Video: ಕಾಬೂಲ್​ ಏರ್​ಪೋರ್ಟ್​​ ನುಗ್ಗಲು ಯತ್ನಿಸಿದ ಅಫ್ಘಾನ್​ ನಾಗರಿಕನತ್ತ ಗುಂಡು ಹಾರಿಸಿದ ಕಪ್ಪು ವಸ್ತ್ರಧಾರಿ ಉಗ್ರ

| Updated By: Lakshmi Hegde

Updated on: Aug 17, 2021 | 3:00 PM

ಅಪ್ಘಾನಿಸ್ತಾನವೀಗ ಸಂಪೂರ್ಣವಾಗಿ ತಾಲಿಬಾನ್​ ತೆಕ್ಕೆಯಲ್ಲಿದ್ದು, ಅಲ್ಲಿ ಉಸಿರುಕಟ್ಟುವ ವಾತಾವರಣ ಸೃಷ್ಟಿಯಾಗಿದೆ. ಯುಎಸ್​​ನ ಸೇನಾ ವಿಮಾನದಲ್ಲಿ ಬರೋಬ್ಬರಿ 640 ಮಂದಿಯನ್ನು ಕತಾರ್​ಗೆ ಸಾಗಿಸಲಾಗಿದೆ.

Video: ಕಾಬೂಲ್​ ಏರ್​ಪೋರ್ಟ್​​ ನುಗ್ಗಲು ಯತ್ನಿಸಿದ ಅಫ್ಘಾನ್​ ನಾಗರಿಕನತ್ತ ಗುಂಡು ಹಾರಿಸಿದ ಕಪ್ಪು ವಸ್ತ್ರಧಾರಿ ಉಗ್ರ
ಅಫ್ಘಾನ್​ ನಾಗರಿಕನತ್ತ ಗುಂಡು ಹಾರಿಸಿದ ಉಗ್ರ
Follow us on

ಕಾಬೂಲ್​ ಏರ್​ಪೋರ್ಟ್ (Kabul Airport)​ಗೆ ನುಗ್ಗಲು ಯತ್ನಿಸಿದ ಅಫ್ಘಾನಿಸ್ತಾನ್​ (Afghanistan) ನಾಗರಿಕನೊಬ್ಬನತ್ತ ತಾಲಿಬಾನ್​ ಉಗ್ರ (Taliban Terrorist) ಗುಂಡು ಹಾರಿಸಿದ ವಿಡಿಯೋ ಸೋಷಿಯಲ್​ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್​ ಆಗುತ್ತಿದೆ. ತಾಲಿಬಾನ್​ ಉಗ್ರರ ನಿಯಂತ್ರಣದಿಂದ ಅಸ್ತವ್ಯಸ್ತಗೊಂಡ ಕಾಬೂಲ್ (Kabul)​​ನಲ್ಲಿ ನಡೆಯುತ್ತಿರುವವ ಒಂದೊಂದು ಬೆಳವಣಿಗೆಗಳೂ ಆತಂಕ ಸೃಷ್ಟಿಸಿದ್ದು, ಅಲ್ಲಿನ ಹಲವು ಫೋಟೋ-ವಿಡಿಯೋಗಳು ಇದೀಗ ವೈರಲ್ ಆಗುತ್ತಿವೆ.

ನಾಗರಿಕನೆಡೆಗೆ ಉಗ್ರ ಗುಂಡು ಹಾರಿಸಿದ ವಿಡಿಯೋವನ್ನು ಅಸ್ವಕಾ ನ್ಯೂಸ್​ ಶೇರ್​ ಮಾಡಿದೆ. ಕಾಬೂಲ್​ ಏರ್​ಪೋರ್ಟ್​​ ಒಳ ನುಸುಳಲು ವ್ಯಕ್ತಿಯೊಬ್ಬ, ಹೊರಗಿನಿಂದ ಅತ್ಯಂತ ಎತ್ತರದ ಗೋಡೆಯನ್ನು ಹತ್ತಿ ಕುಳಿತು, ಇನ್ನೇನು ಏರ್​ಪೋರ್ಟ್​​ ಒಳಗೆ ಹಾರಬೇಕು ಎನ್ನುವಷ್ಟರಲ್ಲಿ, ಕಪ್ಪು ಬಣ್ಣದ ಉಡುಪು ಧರಿಸಿದ್ದ ವ್ಯಕ್ತಿಯೊಬ್ಬ ಆತನೆಡೆಗೆ ಗುಂಡು ಹಾರಿಸಿದ್ದಾನೆ. ಹಾಗಂತ ಆ ನಾಗರಿಕನಿಗೆ ಯಾವುದೇ ಗಾಯವೂ ಆಗಲಿಲ್ಲ. ಆದರೆ ಹೆದರಿದ ವ್ಯಕ್ತಿ ಹೊರಗೆ ಜಿಗಿದಿದ್ದಾನೆ.
ಇನ್ನು ಅಪ್ಘಾನಿಸ್ತಾನದಿಂದ ಸಾವಿರಾರು ಮಂದಿ ಬೇರೆ ದೇಶಗಳಿಗೆ ಪಲಾಯನ ಮಾಡಿದ್ದಾರೆ.

ಕಾಬೂಲ್​ ಏರ್​ಪೋರ್ಟ್​​ನಲ್ಲಿ ಸಿಕ್ಕ ವಿಮಾನವನ್ನ ನೂಕು-ನುಗ್ಗಲಿನಲ್ಲಿ ಏರುವ ದೃಶ್ಯ ನೋಡಿದರೆ ಜೀವ ಹಿಂಡಿದಂತಾಗುತ್ತದೆ. ಅಪ್ಘಾನಿಸ್ತಾನವೀಗ ಸಂಪೂರ್ಣವಾಗಿ ತಾಲಿಬಾನ್​ ತೆಕ್ಕೆಯಲ್ಲಿದ್ದು, ಅಲ್ಲಿ ಉಸಿರುಕಟ್ಟುವ ವಾತಾವರಣ ಸೃಷ್ಟಿಯಾಗಿದೆ. ಯುಎಸ್​​ನ ಸೇನಾ ವಿಮಾನದಲ್ಲಿ ಬರೋಬ್ಬರಿ 640 ಮಂದಿಯನ್ನು ಕತಾರ್​ಗೆ ಸಾಗಿಸಲಾಗಿದೆ. ಹಾಗೇ, ಭಾರತೀಯರನ್ನು ವಾಪಸ್​ ಕರೆತರಲಾಗಿದೆ. ಇನ್ನು ಅಫ್ಘಾನಿಸ್ತಾನದಲ್ಲಿರುವ ಭಾರತೀಯರಿಗಾಗಿ ಭಾರತದಲ್ಲಿ ಸಹಾಯವಾಣಿಯನ್ನೂ ಪ್ರಾರಂಭಿಸಲಾಗಿದೆ. ಒಟ್ಟಾರೆ, ಅಫ್ಘಾನಿಸ್ತಾನದಲ್ಲಿ ಮತ್ತೊಮ್ಮೆ ತಾಲಿಬಾನಿಗಳ ಅಟ್ಟಹಾಸ ಶುರುವಾಗಿದ್ದು, ಅಲ್ಲಿನವರ ಜೀವನ ಅಭದ್ರತೆಗೆ ಸಿಲುಕಿದೆ.

ಇದನ್ನೂ ಓದಿ: Motorola Edge 20: ಮಾರುಕಟ್ಟೆಗೆ 108MP ಕ್ಯಾಮೆರಾದ ಮತ್ತೊಂದು ಹೊಸ ಸ್ಮಾರ್ಟ್​ಫೋನ್: ಬೆಲೆ ಕೇವಲ 22,999 ರೂ.

8,000ಕ್ಕಿಂತಲೂ ಹೆಚ್ಚು ಬಿಯರ್ ಬಾಟಲಿಗಳ ರಾಶಿ, ಅಲ್ಲಲ್ಲೇ ಎಸೆದ ಆಹಾರ ಪದಾರ್ಥ; ಬಾಡಿಗೆ ಕೊಟ್ಟು ಕಂಗಾಲಾದ ಮಾಲೀಕ