Elon Musk: ಪ್ರಧಾನಿ ಮೋದಿಗೆ ಭಾರತದ ಬಗ್ಗೆ ಎಷ್ಟೊಂದು ಕಾಳಜಿ ಇದೆ, ನಾನು ಅವರ ಅಭಿಮಾನಿ ಎಂದ ಎಲಾನ್ ಮಸ್ಕ್​

ಪ್ರಧಾನಿ ನರೇಂದ್ರ ಮೋದಿ(Narendra Modi)ಯವರಿಗೆ ಭಾರತದ ಬಗ್ಗೆ ಎಷ್ಟೊಂದು ಕಾಳಜಿ ಇದೆ ನಾನು ಅವರ ಅಭಿಮಾನಿ ಎಂದು ಟೆಸ್ಲಾ ಸಿಇಒ ಎಲಾನ್ ಮಸ್ಕ್​ ಹೇಳಿದ್ದಾರೆ.

Elon Musk: ಪ್ರಧಾನಿ ಮೋದಿಗೆ ಭಾರತದ ಬಗ್ಗೆ ಎಷ್ಟೊಂದು ಕಾಳಜಿ ಇದೆ,  ನಾನು ಅವರ ಅಭಿಮಾನಿ ಎಂದ ಎಲಾನ್ ಮಸ್ಕ್​
ಎಲಾನ್ ಮುಸ್ಕ್​, ನರೇಂದ್ರ ಮೋದಿ

Updated on: Jun 21, 2023 | 11:05 AM

ಪ್ರಧಾನಿ ನರೇಂದ್ರ ಮೋದಿ(Narendra Modi)ಯವರಿಗೆ ಭಾರತದ ಬಗ್ಗೆ ಎಷ್ಟೊಂದು ಕಾಳಜಿ ಇದೆ ನಾನು ಅವರ ಅಭಿಮಾನಿ ಎಂದು ಟೆಸ್ಲಾ ಸಿಇಒ ಎಲಾನ್ ಮಸ್ಕ್​(Elon Musk) ಹೇಳಿದ್ದಾರೆ. ಪ್ರಧಾನಿ  ಮೋದಿಯವರು ಅಮೆರಿಕ ಪ್ರವಾಸದಲ್ಲಿದ್ದು ಎಲಾನ್​ ಮಸ್ಕ್​ ಅವರನ್ನು ಭೇಟಿಯಾಗಿದ್ದರು. ಸೌರಶಕ್ತಿ, ಸ್ಥಿರ ಬ್ಯಾಟರಿ ಪ್ಯಾಕ್‌ಗಳು ಮತ್ತು ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ ಸುಸ್ಥಿರ ಇಂಧನ ಭವಿಷ್ಯಕ್ಕಾಗಿ ಭಾರತವು ಬಲವಾದ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಹೇಳಿದರು.

ಭಾರತಕ್ಕೂ ಸ್ಟಾರ್‌ಲಿಂಕ್ ಉಪಗ್ರಹ ಇಂಟರ್ನೆಟ್ ಸೇವೆಯನ್ನು ತರುವ ಭರವಸೆ ಇದೆ ಎಂದು ಸ್ಪೇಸ್‌ಎಕ್ಸ್ ಸಿಇಒ ಮಸ್ಕ್ ಹೇಳಿದ್ದಾರೆ.
ಈ ವರ್ಷದ ಅಂತ್ಯದ ವೇಳೆಗೆ ಟೆಸ್ಲಾ ಹೊಸ ಕಾರ್ಖಾನೆಗೆ ಸ್ಥಳವನ್ನು ಆಯ್ಕೆ ಮಾಡಬಹುದೆಂದು ಕಳೆದ ತಿಂಗಳು ಮಸ್ಕ್ ಹೇಳಿದ್ದಾರೆ.

ಮತ್ತಷ್ಟು ಓದಿ: ಶೀಘ್ರವೇ ಭಾರತದಲ್ಲಿ ಸ್ಥಾಪನೆಯಾಗಲಿದೆ ಟೆಸ್ಲಾ ಕಾರು ಉತ್ಪಾದನಾ ಘಟಕ: ಎಲಾನ್ ಮಸ್ಕ್​

ಏತನ್ಮಧ್ಯೆ, ಮೊದಲ ದಿನ ಪ್ರಧಾನಿ ಮೋದಿ ಅವರು ಸಿಇಒಗಳು, ನೊಬೆಲ್ ಪ್ರಶಸ್ತಿ ವಿಜೇತರು, ವಿದ್ವಾಂಸರು, ಉದ್ಯಮಿಗಳು, ಅರ್ಥಶಾಸ್ತ್ರಜ್ಞರು, ಕಲಾವಿದರು, ಶಿಕ್ಷಣ ತಜ್ಞರು, ಆರೋಗ್ಯ ಕ್ಷೇತ್ರದ ತಜ್ಞರನ್ನು ನ್ಯೂಯಾರ್ಕ್‌ನಲ್ಲಿ ಭೇಟಿ ಮಾಡಿದರು.

ಪ್ರಧಾನಿ ಮೋದಿಯವರೊಂದಿಗಿನ ಭೇಟಿಯ ಕುರಿತು ಮಾತನಾಡಿದ ಎಲೋನ್ ಮಸ್ಕ್, ನಾನು ಅವರೊಂದಿಗೆ ಉತ್ತಮ ಭೇಟಿಯನ್ನು ನಡೆಸಿದ್ದೇನೆ ಎಂದು ಹೇಳಿದರು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us