Imran Khan Video: ತಲೆಗೆ ಬುಲೆಟ್ ಪ್ರೂಫ್ ಬಕೆಟ್ ಧರಿಸಿ ಕೋರ್ಟ್‌ಗೆ ಹಾಜರಾದ ಇಮ್ರಾನ್ ಖಾನ್
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್(Imran Khan) ಲಾಹೋರ್ ಕೋರ್ಟ್‌ಗೆ ಹಾಜರಾದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಇಮ್ರಾನ್ ಖಾನ್ ಭಾರೀ ಭದ್ರತೆಯ ನಡುವೆ ಭಯೋತ್ಪಾದನಾ ನಿಗ್ರಹ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್(Imran Khan) ಲಾಹೋರ್ ಕೋರ್ಟ್‌ಗೆ ಹಾಜರಾದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಇಮ್ರಾನ್ ಖಾನ್ ಭಾರೀ ಭದ್ರತೆಯ ನಡುವೆ ಭಯೋತ್ಪಾದನಾ ನಿಗ್ರಹ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಈ ಸಮಯದಲ್ಲಿ ಬುಲೆಟ್ಪ್ರೂಫ್ ಬಕೆಟ್ ಒಂದನ್ನು ಇಮ್ರಾನ್ ಖಾನ್ ತಲೆಗೆ ಹಾಕಿರುವುದನ್ನು ಕಾಣಬಹುದು. ಯಾವುದೇ ದಾಳಿಕೋರನು ಮೇಲಿನಿಂದ ಗುಂಡು ಹಾರಿಸಬಾರದು ಎನ್ನುವ ಮುನ್ನೆಚ್ಚರಿಕೆಯಿಂದ ಬ್ಯಾಲಿಸ್ಟಿಕ್ ಶೀಲ್ಡ್ನ್ನು ಬಕೆಟ್ನಂತೆ ಮಾಡಿ ತಲೆಗೆ ಹಾಕಿಕೊಂಡಿದ್ದರು.
ಝಿಲ್ಲೆ ಷಾ ಹತ್ಯೆ ಪ್ರಕರಣ, ಬೆಂಕಿ ಹಚ್ಚುವಿಕೆ ಮತ್ತು ರಾಜ್ಯ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸುವ ಮೂರು ಪ್ರಕರಣಗಳಲ್ಲಿ ಇಮ್ರಾನ್ ಖಾನ್ ಜಾಮೀನು ಕೋರಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಭಯೋತ್ಪಾದನೆ ನಿಗ್ರಹ ಹಾಗೂ ನೆರವು ಮತ್ತು ಕುಮ್ಮಕ್ಕು ನೀಡುವ ಕಾನೂನುಗಳಡಿಯಲ್ಲಿ ರೇಸ್ಕೋರ್ಸ್ ಪೊಲೀಸ್ ಠಾಣೆಯಲ್ಲಿ ಇಮ್ರಾನ್ ಖಾನ್ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ.
ಮತ್ತಷ್ಟು ಓದಿ: Imran Khan: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ಗೆ ಮಧ್ಯಂತರ ಜಾಮೀನು
ಇಮ್ರಾನ್ ಖಾನ್ ಅವರ ತಲೆಯನ್ನು ಬುಲೆಟ್ ಪ್ರೂಫ್ ಬಕೆಟ್ನಿಂದ ಮುಚ್ಚಲಾಗಿತ್ತು ಅವರು ನ್ಯಾಯಾಲಯಕ್ಕೆ ಹಾಜರಾದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇಮ್ರಾನ್ ಖಾನ್ ಬುಲೆಟ್ ಪ್ರೂಫ್ ಬುರ್ಖಾ ಧರಿಸಿದ್ದಾರೆ ಎಂದು ಕೆಲವರು ಕೇಳಿದ್ದಾರೆ. ಕಳೆದ ವರ್ಷ ವಜೀರಾಬಾದ್ನಲ್ಲಿ ನಡೆದ ದಾಳಿಯ ಬಳಿಕ ಅವರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.
عمران خان سخت سیکیورٹی میں انسداد دہشتگردی عدالت پیش ہوئے۔ pic.twitter.com/ZKetvQBQUe
— PTI (@PTIofficial) April 4, 2023
ಖಾನ್ ಪ್ರಸ್ತುತ 140ಕ್ಕೂ ಹೆಚ್ಚು ಪ್ರಕರಣಗಳನ್ನು ಎದುರಿಸುತ್ತಿದ್ದು, ಭಯೋತ್ಪಾದನೆ, ಕೊಲೆ ಯತ್ನ, ಧರ್ಮನಿಂದನೆ ಬಗ್ಗೆ PMNL ನೇತೃತ್ವದ ಸಮ್ಮಿಶ್ರ ಸರ್ಕಾರ ಕಳೆದ 11 ತಿಂಗಳುಗಳಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಇದನ್ನು ಪಾಕಿಸ್ತಾನದ Z+ ಭದ್ರತೆ ಎಂದು ಬಣ್ಣಿಸಲಾಗುತ್ತಿದೆ.
ಇಮ್ರಾನ್ ಖಾನ್ ಅವರ ಈ ವಿಡಿಯೋ ಇಂದಿನದು. ಈ ವಿಡಿಯೋವನ್ನು ಇಮ್ರಾನ್ ಖಾನ್ ಅವರ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಕೂಡ ಹಂಚಿಕೊಂಡಿದೆ. ಒಟ್ಟು ಮೂರು ಪ್ರಕರಣಗಳಲ್ಲಿ ಇಮ್ರಾನ್ ಖಾನ್ಗೆ ಜಾಮೀನು ಸಿಕ್ಕಿದೆ. ಜಾಮೀನನ್ನು ಏಪ್ರಿಲ್ 13 ರವರೆಗೆ ವಿಸ್ತರಿಸಲಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:47 am, Wed, 5 April 23