ಪಾಕಿಸ್ತಾನದ ಜಲಪ್ರಳಯದೊಂದಿಗೆ ಏಗಲು ಪ್ರಯತ್ನಿಸುತ್ತಿರುವಾಗಲೇ, ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 1,300 ದಾಟಿದೆ

| Updated By: ರಶ್ಮಿ ಕಲ್ಲಕಟ್ಟ

Updated on: Sep 06, 2022 | 8:41 PM

ಪಾಕಿಸ್ತಾನಕ್ಕೆ 160 ಮಿಲಿಯನ್ ಡಾಲರ್ ನೆರವು ನಿಧಿಯ ಅವಶ್ಯಕತೆಯಿದೆ ಎಂದು ವಿಶ್ವಸಂಸ್ಥೆಯು ಹೇಳಿದ್ದರೆ ಪಾಕಿಸ್ತಾನದ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ಅವರು ಆ ಮೊತ್ತ ಸಾಕಾಗದು ನಮಗೆ ಇನ್ನೂ ಹೆಚ್ಚಿನ ನೆರವು ಬೇಕಿದೆ ಅಂತ ಹೇಳಿದ್ದಾರೆ.

ಪಾಕಿಸ್ತಾನದ ಜಲಪ್ರಳಯದೊಂದಿಗೆ ಏಗಲು ಪ್ರಯತ್ನಿಸುತ್ತಿರುವಾಗಲೇ, ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 1,300 ದಾಟಿದೆ
ಪ್ರವಾಹದಿಂದ ಪಾಕಿಸ್ತಾನ ತತ್ತರಿಸಿದೆ!
Follow us on

ಇಸ್ಲಾಮಾಬಾದ್/ಕರಾಚಿ: ಪಾಕಿಸ್ತಾನದಲ್ಲಿ ನೆರೆಯ ಪೀಡೆ ಕೊನೆಗಳ್ಳುತ್ತಿಲ್ಲ. ಕಳೆದ ಎರಡು ವಾರಗಳಲ್ಲಿ ದೇಶದಾದ್ಯಂತ ಸುರಿದ ಭಯಂಕರ ಮಳೆಯಿಂದ ಉಂಟಾದ ಜಲಪ್ರಳಯ (floods) ಈಗಾಗಲೇ 1,314 ಜನರನ್ನು ಬಲಿ ತೆಗೆದುಕೊಂಡಿದೆ. ಅಲ್ಲಿನ ಸರ್ಕಾರದ ಮುಂದಿರುವ ಹಲವಾರು ಸವಾಲುಗಳಲ್ಲಿ ದೇಶದ ಅತಿದೊಡ್ಡ ಕೆರೆ (largest Lake) ಒಡೆಯದಂತೆ ಕಾಪಾಡುವುದು ಒಂದಾಗಿದೆ. ಒಂದು ಪಕ್ಷ ಕೆರೆದಂಡೆಗಳೇನಾದರೂ ನೀರಿನ ಒತ್ತಡ ತಾಳಲಾದರೆ ಒಡೆದರೆ ಅದರ ಸುತ್ತಮುತ್ತ ಇರುವ ಊರಿಗಳಿಗೆಲ್ಲ ನೀರು ನುಗ್ಗಲಿದೆ.

ದಾಖಲೆಯ ಮಳೆ ಮತ್ತು ಪಾಕಿಸ್ತಾನ ಉತ್ತರಭಾಗದ ಪರ್ವತ ಪರ್ವತ ಶ್ರೇಣಿಗಳಲ್ಲಿನ ಹಿಮನದಿಗಳು ಕರಗಿ ಉಂಟಾದ ಪ್ರವಾಹ ಸುಮಾರು ಮೂರೂವರೆ ಕೋಟಿ ಜನರ ಮೇಲೆ ಪ್ರಭಾವ ಬೀರಿದೆ. ಪಾಕಿಸ್ತಾನದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ ಬಲಿಯಾದವರ ಪೈಕಿ 458 ಮಕ್ಕಳೂ ಸೇರಿದ್ದಾರೆ.

ಪಾಕಿಸ್ತಾನ ಜಲಪ್ರಳಯದಿಂದ ತತ್ತರಿಸುವ ಮೊದಲು ಅಲ್ಲಿನ ಜನ ಮೈಮೇಲೆ ಬೊಬ್ಬೆಯೇಳುವಂಥ ತಾಪಮಾನದಿಂದ ಬಳಲಿ ಬೆಂಡಾಗಿದ್ದರು. ಪಾಕಿಸ್ತಾನ ಸರ್ಕಾರ ಮತ್ತು ವಿಶ್ವಸಂಸ್ಥೆ ಎರಡೂ ಹವಾಮಾನ ವೈಪರೀತ್ಯ, ವಿಕೋಪಗಳನ್ನು ಸೃಷ್ಟಿಸಿದೆ ಎಂದು ಹೇಳಿದ್ದವು.

ಪಾಕಿಸ್ತಾನದ ಅತಿದೊಡ್ಡ ತಾಜಾ ನೀರಿನ ಕೆರೆಯು ನೀರಿನ ಒತ್ತಡ ತಾಳಲಾಗದೆ ಒಡೆದು ಮತ್ತೊಂದು ಪ್ರವಾಹ ಪರಿಸ್ಥಿತಿ ಉಂಟಾಗದಂತೆ ಮಾಡುವುದಕ್ಕೋಸ್ಕರ ಅಧಿಕಾರಿಗಳು ಅದರಿಂದ ಭಾರಿ ಪ್ರಮಾಣದ ನೀರನ್ನು ಪಂಪ್ ಗಳ ಮೂಲಕ ಹೊರಹಾಕಿದರು. ರವಿವಾರದಂದು ಈ ಕಾರ್ಯವನ್ನು ಕೈಗೆತ್ತಿಕೊಳ್ಳುವ ಮೊದಲು ಅವರು ಕೆರೆಯ ಸುತ್ತಮುತ್ತಲಿನ ಊರುಗಳ ಸುಮಾರು 10,000 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದರು.

ಆದರೆ ಸಿಂಧ್‌ ದಕ್ಷಿಣ ಪ್ರಾಂತ್ಯದ ಸಿಂಧೂ ನದಿಯ ಪಶ್ಚಿಮಕ್ಕೆ ಕೆರೆಯಲ್ಲಿ ನೀರಿನ ಮಟ್ಟವು ಅಪಾಯಕಾರಿಯಾಗಿ ಹೆಚ್ಚಿದೆ.

‘ಮಂಚಾರ್ ಕೆರೆಯಲ್ಲಿ ನೀರಿನ ಮಟ್ಟ ಕಡಿಮೆಯಾಗಿಲ್ಲ’ ಎಂದು ಪ್ರಾಂತೀಯ ನೀರಾವರಿ ಸಚಿವ ಜಮ್ ಖಾನ್ ಶೋರೊ ರಾಯಿಟರ್ಸ್‌ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಇನ್ನೊಮ್ಮೆ ಕೆರೆಯಿಂದ ನೀರನ್ನು ಹೊರಹರಿಸುವ ಹರಿಸುವ ಪ್ರಯತ್ನ ನಡೆಸಲಾಗುವುದೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಲು ಸಚಿವರು ನಿರಾಕರಿಸಿದರು.
ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ಈಗಾಗಲೇ ನೆರವನ್ನು ಎದುರು ನೋಡುತ್ತಿರುವ ಪಾಕಿಸ್ತಾನನದ ಆರ್ಥಿಕತೆಗೆ ಪ್ರವಾಹವು ಭಾರೀ ದೊಡ್ಡ ಹೊರೆಯಾಗಿ ಪರಿಣಮಿಸಿದೆ.

ಪಾಕಿಸ್ತಾನಕ್ಕೆ 160 ಮಿಲಿಯನ್ ಡಾಲರ್ ನೆರವು ನಿಧಿಯ ಅವಶ್ಯಕತೆಯಿದೆ ಎಂದು ವಿಶ್ವಸಂಸ್ಥೆಯು ಹೇಳಿದ್ದರೆ ಪಾಕಿಸ್ತಾನದ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ಅವರು ಆ ಮೊತ್ತ ಸಾಕಾಗದು ನಮಗೆ ಇನ್ನೂ ಹೆಚ್ಚಿನ ನೆರವು ಬೇಕಿದೆ ಅಂತ ಹೇಳಿದ್ದಾರೆ.

‘ಪಾಕಿಸ್ತಾನ 10 ಬಿಲಿಯನ್ ಡಾಲರ್ ಗಳಿಗಿಂತ ಹೆಚ್ಚಿನ ಹಾನಿಗೊಳಗಾಗಿದೆ.’ ಎಂದು ಸಿ ಎನ್ ಬಿ ಸಿಗೆ ನೀಡಿರುವ ಸಂದರ್ಶನದಲ್ಲಿ ಇಸ್ಮಾಯಿಲ್ ಹೇಳಿದ್ದಾರೆ.

‘ಸ್ಪಷ್ಟವಾಗಿ ಹೇಳುವುದಾದರೆ 160 ಮಿಲಿಯನ್ ಡಾಲರ್ ನಮಗೆ ಯಾತಕ್ಕೂ ಸಾಕಾಗದು. ಆರ್ಥಿಕ ಸಂಪನ್ಮೂಲಗಳ ಅಪಾರ ಕೊರತೆ ಹೊರತಾಗಿಯೂ ಪಾಕಿಸ್ತಾನ ಭಾರೀ ಪ್ರಮಾಣದಲ್ಲಿ ಸಾಲ ಎತ್ತಬೇಕಾಗಿದೆ,’ ಎಂದು ಅವರು ಹೇಳಿದರು.

ಆದರೆ, ವಿದೇಶಗಳಿಂದ ಪಾಕಿಸ್ತಾನಕ್ಕೆ ಪರಿಹಾರ ಒದಗಿ ಬರುತ್ತಿದೆ. ಪರಿಹಾರ ಸಾಮಗ್ರಿಗಳನ್ನು ಹೊತ್ತ ವಿಮಾನಗಳು ವಿಶ್ವಸಂಸ್ಥೆ, ತುರ್ಕ್ಮೇನಿಸ್ತಾನ, ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿದಂತೆ ಬೇರೆ ಕೆಲ ದೇಶಗಳಿಂದ ಪಾಕಿಸ್ತಾನದಲ್ಲಿ ಬಂದಿಳಿದಿವೆ, ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಹೇಳಿದೆ.

ಉಪಖಂಡದ ಬೇರೆ ದೇಶಗಳಲ್ಲಿನ ಸ್ಥಿತಿ ನೋಡುವುದಾದರೆ, ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾದಲ್ಲೂ ಪ್ರವಾಹದಂಥ ಸ್ಥಿತಿ ನಿರ್ಮಾಣವಾಗಿದೆ. ಭಾರತದಲ್ಲಿ ಐಟಿ ಹಬ್ ಎನಿಸಿಕೊಂಡಿರುವ ಬೆಂಗಳೂರಲ್ಲಿ ರವಿವಾರ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಏಷ್ಯಾದ ಹಲವಾರು ದೇಶಗಳಲ್ಲಿ ಬೇಸಿಗೆಯ ಉತ್ತರಾರ್ಧವು ಮಳೆಗಾಲದ ಸೀಸನ್ ಆಗಿ ಮಾರ್ಪಟ್ಟಿದೆ.

Published On - 8:08 am, Tue, 6 September 22