Big News: ಪಶ್ಚಿಮ ಆಫ್ರಿಕಾದಲ್ಲಿ ಐಇಡಿ ಸ್ಫೋಟ; 35 ಜನ ಸಾವು, 37 ಮಂದಿಗೆ ಗಾಯ

ಈ ಘಟನೆಯಲ್ಲಿ 37 ಮಂದಿ ಗಾಯಗೊಂಡಿದ್ದಾರೆ. ಬೆಂಗಾವಲು ಪಡೆಯ ವಾಹನವೊಂದರಲ್ಲಿ ಐಇಡಿ ಸ್ಫೋಟವಾದಾಗ ಈ ಸಾವು ಸಂಭವಿಸಿದೆ.

Big News: ಪಶ್ಚಿಮ ಆಫ್ರಿಕಾದಲ್ಲಿ ಐಇಡಿ ಸ್ಫೋಟ; 35 ಜನ ಸಾವು, 37 ಮಂದಿಗೆ ಗಾಯ
ಆಫ್ರಿಕಾದ ಬುರ್ಕಿನಾ ಫಾಸೊದಲ್ಲಿ ಐಇಡಿ ಸ್ಫೋಟImage Credit source: India.com
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Sep 06, 2022 | 9:17 AM

ಬುರ್ಕಿನಾ ಫಾಸೊ: ಪಶ್ಚಿಮ ಆಫ್ರಿಕಾದ (West Africa) ಬುರ್ಕಿನಾ ಫಾಸೊದಲ್ಲಿ ಐಇಡಿ ಸ್ಫೋಟ (IED Blast) ಉಂಟಾದ ಪರಿಣಾಮ 35 ಜನರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ 37 ಮಂದಿ ಗಾಯಗೊಂಡಿದ್ದಾರೆ. ಬೆಂಗಾವಲು ಪಡೆಯ ವಾಹನವೊಂದರಲ್ಲಿ ಐಇಡಿ ಸ್ಫೋಟವಾದಾಗ ಈ ಸಾವು ಸಂಭವಿಸಿದೆ.

ಸದ್ಯಕ್ಕೆ 35 ಜನರು ಮೃತಪಟ್ಟಿದ್ದಾರೆ ಮತ್ತು 37 ಜನರು ಗಾಯಗೊಂಡಿದ್ದಾರೆ ಎಂದು ರಾಜ್ಯಪಾಲ ರೊಡಾಲ್ಫ್ ಸೊರ್ಗೊ ತಿಳಿಸಿದ್ದಾರೆ.

ಜಿಬೋ ಮತ್ತು ಬೌರ್ಜಾಂಗಾ ನಡುವೆ ಈ ಘಟನೆ ನಡೆದಿದೆ. ಬೆಂಗಾವಲು ಪಡೆಯ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಗಾಯಗೊಂಡವರಿಗೆ ಸಹಾಯ ಮಾಡಲು ಕ್ರಮಗಳನ್ನು ತೆಗೆದುಕೊಂಡರು. ಬೆಂಗಾವಲು ಪಡೆಯ ವಾಹನ ಉತ್ತರದಿಂದ ಬುರ್ಕಿನಾ ರಾಜಧಾನಿ ಔಗಡೌಗೌಗೆ ಹೊರಟಿತ್ತು.

ಇದನ್ನೂ ಓದಿ: Afghanistan Blast ಕಾಬೂಲ್‌ನ ರಾಯಭಾರ ಕಚೇರಿ ಹೊರಗೆ  ಸ್ಫೋಟ: ರಷ್ಯಾದ ಇಬ್ಬರು ರಾಜತಾಂತ್ರಿಕರು ಸೇರಿದಂತೆ 20 ಮಂದಿ ಸಾವು 

ಆಗಸ್ಟ್ ಆರಂಭದಲ್ಲಿ ಇದೇ ಪ್ರದೇಶದಲ್ಲಿ 15 ಸೈನಿಕರು ಅವಳಿ ಐಇಡಿ ಸ್ಫೋಟದಲ್ಲಿ ಸಾವನ್ನಪ್ಪಿದ್ದರು. ಜಿಹಾದಿ ಗುಂಪುಗಳು ಇತ್ತೀಚೆಗೆ ಡೋರಿ ಮತ್ತು ಜಿಬೋ ನಗರಗಳಿಗೆ ಹೋಗುವ ರಸ್ತೆಗಳ ಮೇಲೆ ಇದೇ ರೀತಿಯ ದಾಳಿಗಳನ್ನು ನಡೆಸಿದ್ದವು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ