ತನ್ನ ಹಳೆಯ ಕಾರಿನ ಪರವಾನಗಿ ಸಂಖ್ಯೆಯ ಲಾಟರಿ ಟಿಕೆಟ್ ಖರೀದಿಸಿದ ಅಮೆರಿಕನ್ ಮಹಿಳೆ 40 ಲಕ್ಷ ರೂ. ಗಳ ಜಾಕ್​ಪಾಟ್ ಹೊಡೆದಳು!: ವರದಿ

ಮಹಿಳೆ ತನ್ನ ಮೂವರು ಮಕ್ಕಳು ಮತ್ತು ಒಬ್ಬ ಮೊಮ್ಮಗನಿಗೆ ದೊಡ್ಡ ಟ್ರೀಟ್ ಕೊಡಲು ನಿರ್ಧರಿಸಿದ್ದಾರೆ. ಮಾಡಿದ ಸಾಲಗಳನ್ನು ತೀರಿಸಿಕೊಳ್ಳಲು ಮತ್ತು ಮುಂಬರುವ ಚಳಿಗಾಲಕ್ಕಾಗಿ ತನ್ನ ಕಾರನ್ನು ಸಿದ್ಧಪಡಿಸಿಕೊಳ್ಳಲು ಗೆದ್ದಿರುವ ಹಣ ಬಳಸಿಕೊಳ್ಳುವುದಾಗಿ ಆಕೆ ಹೇಳಿದ್ದಾರೆ.

ತನ್ನ ಹಳೆಯ ಕಾರಿನ ಪರವಾನಗಿ ಸಂಖ್ಯೆಯ ಲಾಟರಿ ಟಿಕೆಟ್ ಖರೀದಿಸಿದ ಅಮೆರಿಕನ್ ಮಹಿಳೆ 40 ಲಕ್ಷ ರೂ. ಗಳ ಜಾಕ್​ಪಾಟ್ ಹೊಡೆದಳು!: ವರದಿ
ಅಮೆರಿಕ ಮಹಿಳೆಗೆ ರೂ. 40 ಲಕ್ಷ ಜಾಕ್​ಪಾಟ್!
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 06, 2022 | 8:07 AM

ನಮ್ಮ ಹಳೆ ಕಾರಿನ ನೋಂದಣಿ ಸಂಖ್ಯೆಗಳಿಂದ ಏನಾದರೂ ಪ್ರಯೋಜನವಾದೀತೆ? ನಮಗಂತೂ ಯಾವತ್ತೂ ಆಗಿಲ್ಲ ಆದರೆ ಯುನೈಟೆಡ್ ಸ್ಟೇಟ್ಸ್‌ನ ಮಹಿಳೆಯೊಬ್ಬರು ತಮ್ಮ ಧ್ವಂಸಗೊಂಡ ಕಾರಿನ ಪರವಾನಗಿ ಪ್ಲೇಟ್ ಸಂಖ್ಯೆಯನ್ನು ಬಳಸಿಕೊಂಡು ಲಾಟರಿಯಲ್ಲಿ $ 50,000 (ಸುಮಾರು 40 ಲಕ್ಷ ರೂ.) ಬಹುಮಾನವನ್ನು ಗೆದ್ದಿರುವುದಾಗಿ ಹೇಳಿಕೊಂಡಿದ್ದಾರೆ.

ಯುಪಿಐ ವರದಿಯೊಂದರ ಪ್ರಕಾರ, 43 ವರ್ಷ ವಯಸ್ಸಿನ ಈ ಅದೃಷ್ಟವಂತ ಮಹಿಳೆ ಮೇರಿಲ್ಯಾಂಡ್‌ನ ಬಾಲ್ಟಿಮೋರ್‌ನಲ್ಲಿ ವಾಸವಾಗಿದ್ದಾರೆ. ಬಾಲ್ಟಿಮೋರ್‌ನ ಫ್ರೆಡೆರಿಕ್ ರಸ್ತೆಯಲ್ಲಿರುವ ಫುಡ್ ಸ್ಟಾಪ್ ಮಿನಿ ಮಾರ್ಟ್‌ನಲ್ಲಿ ತಾನು ಪಿಕ್ 5 ಟಿಕೆಟ್ ಖರೀದಿಸಿ ಬಹುಮಾನ ಗೆದ್ದಿರುವುದಾಗಿ ಮಹಿಳೆ ಹೇಳಿಕೊಂಡಿದ್ದಾರೆ.

ಪರವಾನಗಿ ಪ್ಲೇಟ್ ಮೇಲಿದ್ದ ಸಂಖ್ಯೆಗಳ ಟಿಕೆಟ್ ಗಳನ್ನೇ ಅವರು ಲಾಟರಿ ಟಿಕೆಟ್ ಮಾರುವ ಕೌಂಟರ್ ನಲ್ಲಿ  ಖರೀದಿ ಮಾಡಿದ್ದರು ಎಂದು ಮೇರಿಲ್ಯಾಂಡ್ ಲಾಟರಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ದೊಡ್ಡ ಮೊತ್ತವನ್ನು ಗೆದ್ದ ನಂತರ ಮಹಿಳೆಗೆ ತನ್ನ ಅದೃಷ್ಟ ನಂಬಲು ಸಾಧ್ಯವಾಗಿಲ್ಲ. ಹಣ ಗೆದ್ದಿರುವುದನ್ನು ಬಗ್ಗೆ ತಾಯಿಗೆ ತಿಳಿಸುವ ಮೊದಲು ಆಕೆ ತನ್ನ ಟಿಕೆಟ್ ಅನ್ನು ಎರಡೆರಡು ಬಾರಿ ಪರಿಶೀಲಿಸಿದ್ದಾರೆ, ಎಂದು ಯುಪಿಐ ವರದಿ ಮಾಡಿದೆ.

‘ನಾನು ನಿಜ ಅರ್ಥದಲ್ಲಿ ಲಾಟರಿ ಹೊಡೆದಿದ್ದೇನೆ,’ ಅಂತ ಆಕೆ ತನ್ನ ತಾಯಿಗೆ ಹೇಳಿದರಂತೆ. ‘ಐದು ಸಂಖ್ಯೆಗಳ ಜಾಕ್ ಪಾಟ್ ಹಿಟ್ ಮಾಡುವೆ ಅಂತ ಕನಸಿನಲ್ಲೂ ಊಹಿಸಿರಲಿಲ್ಲ,’ ಎಂದು ಆಕೆ ಲಾಟರಿ ಅಧಿಕಾರಿಗಳಿಗೆ ರೋಮಾಂಚಿತರಾಗಿ ಹೇಳಿದ್ದಾರೆ.

ಮಹಿಳೆ ತನ್ನ ಮೂವರು ಮಕ್ಕಳು ಮತ್ತು ಒಬ್ಬ ಮೊಮ್ಮಗನಿಗೆ ದೊಡ್ಡ ಟ್ರೀಟ್ ಕೊಡಲು ನಿರ್ಧರಿಸಿದ್ದಾರೆ. ಮಾಡಿದ ಸಾಲಗಳನ್ನು ತೀರಿಸಿಕೊಳ್ಳಲು ಮತ್ತು ಮುಂಬರುವ ಚಳಿಗಾಲಕ್ಕಾಗಿ ತನ್ನ ಕಾರನ್ನು ಸಿದ್ಧಪಡಿಸಿಕೊಳ್ಳಲು ಗೆದ್ದಿರುವ ಹಣ ಬಳಸಿಕೊಳ್ಳುವುದಾಗಿ ಆಕೆ ಹೇಳಿದ್ದಾರೆ.

ಈ ಲಾಟರಿ ಎಂಬ ಮಾಯೆಯೇ ಹಾಗೆ ಮಾರಾಯ್ರೇ. ಟಿಕೆಟ್ ಕೊಂಡ ನಿರ್ಗತಿಕರು ರಾತ್ರೋರಾತ್ರಿ ಶ್ರೀಮಂತರಾಗಿ ಬಿಡುತ್ತಾರೆ. ಹಾದಿ ಬೀದಿಗಳಲ್ಲಿ ವಾಸವಾಗಿದ್ದವರು ಐಷಾರಾಮಿ ಬಂಗ್ಲೆಗಳಲ್ಲಿ ವಾಸ ಮಾಡಲಾರಂಭಿಸುತ್ತಾರೆ. ಕೇವಲ ಒಂದು ದಿನದಲ್ಲಿ ಅವರ ಬದುಕಿನ ಚಿತ್ರಣವೇ ಬದಲಾಗಿ ಬಿಡುತ್ತದೆ.

ಇತ್ತೀಚಿಗೆ ಅಂದರೆ ಆಗಸ್ಟ್ 17ರಂದು ಅಮೆರಿಕದ ಮಿಚಿಗನ್ ನಿವಾಸಿಯೊಬ್ಬರು ತನ್ನ ಅರಿವಿಗೆ ಬಾರದೆ ಮಿಚಿಗನ್ ಲಾಟರಿಯ 300,000,000 ಡಾಲರ್ ಮೊತ್ತದ ಡೈಮಂಡ್ ರಿಚಸ್ ಸೆಕೆಂಡ್ ಚಾನ್ಸ್ ಗೇಮ್ ಪ್ರವೇಶಿಸಿ ಒಂದು ಲಕ್ಷ ಡಾಲರ್ ಮೊತ್ತದ (ರೂ. 79 ಲಕ್ಷ) ಜಾಕ್ ಪಾಟ್ ಹೊಡೆದಿದ್ದರು.

ಈ ವ್ಯಕ್ತಿ ಮಿಚಿಗನ್ ಲಾಟರಿ ಌಪ್ ಬಳಸಿ ಟಿಕೆಟ್ ಗಳನ್ನು ಸ್ಕ್ಯಾನ್ ಮಾಡುವ ಮೂಲಕ ಅವರಿಗೆ ಗೊತ್ತಿಲ್ಲದಂತೆ ಲಾಟರಿ ಸ್ಪರ್ಧೆಯಲ್ಲಿ ಪ್ರವೇಶ ಪಡೆದಿದ್ದರು. ಗೆದ್ದಿರುವ ಹಣದಿಂದ ತಮ್ಮ ಕುಟುಂಬಕ್ಕೆ ಸಹಾಯ ಮಾಡುವ ಉದ್ದೇಶಹೊಂದಿರುವ ಅವರು ಲಾಟರಿ ಅಧಿಕಾರಿಗಳಿಗೆ ತಮ್ಮ ಗುರುತು ಬಯಲು ಮಾಡದಿರುವಂತೆ ಮನವಿ ಮಾಡಿಕೊಂಡಿದ್ದಾರೆ.