ಅಪ್ಪನ ಮೇಲಿನ ಸಿಟ್ಟಿಗೆ ಪುಟ್ಟ ಮಗುವನ್ನೇ ನೇಣಿಗೆ ಏರಿಸಿದ ತಾಲಿಬಾನಿಗಳು; ವಿಡಿಯೋದಲ್ಲಿ ಸೆರೆಯಾದ ದುಷ್ಕೃತ್ಯ

| Updated By: Lakshmi Hegde

Updated on: Sep 28, 2021 | 11:19 AM

ನಾವೀಗ 20 ವರ್ಷಗಳ ಹಿಂದಿನ ತರಹ ಇಲ್ಲ. ನಮ್ಮ ಆಡಳಿತ ಬೇರೆ ರೀತಿಯಲ್ಲಿಯೇ ಇರುತ್ತದೆ ಎಂದು ತಾಲಿಬಾನಿಗಳು ಹೇಳಿಕೊಂಡಿದ್ದಾರೆ. ಆದರೆ ಮಾತಿನಂತೆ ನಡೆದುಕೊಳ್ಳುತ್ತಿಲ್ಲ.

ಅಪ್ಪನ ಮೇಲಿನ ಸಿಟ್ಟಿಗೆ ಪುಟ್ಟ ಮಗುವನ್ನೇ ನೇಣಿಗೆ ಏರಿಸಿದ ತಾಲಿಬಾನಿಗಳು; ವಿಡಿಯೋದಲ್ಲಿ ಸೆರೆಯಾದ ದುಷ್ಕೃತ್ಯ
ತಾಲಿಬಾನ್ ಉಗ್ರರು
Follow us on

ತಾವು ಈ ಬಾರಿ ಅಫ್ಘಾನಿಸ್ತಾನದಲ್ಲಿ ಸಭ್ಯವಾಗಿ ಆಡಳಿತ ನಡೆಸುತ್ತೇವೆ ಎಂದು ಬಾಯಿಮಾತಿನಲ್ಲಿ ಹೇಳುತ್ತಿರುವ ತಾಲಿಬಾನಿ (Taliban)ಗಳು ಕ್ರೂರತನವನ್ನು ವರ್ತನೆಯಲ್ಲಿ ತೋರಿಸುತ್ತಲೇ ಇದ್ದಾರೆ. ಇದೀಗ ಒಂದು ಮಗುವನ್ನು ಗಲ್ಲಿಗೇರಿಸಿದ್ದಾರೆ. ಅಫ್ಘಾನಿಸ್ತಾನ (Afghanistan)ದಲ್ಲಿ ತಮ್ಮ ವಿರುದ್ಧ ಹೋರಾಟ ನಡೆಸುತ್ತಿರುವ ಪ್ರತಿರೋಧ ಪಡೆಯ ನಾಯಕನೊಬ್ಬನ ಮಗು ಎಂಬ ಶಂಕೆಯ ಮೇಲೆ ತಾಲಿಬಾನಿಗಳು ಈ ನೀಚಕೃತ್ಯ ಎಸಗಿದ್ದಾರೆ ಎಂದು ವರದಿಯಾಗಿದೆ. 

ಈ ಬಗ್ಗೆ ಸ್ಥಳೀಯ, ಸ್ವತಂತ್ರ ಮಾಧ್ಯಮ ಪಂಜಶಿರ್​ ಅಬ್ಸರ್ವರ್​ (Panjshir Observer) ಟ್ವೀಟ್​ ಮಾಡಿದ್ದು, ಮಗುವೊಂದು ನೆಲದ ಮೇಲೆ, ರಕ್ತದ ಮಡುವಲ್ಲಿ ಬಿದ್ದ ವಿಡಿಯೋವನ್ನು ಶೇರ್​ ಮಾಡಿದೆ. ಆ ಮಗುವಿನ ಸುತ್ತ ನಿಂತಿರುವ ಹಲವು ಮಕ್ಕಳು ದೊಡ್ಡದಾಗಿ ಅಳುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದು. ಹಾಗೇ, ಈ ಮಗುವಿನ ತಂದೆ ಪ್ರತಿರೋಧ ಪಡೆಯ ನಾಯಕ ಎಂಬ ಅನುಮಾನದ ಮೇರೆಗೆ ಪುಟ್ಟ ಮಗುವಿಗೆ ಶಿಕ್ಷೆ ನೀಡಲಾಗಿದೆ ಎಂದು ಪಂಜಶಿರ್​ ಅಬ್ಸರ್ವರ್​ ಟ್ವೀಟ್​​ನಲ್ಲಿ ಹೇಳಿದೆ.

ತಾಲಿಬಾನಿಗಳು ಅಫ್ಘಾನಿಸ್ತಾನಕ್ಕೆ ಬಂದ ಬಳಿಕ ಅವರಿಗೆ ದುಃಸ್ವಪ್ನವಾಗಿದ್ದು ಅಲ್ಲಿನ ಪ್ರತಿರೋಧ ಪಡೆಗಳು. ಅದರಲ್ಲೂ ಪಂಜಶಿರ್ ಪ್ರಾಂತ್ಯದ ಹೋರಾಟದಲ್ಲಂತೂ ಹಲವು ತಾಲಿಬಾನಿಗಳನ್ನು ಹತ್ಯೆ ಮಾಡಿದ್ದಾರೆ. ಹೀಗಾಗಿ ಪ್ರತಿರೋಧ ಪಡೆಯೆಂದರೆ ತಾಲಿಬಾನಿಗಳಿಗೆ ಸಿಟ್ಟು. ಆದರೆ ಪುಟ್ಟ ಮಕ್ಕಳೇನು ಮಾಡುತ್ತಾರೆ ಎಂದು ವಿಡಿಯೋ ನೋಡಿದ ಜನರು ಪ್ರಶ್ನಿಸುತ್ತಿದ್ದಾರೆ. ಕಳೆದ ವಾರ ತಾಲಿಬಾನಿಗಳು ನಾಲ್ಕು ಮಂದಿ ಅಪಹರಣಕಾರರನ್ನು ಸಾರ್ವಜನಿಕವಾಗಿ ನೇಣಿಗೆ ಏರಿಸಿದ್ದರು. ಅದೂ ಕೂಡ ಕ್ರೇನ್​​ಗೆ ಹಾಕಿ ಗಲ್ಲಿಗೇರಿಸಿದ್ದರು. ಇಂಥ ಕಿಡ್ನ್ಯಾಪ್​​ಗಳನ್ನೆಲ್ಲ ನಾವು ಸಹಿಸಿಕೊಳ್ಳುವುದಿಲ್ಲ ಎಂದು ಸಂದೇಶವನ್ನೂ ನೀಡಿದ್ದರು.

ಕ್ಷೌರಿಕರಿಗೆ ಖಡಕ್​ ಎಚ್ಚರಿಕೆ
ನಾವೀಗ 20 ವರ್ಷಗಳ ಹಿಂದಿನ ತರಹ ಇಲ್ಲ. ನಮ್ಮ ಆಡಳಿತ ಬೇರೆ ರೀತಿಯಲ್ಲಿಯೇ ಇರುತ್ತದೆ ಎಂದು ತಾಲಿಬಾನಿಗಳು ಹೇಳಿಕೊಂಡಿದ್ದಾರೆ. ಆದರೆ ಮಾತಿನಂತೆ ನಡೆದುಕೊಳ್ಳುತ್ತಿಲ್ಲ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಇನ್ನೂ ಗ್ರೀನ್​ ಸಿಗ್ನಲ್​ ನೀಡಿಲ್ಲ. ಗಂಡು-ಹೆಣ್ಣು ಒಟ್ಟಾಗಿ ವಿದ್ಯಾಭ್ಯಾಸ ಮಾಡುವಂತಿಲ್ಲ. ಹಾಗೇ, ನಿನ್ನೆ ಕ್ಷೌರಿಕರಿಗೆ ಒಂದು ಎಚ್ಚರಿಕೆ ನೀಡಿದ್ದಾರೆ. ಅಫ್ಘಾನಿಸ್ತಾನ ಜನರ ಗಡ್ಡಗಳನ್ನು ಶೇವ್​, ಟ್ರಿಮ್ ಮಾಡಬೇಡಿ. ಇದು ಇಸ್ಲಾಮಿಕ್​ ಕಾನೂನಿಗೆ ವಿರುದ್ಧ ಎದು ಹೆಲ್ಮಂಡ್​ ಪ್ರಾಂತ್ಯದ ಕ್ಷೌರಿಕರಿಗೆ ನಿರ್ದೇಶನ ನೀಡಿದ್ದಾರೆ.

ಇದನ್ನೂ ಓದಿ: Coronavirus cases in India: ದೇಶದಲ್ಲಿ 18,795 ಹೊಸ ಕೊವಿಡ್ ಪ್ರಕರಣ ಪತ್ತೆ, ಸಕ್ರಿಯ ಪ್ರಕರಣಗಳ ಸಂಖ್ಯೆ 3 ಲಕ್ಷಕ್ಕಿಂತ ಕಡಿಮೆ

ಬೆಂಗಳೂರು: ಮತಾಂತರದ ಆರೋಪ; 70 ರಿಂದ 80 ಮಕ್ಕಳನ್ನು ಸೇರಿಸಿ ಕ್ರೈಸ್ತ ಪ್ರಾರ್ಥನೆ ಮಾಡಿದ ವಿಡಿಯೋ ವೈರಲ್

(Taliban Terrorists execute child over suspicion of his father is leader of resistance force of Afghanistan)