ಬಯೋಮೆಟ್ರಿಕ್​​ ಡಿವೈಸ್​​ಗಳು ತಾಲಿಬಾನಿಗಳ ವಶಕ್ಕೆ; ಯುಎಸ್​ ಸರ್ಕಾರ, ಸೇನೆಗೆ ಸಹಾಯ ಮಾಡುತ್ತಿದ್ದ ಅಫ್ಘಾನಿಗಳಿಗೆ ಆತಂಕ

ಯುಎಸ್​​ ದಶಕಗಳ ಕಾಲ ಉಗ್ರರ ವಿರುದ್ಧ ನಡೆಸಿದ ಯುದ್ಧದಲ್ಲಿ ಈ ಬಯೋಮೆಟ್ರಿಕ್​ ಸಾಧನಗಳು ಪ್ರಮುಖ ಪಾತ್ರ ವಹಿಸಿದವುಗಳಾಗಿವೆ. 2011ರಲ್ಲಿ ಪಾಕಿಸ್ತಾನದಲ್ಲಿ ರೈಡ್​ ಮಾಡಿದಾಗ, ಒಸಮಾ ಬಿನ್​ ಲಾಡೆನ್​​ನ್ನು ಪತ್ತೆಹಚ್ಚಲೂ ಈ ಡಿವೈಸ್​​ಗಳೇ ಸಹಾಯ ಮಾಡಿದ್ದು.

ಬಯೋಮೆಟ್ರಿಕ್​​ ಡಿವೈಸ್​​ಗಳು ತಾಲಿಬಾನಿಗಳ ವಶಕ್ಕೆ; ಯುಎಸ್​ ಸರ್ಕಾರ, ಸೇನೆಗೆ ಸಹಾಯ ಮಾಡುತ್ತಿದ್ದ ಅಫ್ಘಾನಿಗಳಿಗೆ ಆತಂಕ
ಸಾಂಕೇತಿಕ ಚಿತ್ರ
Edited By:

Updated on: Aug 19, 2021 | 12:06 PM

ಇಡೀ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನ್​ ಉಗ್ರರು ಇದೀಗ ಯುಎಸ್​ ಸೇನೆ ಬಳಸುತ್ತಿದ್ದ ಬಯೋಮೆಟ್ರಿಕ್​ ಡಿವೈಸ್​​( Biometrics Devices)ಗಳನ್ನು ಕೂಡ ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇದು ನಿಜಕ್ಕೂ ಆತಂಕ ತರುವ ವಿಚಾರವಾಗಿದೆ. ಯುಎಸ್​ ಸರ್ಕಾರಕ್ಕಾಗಿ ಮತ್ತು ಯುಎಸ್​-ಅಫ್ಘಾನ್​ ಎರಡೂ ಸೇನಾ ಪಡೆಗಳಿಗಾಗಿ ಕೆಲಸ ಮಾಡುತ್ತಿರುವ ಅಫ್ಘಾನ್​ ಪ್ರಜೆಗಳನ್ನು ಗುರುತಿಸಲು ಈ ಬಯೋಮೆಟ್ರಿಕ್​ ಉಪಕರಣಗಳ ಬಳಕೆ ಮಾಡಲಾಗುತ್ತಿತ್ತು. ಇದೀಗ ಈ ಡಿವೈಸ್​ ವಶಪಡಿಸಿಕೊಂಡಿರುವ ತಾಲಿಬಾನ್​ ಇದರಲ್ಲಿರುವ ಮಾಹಿತಿಯನ್ನು ಬಳಸಿಕೊಂಡು ಅಂಥ ಪ್ರಜೆಗಳ ಮೇಲೆ ಪ್ರತೀಕಾರ ತೆಗೆದುಕೊಳ್ಳಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಬಯೋಮೆಟ್ರಿಕ್​ ಡಿವೈಸ್​​ಗಳ ಹೆಸರು HIIDE (Handheld Interagency Identity Detection Equipment). ಕಳೆದವಾರ ತಾಲಿಬಾನ್​ ಉಗ್ರರು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​​ನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಆಕ್ರಮಣ ಮಾಡಿದ ಸಂದರ್ಭದಲ್ಲೇ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಈ ಡಿವೈಸ್​​ನಲ್ಲಿ ಯುಎಸ್​ ಸರ್ಕಾರ ಮತ್ತು ಎರಡೂ ಸೇನಾಪಡೆಗಳಿಗಾಗಿ ಕೆಲಸ ಮಾಡುತ್ತಿರುವ ಅಫ್ಘಾನ್​ ಜನರ ಐರಿಸ್​ ಸ್ಕ್ಯಾನ್ (ಕಣ್ಣಿನ ಸ್ಕ್ಯಾನ್​), ಫಿಂಗರ್​ಪ್ರಿಂಟ್ಸ್​ ಮತ್ತು ಅವರ ವೈಯಕ್ತಿಕ ಮಾಹಿತಿಗಳು ಇವೆ. ಹೀಗಾಗಿ ಉಗ್ರರು ಅಂಥವರ ಡೇಟಾಬೇಸ್​​ನ್ನು ಸಲೀಸಲಾಗಿ ಪಡೆಯಬಹುದಾಗಿದೆ.

ಯುಎಸ್​​ ದಶಕಗಳ ಕಾಲ ಉಗ್ರರ ವಿರುದ್ಧ ನಡೆಸಿದ ಯುದ್ಧದಲ್ಲಿ ಈ ಬಯೋಮೆಟ್ರಿಕ್​ ಸಾಧನಗಳು ಪ್ರಮುಖ ಪಾತ್ರ ವಹಿಸಿದವುಗಳಾಗಿವೆ. 2011ರಲ್ಲಿ ಪಾಕಿಸ್ತಾನದಲ್ಲಿ ರೈಡ್​ ಮಾಡಿದಾಗ, ಒಸಮಾ ಬಿನ್​ ಲಾಡೆನ್​​ನ್ನು ಪತ್ತೆಹಚ್ಚಲೂ ಈ ಡಿವೈಸ್​​ಗಳೇ ಸಹಾಯ ಮಾಡಿದ್ದು. ಆದರೆ ಈ ಡಿವೈಸ್​​​ನ್ನು ಅಫ್ಘಾನಿಸ್ತಾನದ ಶೇ.80ರಷ್ಟು ಅಂದರೆ 25 ಮಿಲಿಯನ್​ ಜನರ ಬಯೋಮೆಟ್ರಿಕ್​ ಡಾಟಾ ಸಂಗ್ರಹ ಮಾಡಲು ಬಳಕೆ ಮಾಡಲಾಗುತ್ತಿತ್ತು ಎಂದೂ ವರದಿಯಾಗಿದೆ. ಒಟ್ಟಾರೆ ತಾಲಿಬಾನ್​ ಉಗ್ರರ ವಿರುದ್ಧ ಹೋರಾಟಕ್ಕೆ ಯುಎಸ್​ ಮತ್ತು ಅಫ್ಘಾನ್​ ಸೇನೆಗೆ ಸಹಾಯ ಮಾಡಿದ ಪ್ರತಿಯೊಬ್ಬರ ಮಾಹಿತಿಯೂ ಇದರಲ್ಲಿದ್ದು, ಅದನ್ನೇ ಇಟ್ಟುಕೊಂಡು ಉಗ್ರರು ಮತ್ತಷ್ಟು ಕ್ರೌರ್ಯ ಮೆರೆಯಬಹುದು ಎಂಬ ಆತಂಕ ಶುರುವಾಗಿದೆ.

ಇದನ್ನೂ ಓದಿ: ಕಾಬೂಲ್​ನಿಂದ ಭಾರತಕ್ಕೆ ಮರಳಿದ ಐಟಿಬಿಪಿ ಸ್ನಿಫರ್ ಶ್ವಾನಗಳು

ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣ; ಬಡವ, ಶ್ರೀಮಂತ ಕಾರಣ ಕೊಡುತ್ತಿರುವ ಆರೋಪಿಗಳು