
ನೆದರ್ಲ್ಯಾಂಡ್, ಡಿಸೆಂಬರ್ 31: ನೆದರ್ಲ್ಯಾಂಡ್ನಲ್ಲಿ ಅಚ್ಚರಿಯ ಪ್ರಕರಣವೊಂದು ನಡೆದಿದೆ. ನಡೆದಿದ್ದು ಸಾಮಾನ್ಯ ಮೊಣಕಾಲು ಶಸ್ತ್ರಚಿಕಿತ್ಸೆ(Surgery)ಯಷ್ಟೇ. ಆದರೆ ಬಾಲಕ ಎಚ್ಚರಗೊಂಡಾಗ ಮಾತನಾಡಿದ್ದು ವಿದೇಶಿ ಭಾಷೆ, ಪೋಷಕರ ಗುರುತನ್ನೂ ಹಿಡೀಲಿಲ್ಲ, ಇದು ಆತಂಕವನ್ನುಂಟು ಮಾಡಿತ್ತು. 17 ವರ್ಷದ ಆ ಹುಡುಗನ ಮಾತೃಭಾಷೆ ಡಚ್, ಎಚ್ಚರವಾದಾಗ ಅವನು ಶಾಲೆಯಲ್ಲಿ ಪ್ರಾಥಮಿಕವಾಗಿ ಬಳಸುತ್ತಿದ್ದ ಇಂಗ್ಲಿಷ್ ಭಾಷೆಯನ್ನು ಮಾತ್ರ ಮಾತನಾಡುತ್ತಿದ್ದ.
ಆರಂಭದಲ್ಲಿ, ಅವನನ್ನು ದಾಖಲಿಸಿದ ಆಸ್ಪತ್ರೆಯ ಸಿಬ್ಬಂದಿ ಇದು ಸ್ವಲ್ಪ ಸಮಯಕ್ಕೆ ಸರಿಯಾಗಬಹುದು ಎಂದು ಭಾವಿಸಿದ್ದರು, ಆದರೆ ಹಾಗಾಗಲಿಲ್ಲ.ಆದರೆ ಆತನಿಗಾಗಿತ್ತು ಫಾರಿನ್ ಲ್ಯಾಂಗ್ವೇಜ್ ಸಿಂಡ್ರೋಮ್ ಎಂಬುದನ್ನು ವೈದ್ಯರು ಪತ್ತೆಹಚ್ಚಿದರು.
ಫುಟ್ಬಾಲ್ ಆಡುವಾಗ ಗಾಯಗೊಂಡು ಮೊಣಕಾಲಿನ ಶಸ್ತ್ರಚಿಕಿತ್ಸೆಗಾಗಿ ಬಾಲಕ ಆಸ್ಪತ್ರೆಗೆ ದಾಖಲಾಗಿದ್ದ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿತ್ತು ಮತ್ತು ಸುರಕ್ಷಿತವಾಗಿತ್ತು ಮತ್ತು ತಕ್ಷಣ ಯಾವುದೇ ತೊಂದರೆಯಾಗಲಿಲ್ಲ. ಬಾಲಕನಿಗೆ ಅರವಳಿಕೆ ಚುಚ್ಚುಮದ್ದು ನೀಡಲಾಗಿತ್ತು, ಬಾಲಕ ಎಚ್ಚರವಾದಾಗ ಡಚ್ ಬದಲು ಇಂಗ್ಲಿಷ್ನಲ್ಲಿ ಮಾತನಾಡಲು ಶುರು ಮಾಡಿದ್ದ. ನಾನು ಅಮೆರಿಕದಲ್ಲಿದ್ದೇನೆ ಎಂದು ಹೇಳುತ್ತಿದ್ದ.
ಮತ್ತಷ್ಟು ಓದಿ: ಅಪರೂಪದ ಹೃದ್ರೋಗಕ್ಕೆ ಯಶಸ್ವಿ ಶಸ್ತ್ರಚಿಕಿತ್ಸೆ: ಜಯದೇವ ವೈದ್ಯರ ಮತ್ತೊಂದು ಸಾಧನೆ
ಮಾತೃಭಾಷೆಯಾದ ಡಚ್ ಮಾತನಾಡಲು ಅಥವಾ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ವೈದ್ಯಕೀಯ ವರದಿಯ ಪ್ರಕಾರ, ಅವನಿಗೆ ಯಾವುದೇ ಹಿಂದಿನ ಮನೋವೈದ್ಯಕೀಯ ಇತಿಹಾಸವಿರಲಿಲ್ಲ, ಯಾವ ಖಿನ್ನತೆಯೂ ಇರಲಿಲ್ಲ. ಇದು ವಿದೇಶಿ ಭಾಷಾ ಸಿಂಡ್ರೋಮ್ (FLS) ಎಂದು ವೈದ್ಯರು ಗುರುತಿಸಿದರು.
ಈ ಸ್ಥಿತಿಯಲ್ಲಿ ರೋಗಿಗಳು ಇದ್ದಕ್ಕಿದ್ದಂತೆ ಮತ್ತು ಅನೈಚ್ಛಿಕವಾಗಿ ತಮ್ಮ ಮಾತೃಭಾಷೆಯ ಬದಲಿಗೆ ಬೇರೆ ಭಾಷೆಯನ್ನು ಮಾತನಾಡಲು ಶುರು ಮಾಡುತ್ತಾರೆ ಎಂದು ವೈದ್ಯರು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:15 am, Wed, 31 December 25