Liz Truss ಯುಕೆ ನೂತನ ಪ್ರಧಾನಿ ಹುದ್ದೆಗೇರಿದ ಲಿಜ್ ಟ್ರಸ್ ಪರಿಚಯ ಇಲ್ಲಿದೆ
UK New PM ಮುಂದಿನ ಎರಡು ವರ್ಷಗಳಲ್ಲಿ ನಾವು ನೀಡಿದ ಭರವಸೆ ಪೂರೈಸುತ್ತೇವೆ. ತೆರಿಗೆಗಳನ್ನು ಕಡಿತಗೊಳಿಸಲು ಮತ್ತು ನಮ್ಮ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಲು ನಾನು ದಿಟ್ಟ ಯೋಜನೆಯನ್ನು ನೀಡುತ್ತೇನೆ ಎಂದ ಬ್ರಿಟನ್ ನೂತನ ಪ್ರಧಾನಿ ಲಿಜ್ ಟ್ರಸ್
ರಿಷಿ ಸುನಕ್ ಅವರನ್ನು ಪರಾಭವಗೊಳಿಸಿ ಲಿಜ್ ಟ್ರಸ್ (Liz Truss) ಅವರು ಬ್ರಿಟನ್‌ನ (British) ಹೊಸ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಜುಲೈನಲ್ಲಿ ಬೋರಿಸ್ ಜಾನ್ಸನ್ (Boris Johnson) ಅವರ ರಾಜೀನಾಮೆ ನಂತರ ಪ್ರಧಾನಿ ಹುದ್ದೆಗಾಗಿ ನಡೆದ ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿ ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಅವರನ್ನು ಸೋಲಿಸಿದ್ದಾರೆ. ಚುನಾವಣಾ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದ ಟ್ರಸ್ ಅವರು 2015 ರ ಚುನಾವಣೆಯ ನಂತರ ಕನ್ಸರ್ವೇಟಿವ್‌ಗಳ ನಾಲ್ಕನೇ ಪ್ರಧಾನ ಮಂತ್ರಿಯಾಗಿದ್ದಾರೆ. 47 ವರ್ಷದ ಟ್ರಸ್ ಯುಕೆಯ ಮೂರನೇ ಈ ಚುನಾವಣೆಯಲ್ಲಿ 81,326 ಮತಗಳನ್ನು ಪಡೆದಿದ್ದು ರಿಷಿ ಸುನಕ್ 60,399 ಮತಗಳನ್ನು ಪಡೆದರು. ನಿಮ್ಮ ಬೆಂಬಲಕ್ಕೆ ನಾನು ಆಭಾರಿಯಾಗಿದ್ದೇನೆ. ಇದು ಕಠಿಣ ಹೋರಾಟದ ಸ್ಪರ್ಧೆಯಾಗಿದೆ. ಸ್ಪರ್ಧೆಯು ಪಕ್ಷದ ಪ್ರತಿಭೆಯ ಆಳವನ್ನು ತೋರಿಸುತ್ತದೆ. ರಿಷಿ ಸುನಕ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಯುಕೆ ಪ್ರಧಾನ ಮಂತ್ರಿಯಾಗಿ ನೇಮಕಗೊಂಡ ನಂತರ ಲಿಜ್ ಟ್ರಸ್ ಹೇಳಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ನಾವು ನೀಡಿದ ಭರವಸೆ ಪೂರೈಸುತ್ತೇವೆ. ತೆರಿಗೆಗಳನ್ನು ಕಡಿತಗೊಳಿಸಲು ಮತ್ತು ನಮ್ಮ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಲು ನಾನು ದಿಟ್ಟ ಯೋಜನೆಯನ್ನು ನೀಡುತ್ತೇನೆ. ನಾನು ಇಂಧನ ಬಿಕ್ಕಟ್ಟನ್ನು ಪರಿಶೀಲಿಸಿ ಜನರ ಇಂಧನ ಬಿಲ್‌ಗಳೊಂದಿಗೆ ವ್ಯವಹರಿಸುತ್ತೇನೆ, ಆದರೆ ಇಂಧನ ಪೂರೈಕೆಯಲ್ಲಿ ನಾವು ಹೊಂದಿರುವ ದೀರ್ಘಾವಧಿಯ ಸಮಸ್ಯೆಗಳನ್ನು ಸಹ ನಿಭಾಯಿಸುತ್ತೇನೆ ಎಂದಿದ್ದಾರೆ ಟ್ರಸ್.
ಬ್ರಿಟನ್ ನ ನೂತನ ಪ್ರಧಾನಿ ಲಿಜ್ ಟ್ರಸ್ ಪರಿಚಯ
ಶಿಕ್ಷಣ
47 ವರ್ಷದ ಲಿಜ್ ಆಕ್ಸ್‌ಫರ್ಡ್‌ನಲ್ಲಿ ಜನಿಸಿದರು. ಆಕೆಯ ತಂದೆ ಗಣಿತ ಪ್ರಾಧ್ಯಾಪಕರಾಗಿದ್ದರು, ಮತ್ತು ಆಕೆಯ ತಾಯಿ ನರ್ಸ್. ಟ್ರಸ್ ಒಮ್ಮೆ ತನ್ನ ಹೆತ್ತವರನ್ನು ‘ಎಡಪಂಥೀಯರು’ ಎಂದಿದ್ದರು. ಆಕೆಯ ಕುಟುಂಬವು ಸಕ್ರಿಯ ರಾಜಕೀಯದ ಭಾಗವಾಗಿರಲಿಲ್ಲ. ಆದರೆ ಮಾಜಿ ಪಿಎಂ ಮಾರ್ಗರೆಟ್ ಥ್ಯಾಚರ್ ಯುಎಸ್ ಪರಮಾಣು ಸಿಡಿತಲೆಗಳನ್ನು ಲಂಡನ್‌ನ ಪಶ್ಚಿಮದಲ್ಲಿರುವ ಆರ್‌ಎಎಫ್ ಗ್ರೀನ್‌ಹ್ಯಾಮ್ ಕಾಮನ್‌ನಲ್ಲಿ ಸ್ಥಾಪಿಸಲು ಅನುಮತಿಸಿದಾಗ ಪರಮಾಣು ನಿಶ್ಯಸ್ತ್ರೀಕರಣಕ್ಕೆ ಕರೆ ನೀಡುವ ರ್ಯಾಲಿಗಳಿಗೆ ತೆರಳಿದರು. ಅವರು ಶಾಲೆಯ ಅಣಕುಚುನಾವಣೆಯಲ್ಲಿ ಮಾರ್ಗರೆಟ್ ಥ್ಯಾಚರ್ ಪಾತ್ರವನ್ನು ನಿರ್ವಹಿಸಿದರು. ಆದರೆ ಪರಾಭವಗೊಂಡರು. ಆದರೆ ಥ್ಯಾಚರ್ ಪಾತ್ರ ಖುಷಿಕೊಟ್ಟಿತ್ತು. ಟ್ರಸ್ ಗ್ಲಾಸ್ಗೋ ಮತ್ತು ಲೀಡ್ಸ್‌ನಲ್ಲಿ ಶಾಲೆಯಲ್ಲಿ ಶಿಕ್ಷಣ ಪೂರೈಸಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದರು. ಅಲ್ಲಿ ಅವರು ತತ್ವಶಾಸ್ತ್ರ, ರಾಜಕೀಯ ಮತ್ತು ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದರು. ವಿದ್ಯಾರ್ಥಿ ರಾಜಕೀಯದಲ್ಲಿ ಸಕ್ರಿಯರಾಗಿದ್ದರು.
ಕುಟುಂಬ
ಲಿಜ್ ಟ್ರಸ್ ಅವರು 2000 ರಲ್ಲಿ ಅಕೌಂಟೆಂಟ್ ಹಗ್ ಓ’ಲಿಯರಿ ಅವರನ್ನು ವಿವಾಹವಾದರು. ಅವರು ದಿ ಟೆಲಿಗ್ರಾಫ್‌ನೊಂದಿಗೆ ಮಾತನಾಡುವಾಗ ಹಗ್ ತಾಳ್ಮೆಯ, ಯಾವುದೇ ಭಾವನೆಗಳನ್ನು ವ್ಯಕ್ತಪಡಿಸದ ವ್ಯಕ್ತಿ ಎಂದು ವಿವರಿಸಿದ್ದರು. ಹಗ್ ಸ್ಥಳೀಯ ಕನ್ಸರ್ವೇಟಿವ್ ಪಕ್ಷದ ಘಟಕದ ಅತ್ಯಂತ ಸಕ್ರಿಯ ಸದಸ್ಯರಾಗಿದ್ದಾರೆ. ಆಕೆಗೆ ಫ್ರಾನ್ಸಿಸ್ (16) ಮತ್ತು ಲಿಬರ್ಟಿ(13) ಎಂಬ ಇಬ್ಬರು ಹದಿಹರೆಯದ ಹೆಣ್ಣು ಮಕ್ಕಳಿದ್ದಾರೆ .
ರಾಜಕೀಯ ವೃತ್ತಿ
ಲಿಜ್ ಟ್ರಸ್ ಅವರ ರಾಜಕೀಯ ಮಹತ್ವಾಕಾಂಕ್ಷೆಗಳು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿರುವಾಗಲೇ ಗೊತ್ತಾಗಿತ್ತು. ಅವರು ಲಿಬರಲ್ ಡೆಮೋಕ್ರಾಟ್ ಆಗಿ ಸಕ್ರಿಯರಾಗಿದ್ದು ಒಂದು ಹಂತದಲ್ಲಿ ಅವರು 1994 ರಲ್ಲಿ ರಾಜಪ್ರಭುತ್ವವನ್ನು ರದ್ದುಗೊಳಿಸುವುದಾಗಿ ಹೇಳಿದರು. ಅವರು ಆಕ್ಸ್‌ಫರ್ಡ್‌ನಲ್ಲಿ ಓದುತ್ತಿರುವಾಗ ಕನ್ಸರ್ವೇಟಿವ್ ಪಕ್ಷಕ್ಕೆ ಬದಲಾದರು. ಅವರು 2001 ಮತ್ತು 2005 ರಲ್ಲಿ ಕ್ರಮವಾಗಿ ಹೆಮ್ಸ್ವರ್ತ್ ಮತ್ತು ಕಾಲ್ಡರ್ ವ್ಯಾಲಿಯಿಂದ ಎರಡು ಚುನಾವಣೆಗಳನ್ನು ಎದುರಿಸಿ ಸೋತರು.
2006 ರಲ್ಲಿ ಆಗ್ನೇಯ ಲಂಡನ್‌ನ ಗ್ರೀನ್‌ವಿಚ್‌ನಿಂದ ತಮ್ಮ ಮೊದಲ ಚುನಾವಣೆಯಲ್ಲಿ ಗೆದ್ದರು, ಅಲ್ಲಿ ಅವರು ಕೌನ್ಸಿಲರ್ ಆಗಿ ಆಯ್ಕೆಯಾದರು. ಕನ್ಸರ್ವೇಟಿವ್ ಪಕ್ಷದ ನಾಯಕ ಮತ್ತು ಮಾಜಿ ಪ್ರಧಾನಿ ಡೇವಿಡ್ ಕ್ಯಾಮರೂನ್ 2010 ರಲ್ಲಿ ಟ್ರಸ್ ತನ್ನ ಆದ್ಯತೆಯ ಅಭ್ಯರ್ಥಿಗಳ ಎ-ಲಿಸ್ಟ್ ಬಯಸಿದ್ದು ಅವರು ಸೌತ್ ವೆಸ್ಟ್ ನಾರ್ಫೋಕ್ ಸ್ಥಾನದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದರು.
ಅವರು ಸಂಸದರಾದ ಎರಡು ವರ್ಷಗಳ ನಂತರ, ಅವರು 2012 ರಲ್ಲಿ ಶಿಕ್ಷಣ ಸಚಿವರ ಪಾತ್ರಕ್ಕೆ ಆಯ್ಕೆಯಾದರು. 2014 ರಲ್ಲಿ ಅವರು ಪರಿಸರ ಕಾರ್ಯದರ್ಶಿ ಪಾತ್ರಕ್ಕೆ ಬಡ್ತಿ ಪಡೆದರು.
ವಿವಿಧ ಮಾಧ್ಯಮ ವರದಿಗಳ ಪ್ರಕಾರ 2022 ರ ವೇಳೆಗೆ ಲಿಜ್ ಟ್ರಸ್ $ 10 ಮಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ವರದಿಗಳು ಅವರ ಸಂಭಾವನೆಯು ವರ್ಷಕ್ಕೆ $ 450,000 ಆಗಿದೆ ಎಂದು ಸೂಚಿಸುತ್ತದೆ.ಆಕೆ ಬಳಿ ಎಸ್ಕಲೇಡ್, ಲ್ಯಾಂಡ್ ರೋವರ್ ಡಿಫೆಂಡರ್, BMW 7 ಸೀರಿಸ್, ಜಾಗ್ವಾರ್ XF ಮತ್ತು ರೇಂಜ್ ರೋವರ್ ಇದೆ.
Published On - 7:12 pm, Mon, 5 September 22