕ್ಷಗಳ ಶಾಸಕರು
ಜಮೀರ್ ಉತ್ತರದಿಂದ ಬಿಜೆಪಿ ಸಮಾಧಾನವಾಗದಿದ್ದಾಗ ಮುಖ್ಯಮಂತ್ರಿ ಉತ್ತರ
ಜಮೀರ್ ಉತ್ತರದಿಂದ ಬಿಜೆಪಿ ಸಮಾಧಾನವಾಗದಿದ್ದಾಗ ಮುಖ್ಯಮಂತ್ರಿ ಉತ್ತರ
ಪ್ರಿನ್ಸಿಪಾಲ್​ಗೆ ಅಡುಗೆ ಮಾಡಿಕೊಡಲು 8ನೇ ಕ್ಲಾಸ್ ಹುಡುಗನಿಗೆ ಒತ್ತಾಯ
ಪ್ರಿನ್ಸಿಪಾಲ್​ಗೆ ಅಡುಗೆ ಮಾಡಿಕೊಡಲು 8ನೇ ಕ್ಲಾಸ್ ಹುಡುಗನಿಗೆ ಒತ್ತಾಯ
ಚೈತ್ರಾ ಮೋಸದಾಟ; ಮನ ಒಲಿಸಲು ಹೊಸ ಉಪಾಯ ಕಂಡುಹಿಡಿದ ರಜತ್
ಚೈತ್ರಾ ಮೋಸದಾಟ; ಮನ ಒಲಿಸಲು ಹೊಸ ಉಪಾಯ ಕಂಡುಹಿಡಿದ ರಜತ್
ಸದನದಲ್ಲಿ ಸಚಿವ ಜಮೀರ್ ಅಹ್ಮದ್ ನೆರವಿಗೆ ಧಾವಿಸಿದ ಸಿದ್ದರಾಮಯ್ಯ
ಸದನದಲ್ಲಿ ಸಚಿವ ಜಮೀರ್ ಅಹ್ಮದ್ ನೆರವಿಗೆ ಧಾವಿಸಿದ ಸಿದ್ದರಾಮಯ್ಯ
ಹೊರಡುವ ಮುನ್ನ ಸುದೀಪ್, ಉಪೇಂದ್ರಗೆ ಶುಭ ಹಾರೈಸಿದ ಶಿವಣ್ಣ
ಹೊರಡುವ ಮುನ್ನ ಸುದೀಪ್, ಉಪೇಂದ್ರಗೆ ಶುಭ ಹಾರೈಸಿದ ಶಿವಣ್ಣ
ವಿರೋಧಪಕ್ಷದವರು ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸಬೇಕು: ಮುಖ್ಯಮಂತ್ರಿ
ವಿರೋಧಪಕ್ಷದವರು ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸಬೇಕು: ಮುಖ್ಯಮಂತ್ರಿ
Amit Shah Press Meet Live:ಅಮಿತ್​ ಶಾ ತುರ್ತು ಸುದ್ದಿಗೋಷ್ಠಿ ನೇರಪ್ರಸಾರ
Amit Shah Press Meet Live:ಅಮಿತ್​ ಶಾ ತುರ್ತು ಸುದ್ದಿಗೋಷ್ಠಿ ನೇರಪ್ರಸಾರ
ತಲೆ ಚಚ್ಚಿಕೊಂಡು ಕಣ್ಣೀರು ಹಾಕಿದ ಚೈತ್ರಾ ಕುಂದಾಪುರ
ತಲೆ ಚಚ್ಚಿಕೊಂಡು ಕಣ್ಣೀರು ಹಾಕಿದ ಚೈತ್ರಾ ಕುಂದಾಪುರ