ಟಿಬೆಟ್ ಹಿಮಪಾತ
ಬೀಜಿಂಗ್: ಟಿಬೆಟ್‌ನ ನೈಋತ್ಯ ಪ್ರದೇಶದ ನೈಂಗ್‌ಚಿ (Nyingchi) ನಗರದಲ್ಲಿ ಸಂಭವಿಸಿದ ಹಿಮಪಾತದಲ್ಲಿ (Avalanche) 8 ಜನರು ಸಾವನ್ನಪ್ಪಿದ್ದಾರೆ. ಈ ಭೀಕರ ಹಿಮಪಾತದಲ್ಲಿ ಮೃತಪಟ್ಟವರ ದೇಹಗಳನ್ನು ಪತ್ತೆ ಮಾಡಲು ಹಾಗೂ ಇನ್ನೂ ಕಾಣೆಯಾಗಿರುವ ಜನರನ್ನು ಹುಡುಕಲು ಸಹಾಯ ಮಾಡಲು ಚೀನಾ ಸರ್ಕಾರ (China Government) ರಕ್ಷಣಾ ತಂಡವನ್ನು ಕಳುಹಿಸಿದೆ.
- ಮೈನ್ಲಿಂಗ್ ಕೌಂಟಿಯ ಪೈ ಗ್ರಾಮದ ನಡುವಿನ ರಸ್ತೆಯ ಒಂದು ವಿಭಾಗದಲ್ಲಿ ಮತ್ತು ಮೆಡಾಗ್ ಕೌಂಟಿಯ ಡೊಕ್ಸಾಂಗ್ ಲಾ ಸುರಂಗದ ದ್ವಾರದಲ್ಲಿ ಹಿಮಕುಸಿತ ಸಂಭವಿಸಿದೆ.
- ಮಂಗಳವಾರ ರಾತ್ರಿ 8 ಗಂಟೆಗೆ ಈ ಹಿಮಪಾತ ಸಂಭವಿಸಿದೆ. ಜನರು ಮತ್ತು ವಾಹನಗಳು ಹಿಮಪಾತದಲ್ಲಿ ಸಿಕ್ಕಿಹಾಕಿಕೊಂಡಿವೆ.
- ಹಿಮಪಾತಕ್ಕೆ ಸಿಲುಕಿ ನಾಪತ್ತೆಯಾದವರ ಸಂಖ್ಯೆಯನ್ನು ಅಧಿಕಾರಿಗಳು ಇನ್ನೂ ಬಿಡುಗಡೆ ಮಾಡಿಲ್ಲ.
- ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಗೆ 131 ಜನರನ್ನು ಮತ್ತು 28 ವಾಹನಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಿದ್ದಾರೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.
- ಚೀನಾದ ತುರ್ತು ನಿರ್ವಹಣಾ ಸಚಿವಾಲಯವು ಹಿಮಕುಸಿತದ ನಂತರ ನೈಋತ್ಯ ಚೀನಾದ ಟಿಬೆಟ್ ಸ್ವಾಯತ್ತ ಪ್ರದೇಶಕ್ಕೆ ರಕ್ಷಣಾ ತಂಡವನ್ನು ಕಳುಹಿಸಿದೆ.
- ತುರ್ತು ರಕ್ಷಣಾ ಪ್ರಧಾನ ಕಚೇರಿಯು 246 ರಕ್ಷಣಾ ಸಿಬ್ಬಂದಿ, 70ಕ್ಕೂ ಹೆಚ್ಚು ವಾಹನಗಳು, 10 ದೊಡ್ಡ ಪ್ರಮಾಣದ ಉಪಕರಣಗಳು ಮತ್ತು 994 ಶೋಧ ಸಾಧನಗಳನ್ನು ಸ್ಥಳಕ್ಕೆ ಕಳುಹಿಸಿದೆ.
- ನೈಂಗ್ಚಿಯು ಸರಾಸರಿ ಸುಮಾರು 9,300 ಅಡಿ ಎತ್ತರದಲ್ಲಿದೆ. ಈ ಸ್ಥಳವನ್ನು ಟಿಬೆಟ್‌ನ ಸ್ವಿಟ್ಜರ್ಲೆಂಡ್ ಎಂದೂ ಕರೆಯುತ್ತಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ