ಅಫ್ಘಾನಿಸ್ತಾನ(Afghanistan) ದಲ್ಲಿ ವಿಶ್ವಸಂಸ್ಥೆ(United Nations)ಗೆ ಕೆಲಸ ಮಾಡುವ 3,300 ಮಹಿಳೆಯರಿಗೆ ಎರಡು ದಿನಗಳ ಕಾಲ ಕೆಲಸಕ್ಕೆ ಬಾರದಂತೆ ವಿಶ್ವ ಸಂಸ್ಥೆ ಸೂಚಿಸಿದೆ. ಮಹಿಳಾ ಸಿಬ್ಬಂದಿ ಇಲ್ಲದೇ ವಿಶ್ವಸಂಸ್ಥೆಯ ಘಟಕಗಳು ಕಾರ್ಯನಿರ್ವಹಿಸಲು ಮತ್ತು ಜೀವ ಉಳಿಸುವ ಕೆಲಸದಲ್ಲಿ ಸಹಾಯ ನೀಡಲು ಸಾಧ್ಯವಿಲ್ಲ ಎಂದು ಅಲ್ಲಿನ ಅಧಿಕಾರಿಗಳಿಗೆ ಮತ್ತೊಮ್ಮೆ ನೆನಪಿಸುತ್ತೇವೆ ಎಂದು ವಿಶ್ವಸಂಸ್ಥೆ ಟ್ವೀಟ್ನಲ್ಲಿ ತಿಳಿಸಿದೆ.
ಹೆಚ್ಚಿನ ಸ್ಪಷ್ಟತೆ ಪಡೆಯಲು ಬುಧವಾರ ಕಾಬೂಲ್‌ನಲ್ಲಿ ಅಫ್ಘಾನ್ ವಿದೇಶಾಂಗ ಸಚಿವಾಲಯದ ಅಧಿಕಾರಿಗಳನ್ನು ಭೇಟಿ ಮಾಡಲಿದೆ.
ಮಾನವೀಯ ನೆರವಿಗಾಗಿ ವಿಶ್ವಸಂಸ್ಥೆ ಮಾಡುತ್ತಿರುವ ಕೆಲಸದಲ್ಲಿ ಮಹಿಳೆಯರಿಗೆ ನಿಷೇಧ ಹೇರಿರಲಿಲ್ಲ, ಆದರೆ ವಿಶ್ವಸಂಸ್ಥೆಗಾಗಿ ಕೆಲಸ ಮಾಡುವ ಮಹಿಳೆಯರನ್ನು ಗುರಿಯಾಗಿಸಬಹುದು ಎಂಬ ಭಯವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಕಾಬೂಲ್‌ನಲ್ಲಿ ಪಾಶ್ಚಿಮಾತ್ಯ ಬೆಂಬಲಿತ ಸರ್ಕಾರವನ್ನು ಉರುಳಿಸಿದಾಗಿನಿಂದ, ತಾಲಿಬಾನ್ ಮಹಿಳೆಯರನ್ನು ವಿಶ್ವವಿದ್ಯಾನಿಲಯದಿಂದ ನಿರ್ಬಂಧಿಸುವುದು ಮತ್ತು ಹೆಚ್ಚಿನ ಬಾಲಕಿಯರ ಪ್ರೌಢಶಾಲೆಗಳನ್ನು ಮುಚ್ಚುವುದು ಸೇರಿದಂತೆ ಸಾರ್ವಜನಿಕ ಜೀವನಕ್ಕೆ ಮಹಿಳೆಯರ ಪ್ರವೇಶದ ಮೇಲೆ ನಿಯಂತ್ರಣಗಳನ್ನು ಬಿಗಿಗೊಳಿಸಿದೆ.
ಮತ್ತಷ್ಟು ಓದಿ: Afghan University: ಅಫ್ಘಾನ್ ಹೆಣ್ಣುಮಕ್ಕಳಿಗೆ ವಿಶ್ವವಿದ್ಯಾಲಯಗಳಿಗೆ ಪ್ರವೇಶ ನಿಷೇಧ ಏಕೆ? ತಾಲಿಬಾನ್ ಕೊಟ್ಟ ಕಾರಣ ಕೇಳ್ರಪ್ಪಾ..
ಕಾಬೂಲ್‌ನಲ್ಲಿರುವ ವಿದೇಶಿ ರಾಯಭಾರ ಕಚೇರಿಗಳು ಮಹಿಳಾ ಸಿಬ್ಬಂದಿಯ ಬಗ್ಗೆ ಇದೇ ರೀತಿಯ ಸೂಚನೆಗಳನ್ನು ಪಡೆದಿವೆಯೇ ಎಂಬುದು ಸ್ಪಷ್ಟವಾಗಿಲ್ಲ. ಇಂತಹ ಯಾವುದೇ ನಿಷೇಧಗಳು ಸ್ವೀಕಾರಾರ್ಹವಲ್ಲ ಎಂದು ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ತಿಳಿಸಿದ್ದಾರೆ. ಈ ಬೆಳವಣಿಗೆಯು ದೇಶದಲ್ಲಿನ ನಮ್ಮ ಕಾರ್ಯಾಚರಣೆಗಳ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬುದನ್ನು ಗಮನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಅಫ್ಘಾನಿಸ್ತಾನದ ಮಹಿಳಾ ಯುಎನ್ ಕೆಲಸಗಾರರ ಮೇಲಿನ ನಿಷೇಧವು ಅಫ್ಘಾನಿಸ್ತಾನದಲ್ಲಿ ಮುಂದುವರಿದ UN ಕಾರ್ಯಾಚರಣೆಗಳಿಗೆ ಪ್ರಮುಖ ಸವಾಲುಗಳನ್ನು ಒಡ್ಡಬಹುದು.
-ವಾಹನ ಚಲಾವಣೆ, ಡಿಎಲ್ ನೀಡುವುದು ಬಂದ್
-ಸಾರ್ವಜನಿಕ ಪಾರ್ಕ್ಗಳಲ್ಲಿ ಮಹಿಳೆಯರಿಗೆ ನಿಷೇಧ
-ಉನ್ನತ ಶಿಕ್ಷಣ ಪಡೆಯುವುದರ ಮೇಲೆ ನಿರ್ಬಂಧ
-ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ, ಹಿಜಾಬ್ ಅಡಿಯಿಂದ ಮುಡಿಯವರೆಗೂ ಧರಿಸಬೇಕು
-ಮಸೀದಿಗಳಲ್ಲಿ ಬೋಧನಾ ತರಬೇತಿಗಳಿಗೆ ತಡೆ
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ