ಹಮಾಸ್ ಒತ್ತೆಯಾಳುಗಳಾಗಿದ್ದ ಐವರ ಶವ ಪತ್ತೆ ಮಾಡಿ ಇಸ್ರೇಲ್ ಸೇನೆ
ಇಸ್ರೇಲ್ ಹಮಾಸ್ ಸೆರೆಯಲ್ಲಿದ್ದಾಗ ಐವರು ಒತ್ತೆಯಾಳುಗಳ ಶವ ಪತ್ತೆ ಮಾಡಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ. ಇಸ್ರೇಲಿ ರಕ್ಷಣಾ ಪಡೆ (ಐಡಿಎಫ್) ಎರಡು ವಾರಗಳ ಹಿಂದೆ ಹಮಾಸ್ ಒತ್ತೆಯಾಳುಗಳಾಗಿದ್ದ ಇಬ್ಬರ ಶವವನ್ನು ಪತ್ತೆ ಮಾಡಲಾಗಿತ್ತು. ಇದೀಗ ಮತ್ತೆ ಮೂವರ ಶವ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇನ್ನು ಶವ ಪತ್ತೆಗೆ ಸಂಬಂಧಿಸಿದಂತೆ ಇಸ್ರೇಲ್ ಮಿಲಿಟರಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಒಂದು ಸುರಂಗದ ಒಂದು ವಿಡಿಯೋವನ್ನು ಹಂಚಿಕೊಂಡಿದೆ.
ಹಮಾಸ್ – ಇಸ್ರೇಲ್ ನಡುವಿನ ಸಂಘರ್ಷಕ್ಕೆ ಕೊನೆ ಇಲ್ಲದಂತಾಗಿದೆ. ಕದನ ವಿರಾಮದ ನಂತರವು ಸಣ್ಣ ಪುಟ್ಟ ಘರ್ಷಣೆಗಳು ನಡೆಯುತ್ತಾಳೆ ಇದೆ. ಇದೀಗ ಇಸ್ರೇಲ್ ಹಮಾಸ್ ಸೆರೆಯಲ್ಲಿದ್ದಾಗ ಐವರು ಒತ್ತೆಯಾಳುಗಳ ಶವ ಪತ್ತೆ ಮಾಡಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ. ಇಸ್ರೇಲಿ ರಕ್ಷಣಾ ಪಡೆ (ಐಡಿಎಫ್) ಎರಡು ವಾರಗಳ ಹಿಂದೆ ಹಮಾಸ್ ಒತ್ತೆಯಾಳುಗಳಾಗಿದ್ದ ಇಬ್ಬರ ಶವವನ್ನು ಪತ್ತೆ ಮಾಡಲಾಗಿತ್ತು. ಇದೀಗ ಮತ್ತೆ ಮೂವರ ಶವ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇನ್ನು ಶವ ಪತ್ತೆಗೆ ಸಂಬಂಧಿಸಿದಂತೆ ಇಸ್ರೇಲ್ ಮಿಲಿಟರಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಒಂದು ಸುರಂಗದ ಒಂದು ವಿಡಿಯೋವನ್ನು ಹಂಚಿಕೊಂಡಿದೆ. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ಮಾಡಿದ ಸಂದರ್ಭದಲ್ಲಿ ಅಪಹರಣವಾಗಿದ್ದ 5 ಜನರು ಇದೀಗ ಶವವಾಗಿ ಪತ್ತೆಯಾಗಿದ್ದಾರೆ.
In a centralized intelligence effort, IDF troops located and recovered the bodies of 5 hostages—abducted during the October 7 Massacre—and brought them back to Israel:
🕯️WO Ziv Dado 🕯️SGT Ron Sherman 🕯️CPL Nik Beizer 🕯️Eden Zacharia 🕯️Elia Toledano
May their memory be a… pic.twitter.com/tq1UlLo8Z2
— Israel Defense Forces (@IDF) December 24, 2023
ಈ ಶವವನ್ನು ಪತ್ತೆ ಮಾಡಿದ್ದು, ದಕ್ಷಿಣ ಇಸ್ರೇಲ್‌ನಲ್ಲಿ ನಡೆದ ಸಂಗೀತ ಉತ್ಸವದಲ್ಲಿ ಭಾಗವಹಿಸಿದ್ದ 36 ವರ್ಷದ ಇಸ್ರೇಲಿ ಸೈನಿಕ ಝಿವ್ ದಾಡೋ ಮತ್ತು 27 ವರ್ಷದ ಈಡನ್ ಜಕಾರಿಯಾ ಅವರ ದೇಹ ಎಂದು ಹೇಳಲಾಗಿದೆ. ಉಳಿದ ಮೂರು ದೇಹವನ್ನು ಸಾರ್ಜೆಂಟ್ ರಾನ್ ಶೆರ್ಮನ್, ಸಿಪಿಎಲ್ ನಿಕ್ ಬೀಜರ್ ಮತ್ತು ಎಲಿಯಾ ಟೊಲೆಡಾನೊ ಎಂದು ಗುರುತಿಸಲಾಗಿದೆ,. ಇವರ ಶವ ಭಾನುವಾರ ಪತ್ತೆಯಾಗಿದೆ.
ಇದನ್ನೂ ಓದಿ: ಇಸ್ರೇಲ್, ಹಮಾಸ್ ನಡುವಿನ ತಾತ್ಕಾಲಿಕ ಕದನ ವಿರಾಮ ಅಂತ್ಯ, ಗಾಜಾದಲ್ಲಿ ಘರ್ಷಣೆ ಆರಂಭ
ಇನ್ನು ಈ ಮೂರು ದೇಹಗಳನ್ನು ಇಸ್ರೇಲ್ಗೆ ತೆಗೆದುಕೊಂಡು ಹೋಗಲಾಗುವುದು. ಹಾಗೂ ಅವರಿಗೆ ಸೈನ್ಯದ ಗೌರವ ಸಿಗಲಿದೆ. ಇಸ್ರೇಲ್‌ನಲ್ಲಿ ಅವರನ್ನು ಸಮಾಧಿ ಮಾಡಲಾಗುವುದು. ಮೂರು ಸಾವಿಗೆ ಹಮಾಸ್ ಕಾರಣ ಎಂದು ಹೇಳಲಾಗಿದೆ. ಭಾನುವಾರ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 60 ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾದಲ್ಲಿ ಹಮಾಸ್ ನಡೆಸುತ್ತಿರುವ ಆರೋಗ್ಯ ಸಚಿವಾಲಯ ತಿಳಿಸಿದೆ. ಅಕ್ಟೋಬರ್ 7ರಿಂದ ಆರಂಭವಾದ ಈ ಸಂಘರ್ಷಣೆ, ಇನ್ನು ಮುಗಿದಿಲ್ಲ. ಇಲ್ಲಿಯವರೆಗೆ 20,424 ಬಲಿ ತೆಗೆದುಕೊಂಡಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ