ಥೈಲೆಂಡ್​ನಲ್ಲಿ ಜರ್ಮನ್​ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಮಹಾರಾಷ್ಟ್ರದ ಇಬ್ಬರ ಬಂಧನ

|

Updated on: Mar 25, 2025 | 12:09 PM

ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿರುವುದು ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ಸವಾಲನ್ನು ಒಡ್ಡಿದೆ. ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿರುವುದು ನಾಗರಿಕರಲ್ಲಿ ಕಳವಳದ ವಾತಾವರಣವನ್ನು ಸೃಷ್ಟಿಸಿದೆ. ಸತಾರಾದ ಇಬ್ಬರು ಯುವಕರು ವಿದೇಶಕ್ಕೆ ಹೋದಾಗ ಅಲ್ಲಿ ಅತ್ಯಾಚಾರ ಮಾಡಿ ಸಿಕ್ಕಿಬಿದ್ದಿದ್ದಾರೆ.

ಥೈಲೆಂಡ್​ನಲ್ಲಿ ಜರ್ಮನ್​ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಮಹಾರಾಷ್ಟ್ರದ ಇಬ್ಬರ ಬಂಧನ
ಪೊಲೀಸ್​
Image Credit source: Delta Optimist
Follow us on

ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿರುವುದು ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ಸವಾಲನ್ನು ಒಡ್ಡಿದೆ. ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿರುವುದು ನಾಗರಿಕರಲ್ಲಿ ಕಳವಳದ ವಾತಾವರಣವನ್ನು ಸೃಷ್ಟಿಸಿದೆ. ಸತಾರಾದ ಇಬ್ಬರು ಯುವಕರು ವಿದೇಶಕ್ಕೆ ಹೋದಾಗ ಅಲ್ಲಿ ಅತ್ಯಾಚಾರ ಮಾಡಿ ಸಿಕ್ಕಿಬಿದ್ದಿದ್ದಾರೆ.

ಥೈಲೆಂಡ್​ನಲ್ಲಿ ಜರ್ಮನ್ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಮಹಾರಾಷ್ಟ್ರದ ಇಬ್ಬರನ್ನು ಬಂಧಿಸಲಾಗಿದೆ. ಈ ಇಬ್ಬರು ಪ್ರವಾಸಕ್ಕೆಂದು ಥೈಲೆಂಡ್​ಗೆ ಹೋಗಿದ್ದರು. ಸೂರತ್ ಥಾನಿ ಪ್ರಾಂತ್ಯದ ರಿನ್ ಬೀಚ್‌ಗೆ ಹೋಗಿದ್ದರು ಆಗ ಇಬ್ಬರೂ ಜರ್ಮನ್ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಮಾಹಿತಿ ಲಭ್ಯವಾಗಿದೆ.

ಸಂತ್ರಸ್ತೆ ಕೊಹ್ ಫಂಗನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ, ಸಿಸಿಟಿವಿ ದೃಶ್ಯಗಳು ಮತ್ತು ಸಾಕ್ಷಿಗಳ ಹೇಳಿಕೆಗಳ ಆಧಾರದ ಮೇಲೆ, ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಪ್ರಸ್ತುತ, ಅವರು ಜೈಲಿನಲ್ಲಿದ್ದಾರೆ ಮತ್ತು ಪೊಲೀಸರು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ಓದಿ: ವಾಷಿಂಗ್​ ಮೆಷಿನ್​ನಿಂದ ಬಯಲಾಯ್ತು ಅತ್ಯಾಚಾರ, ಆರೋಪಿಗೆ ಶಿಕ್ಷೆ

ಕೃತ್ಯವನ್ನು ವಿಜಯ್ ದಾದಾಸಾಹೇಬ್ ಒಪ್ಪಿಕೊಂಡಿದ್ದಾರೆ, ಆದರೆ ರಾಹುಲ್ ಬಾಳಾಸಾಹೇಬ್ ಅದನ್ನು ನಿರಾಕರಿಸಿದ್ದಾರೆ. ಮಹಿಳೆಯ ಮೇಲೆ ಅತ್ಯಾಚಾರ ಮಾಡಿಲ್ಲ ಆದರೆ ಆಕೆ ವಿರೋಧಿಸಿದರೂ ಆಕೆಯನ್ನು ತಬ್ಬಿಕೊಂಡು ಕೆನ್ನೆಗೆ ಮುತ್ತುಕೊಟ್ಟಿರುವುದು ಸತ್ಯ ಎಂದಿದ್ದಾರೆ. ಈ ಅಪರಾಧಕ್ಕೆ 4-20 ವರ್ಷಗಳವರೆಗೂ ಶಿಕ್ಷೆ ವಿಧಿಸಬಹುದು. 10.33 ಲಕ್ಷದವರೆಗೂ ದಂಡ ವಿಧಿಸಬಹುದು.

ಈ ಘಟನೆ ಮಾರ್ಚ್ 14 ರಂದು ಬೆಳಗಿನ ಜಾವ 4.50 ಕ್ಕೆ ಹಾದ್ ರಿನ್ ಬೀಚ್‌ನಲ್ಲಿ ನಡೆದಿದೆ. ಘಟನೆ ನಡೆದ ಸಮಯದಲ್ಲಿ ತಾನು ಕುಡಿದ ಮತ್ತಿನಲ್ಲಿದ್ದ ಕಾರಣ ಆರೋಪಿಯ ಗುರುತು ಖಚಿತವಿಲ್ಲ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರು ಪ್ರದೇಶದ ಭದ್ರತಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಇವರಿಬ್ಬರು ಪತ್ತೆಯಾಗಿದ್ದಾರೆ. ಆರಂಭದಲ್ಲಿ ತಪ್ಪು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಬಳಿಕ ಒಪ್ಪಿಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ