ಕಾಬೂಲ್​ನಿಂದ ಭಾರತಕ್ಕೆ ಮರಳಿದ ಐಟಿಬಿಪಿ ಸ್ನಿಫರ್ ಶ್ವಾನಗಳು

Afghanistan: ಯುದ್ಧ ಶ್ವಾನಗಳನ್ನು ಅಫ್ಘಾನಿಸ್ತಾನದ ಕಾಬೂಲ್​ನಿಂದ ಮಂಗಳವಾರ ಏರ್​ಲಿಫ್ಟ್​ ಮಾಡಲಾಗಿದೆ. ಶ್ವಾನಗಳು ಕಾಬೂಲ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಭದ್ರತಾ ಕರ್ತವ್ಯದಲ್ಲಿದ್ದವು.

ಕಾಬೂಲ್​ನಿಂದ ಭಾರತಕ್ಕೆ ಮರಳಿದ ಐಟಿಬಿಪಿ ಸ್ನಿಫರ್ ಶ್ವಾನಗಳು
ಕಾಬೂಲ್​ನಿಂದ ಭಾರತಕ್ಕೆ ಮರಳಿದ ಐಟಿಬಿಪಿ ಸ್ನಿಫರ್ ಶ್ವಾನಗಳು


​ಭಾರತೀಯ ವಾಯಪಡೆಯ ಸಿ- 17 ವಿಮಾನವು ಮಂಗಳವಾರ 100ಕ್ಕೂ ಹೆಚ್ಚು ಸೈನಿಕರ ಜತೆಗೆ ಮೂರು ಯುದ್ಧ ಶ್ವಾನಗಳನ್ನು ಕರೆತಂದಿದೆ. ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್  (ITBP) K9 ಸ್ನಿಫರ್ ಶ್ವಾನಗಳಾದ ಮಾಯಾ, ಬಾಬಿ ಮತ್ತು ರೂಬಿ ಕಳೆದ ಮೂರು ವರ್ಷಗಳಿಂದ ಕಾಬೂಲ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದವು. ಮಾಯಾ (ಲ್ಯಾಬ್ರಡಾರ್), ಬಾಬಿ (ಡೋಬರ್ಮನ್) ಮತ್ತು ರೂಬಿ (ಮಾಲಿನಾಯ್ಸ್) ತಳಿಗೆ ಸೇರಿದ ಶ್ವಾನಗಳಾಗಿವೆ.

ಯುದ್ಧ ಶ್ವಾನಗಳನ್ನು ಅಫ್ಘಾನಿಸ್ತಾನದ ಕಾಬೂಲ್​ನಿಂದ ಮಂಗಳವಾರ ಏರ್​ಲಿಫ್ಟ್​ ಮಾಡಲಾಗಿದೆ. ಕಾಬೂಲ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಭದ್ರತಾ ಕರ್ತವ್ಯದಲ್ಲಿದ್ದವು. ಶ್ವಾನಗಳು ಹಲವು ಐಇಡಿಗಳನ್ನು ಪತ್ತೆಹಚ್ಚಲು ಸಹಾಯ ಮಾಡಿವೆ. ಭಾರತೀಯ ರಾಜತಾಂತ್ರಿಕರು ಮಾತ್ರವಲ್ಲದೇ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುವ ಸ್ಥಳೀಯ ಅಫ್ಘಾನ್ ನಾಗರಿಕರ ಜೀವವನ್ನು ರಕ್ಷಿಸಿವೆ.

ಧೈರ್ಯಶಾಲಿಗಳಾದ ಮಾಯಾ, ರೂಬಿ ಮತ್ತು ಬಾಬಿ ಕಾಬೂಲ್​ನಲ್ಲಿ ಭಾರತೀಯರ ಸ್ವತ್ತುಗಳನ್ನು ಸುರಕ್ಷಿತವಾಗಿಡಲು ಶ್ರೇಷ್ಠ ವೃತ್ತಿಪರತೆಯನ್ನು ಮೆರೆದಿವೆ ಎಂದು ಡಿಐಜಿ ಸುಧಾಕರ್ ನಟರಾಜನ್ ಇಂಡಿಯಾ ಟುಡೇ ಸುದ್ದಿ ಮಾಧ್ಯಮದ ಜತೆ ಮಾತನಾಡಿದ್ದಾರೆ.

ಯುದ್ಧ ಶ್ವಾನಗಳ ನಿರ್ವಾಹಕರು ಹೆಡ್ ಕಾನ್ಸ್ಟೇಬಲ್ ಕಿಶನ್ ಕುಮಾರ್, ಬಿಜೇಂದರ್ ಸಿಂಗ್ ಮತ್ತು ಅತುಲ್ ಕುಮಾರ್. ಮಾಯ, ಬಾಬಿ ಮತ್ತು ರೂಬಿ ಹರಿಯಾಣದ ಪಂಚಕುಲ ಜಿಲ್ಲೆಯ ಎನ್​ಟಿಸಿಡಿ ಭಾನು ಎಂಬ ಶ್ವಾನ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದಿದ್ದವು.

ಇದನ್ನೂ ಓದಿ:

ಕಾಬೂಲ್​ನಿಂದ ಸುರಕ್ಷಿತವಾಗಿ ಭಾರತಕ್ಕೆ ಬಂದಿಳಿದ ರಾಯಭಾರಿ ಕಚೇರಿ ಸಿಬ್ಬಂದಿಯ ಮುಖದಲ್ಲಿ ನಿರಾಳ ಭಾವ!

Afghanistan: ಕಾಬೂಲ್​ನಿಂದ ಅಮೆರಿಕಕ್ಕೆ ಹೋಗುತ್ತಿದ್ದ ವಿಮಾನದಿಂದ ಕೆಳಗೆ ಬಿದ್ದು ಇಬ್ಬರ ದುರ್ಮರಣ

Read Full Article

Click on your DTH Provider to Add TV9 Kannada