Texas Shooting: ಅಮೆರಿಕದ ಟೆಕ್ಸಾಸ್​ನಲ್ಲಿ ಗುಂಡಿನ ದಾಳಿ, 8 ವರ್ಷದ ಬಾಲಕ ಸೇರಿ ಐವರು ಸಾವು

|

Updated on: Apr 30, 2023 | 9:08 AM

ಅಮೆರಿಕ(America)ದ ಟೆಕ್ಸಾಸ್​ನಲ್ಲಿ ಗುಂಡಿನ ದಾಳಿ ನಡೆದಿದ್ದು 8 ವರ್ಷದ ಬಾಲಕ ಸೇರಿ ಐವರು ಸಾವನ್ನಪ್ಪಿದ್ದಾರೆ.

Texas Shooting: ಅಮೆರಿಕದ ಟೆಕ್ಸಾಸ್​ನಲ್ಲಿ ಗುಂಡಿನ ದಾಳಿ, 8 ವರ್ಷದ ಬಾಲಕ ಸೇರಿ ಐವರು ಸಾವು
ಪೊಲೀಸ್
Image Credit source: NDTV
Follow us on

ಅಮೆರಿಕ(America)ದ ಟೆಕ್ಸಾಸ್​ನಲ್ಲಿ ಗುಂಡಿನ ದಾಳಿ ನಡೆದಿದ್ದು 8 ವರ್ಷದ ಬಾಲಕ ಸೇರಿ ಐವರು ಸಾವನ್ನಪ್ಪಿದ್ದಾರೆ. ಟೆಕ್ಸಾಸ್‌ನ ಕ್ಲೀವ್‌ಲ್ಯಾಂಡ್‌ನಲ್ಲಿ ಈ ಘಟನೆ ನಡೆದಿದೆ, ಆತ ರಾತ್ರಿಹೊತ್ತು ಮನಬಂದಂತೆ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದ, ನೆರೆಯ ಮನೆಯವರು ಈ ಶಬ್ದದಿಂದ ಮನೆಯಲ್ಲಿ ಮಕ್ಕಳು ಮಲಗಲು ಕಷ್ಟವಾಗುತ್ತಿದೆ ನಿಲ್ಲಿಸಿ ಎಂದು ಕೇಳಿಕೊಂಡಿದ್ದಕ್ಕೆ, ಬಾಲಕ ಸೇರಿ ಮನೆಯ ಐವರನ್ನು ಹತ್ಯೆ ಮಾಡಿದ್ದಾನೆ.

ಘಟನೆ ವೇಳೆ ಬಂದೂಕುಧಾರಿ ಪಾನಮತ್ತನಾಗಿದ್ದ ಎಂದು ಹೇಳಿದ್ದಾರೆ. ಸಂತ್ರಸ್ತರ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಶಂಕಿತ ತನ್ನ ರೈಫಲ್‌ನೊಂದಿಗೆ ಬರುತ್ತಿರುವುದು ಸೆರೆಯಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಮನೆಯಲ್ಲಿ 10 ಜನರಿದ್ದರು, ಮೃತರಲ್ಲಿ ಮೂವರು ಮಹಿಳೆಯರು ಹಾಗೂ ಓರ್ವ ಪುರುಷ ಸೇರಿದ್ದಾರೆ. ಮೃತರು 8 ರಿಂದ 40 ರ ವಯಸ್ಸಿನವರು.

ಮತ್ತಷ್ಟು ಓದಿ: ಅಮೆರಿಕದಲ್ಲಿ ಮನೆಯಲ್ಲಿ ಗುಂಡಿನ ದಾಳಿ; 6 ತಿಂಗಳ ಮಗು, ತಾಯಿ ಸೇರಿ 6 ಜನ ಸಾವು

ಅಮೆರಿಕದ ಹಲವು ನಗರಗಳಲ್ಲಿ ಗುಂಡಿನ ದಾಳಿಯ ಘಟನೆಗಳು ನಡೆದಿವೆ. ಇದರಲ್ಲಿ ನೂರಾರು ಜನರು ಸಾವನ್ನಪ್ಪಿದ್ದಾರೆ. ಅಮೆರಿಕದಲ್ಲಿ ಗನ್ ಹೊಂದಲು ಯಾವುದೇ ಪರವಾನಗಿ ನಿಯಮವಿಲ್ಲ. ಇಲ್ಲಿ ಹೆಚ್ಚಿನ ಜನರು ರೈಫಲ್‌ಗಳನ್ನು ಹೊಂದಿದ್ದಾರೆ. ಇದರಿಂದಾಗಿ ಅಮೆರಿಕದಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿವೆ. ಬಂದೂಕು ನೀತಿಯನ್ನು ಸುಧಾರಿಸುವ ಬಗ್ಗೆ ಹಲವು ಬಾರಿ ಚರ್ಚೆ ನಡೆದರೂ ಇಲ್ಲಿಯವರೆಗೆ ಯಾವುದೇ ಸುಧಾರಣೆಯಾಗಿಲ್ಲ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 9:08 am, Sun, 30 April 23