ಸಾಯುವುದಕ್ಕೂ ಮೊದಲು 3 ಲಕ್ಷಕ್ಕೆ ಜೀವವಿಮೆ ಖರೀದಿಸಿದ್ದ ತಾಲಿಬಾನ್​ ಮುಖ್ಯಸ್ಥ!

|

Updated on: Dec 13, 2020 | 9:35 PM

2016 ಮೇ 21ರಂದು ಮನ್ಸೂರ್​​ನನ್ನು ಪಾಕಿಸ್ತಾನ-ಇರಾನ್​ ಗಡಿಯಲ್ಲಿ ಹೊಡೆದುರುಳಿಸಲಾಗಿತ್ತು. ಈತ 2015ರ ಜುಲೈ ತಿಂಗಳಿಂದ ತಾಲಿಬಾನ್​ ಅನ್ನು ಮುನ್ನಡೆಸುತ್ತಿದ್ದ.

ಸಾಯುವುದಕ್ಕೂ ಮೊದಲು 3 ಲಕ್ಷಕ್ಕೆ ಜೀವವಿಮೆ ಖರೀದಿಸಿದ್ದ ತಾಲಿಬಾನ್​ ಮುಖ್ಯಸ್ಥ!
ಸಾಂದರ್ಭಿಕ ಚಿತ್ರ
Follow us on

ಇಸ್ಲಾಮಾಬಾದ್: ಅಫ್ಗಾನಿಸ್ತಾನದ ಮುಖ್ಯಸ್ಥ ಮುಲ್ಲಾ ಅಖ್ತರ್​ ಮನ್ಸೂರ್ ಅಮೆರಿಕದ ಡ್ರೋನ್​ ದಾಳಿಯಲ್ಲಿ ಸಾಯುವುದಕ್ಕೂ ಮೊದಲು 3 ಲಕ್ಷ ರೂಪಾಯಿಗೆ ಜೀವವಿಮೆ ಖರೀದಿಸಿದ್ದ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

2016 ಮೇ 21ರಂದು ಮನ್ಸೂರ್​​ನನ್ನು ಪಾಕಿಸ್ತಾನ-ಇರಾನ್​ ಗಡಿಯಲ್ಲಿ ಹೊಡೆದುರುಳಿಸಲಾಗಿತ್ತು. ಈತ 2015ರ ಜುಲೈ ತಿಂಗಳಿಂದ ತಾಲಿಬಾನ್​ ಅನ್ನು ಮುನ್ನಡೆಸುತ್ತಿದ್ದ. ಈತ ನಕಲಿ ಐಡಿ ನೀಡಿ ಪಾಕಿಸ್ತಾನದಲ್ಲಿ 3 ಲಕ್ಷ ರೂಪಾಯಿ ಜೀವ ವಿಮೆ ಖರೀದಿ ಮಾಡಿದ್ದ. ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡಿದ ಪ್ರಕರಣದ ತನಿಖೆ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ.

ಮನ್ಸೂರ್​ ಜೀವ ವಿಮೆ ಖರೀದಿಸಿದ ವಿಚಾರಕ್ಕೆ ಸಂಬಂಧಿಸಿ ತನಿಖಾ ತಂಡ ವಿಮೆ ಕಂಪೆನಿಯವರನ್ನು ಸಂಪರ್ಕ ಮಾಡಿತ್ತು. ಆಮೂಲಾಗ್ರವಾಗಿ ತನಿಖೆ ಮಾಡಿದಾಗ ನಕಲಿ ಗುರುತಿನ ಚೀಟಿ ನೀಡಿ ವಿಮೆ ಪಡೆದಿದ್ದ ಎಂದು ಗೊತ್ತಾಗಿದೆ. ಈ ಹಣವನ್ನು ವಿಮಾ ಕಂಪನಿ ಸರ್ಕಾರಕ್ಕೆ ನೀಡಿದೆ.

ಘೋಷಣೆ ಮಾಡಿದ್ದ ಒಬಾಮ
ಅಮೆರಿಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಬರಾಕ್​ ಒಬಾಮ 2016ರಲ್ಲಿ ಮನ್ಸೂರ್​ ಸತ್ತಿದ್ದನ್ನು ಖಚಿತಪಡಿಸಿದ್ದರು. ಮನ್ಸೂರ್​ ಬಲೂಚಿಸ್ತಾನದಲ್ಲಿ ಅಡಗಿದ್ದ. ಅಮೆರಿಕ ಆತನನ್ನು ಸಾಯಿಸಲು ಯಶಸ್ವಿಯಾಗಿದೆ ಎಂದು ಒಬಾಮ ಹೇಳಿದ್ದರು. ಪಾಕಿಸ್ತಾನ 2005ರಲ್ಲಿ ಈತನಿಗೆ ರಾಷ್ಟ್ರೀಯ ಗುರುತಿನ ಚೀಟಿ ನೀಡಿತ್ತು ಎನ್ನಲಾಗಿದೆ.

ಮಹಾರಾಷ್ಟ್ರವನ್ನು ‘ತಾಲಿಬಾನ್’​ಗೆ ಹೋಲಿಸಿದ ಕ್ವೀನಾ ಕಂಗನಾ

Published On - 9:22 pm, Sun, 13 December 20