Russian World: ಭಾರತದೊಂದಿಗೆ ಮತ್ತಷ್ಟು ಬಾಂಧವ್ಯ; ಹೊಸ ವಿದೇಶಾಂಗ ನೀತಿ ಘೋಷಿಸಿದ ರಷ್ಯಾ ಅಧ್ಯಕ್ಷ ಪುಟಿನ್

ಉಕ್ರೇನ್​ನೊಂದಿಗೆ ಯುದ್ಧ ಆರಂಭಿಸಿ ಆರು ತಿಂಗಳಾದ ನಂತರ 31 ಪುಟಗಳ ನೂತನ ವಿದೇಶಾಂಗ ನೀತಿಯ ಮಾರ್ಗದರ್ಶಿ ಸೂತ್ರಗಳನ್ನು ರಷ್ಯಾ ಪ್ರಕಟಿಸಿದೆ.

Russian World: ಭಾರತದೊಂದಿಗೆ ಮತ್ತಷ್ಟು ಬಾಂಧವ್ಯ; ಹೊಸ ವಿದೇಶಾಂಗ ನೀತಿ ಘೋಷಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಜಾಗತಿಕ ಸೂಪರ್ ಪವರ್ ಆಗಲು ಹಾತೊರೆಯುತ್ತಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Sep 06, 2022 | 8:29 AM

ಮಾಸ್ಕೊ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ (Vladimir Putin) ಸೋಮವಾರ ನೂತನ ವಿದೇಶಾಂಗ ನೀತಿಯನ್ನು ಅನುಮೋದಿಸಿದರು. ‘ರಷ್ಯಾ ಜಗತ್ತು’ (Russian World) ಹೆಸರಿನ ನೂತನ ವಿದೇಶಾಂಗ ನೀತಿ ಸಿದ್ಧಾಂತವು ವಿದೇಶಗಳಲ್ಲಿರುವ ರಷ್ಯಾದ ಹಿತಾಸಕ್ತಿಗಳು ಹಾಗೂ ಬೆಂಬಲಿಗರಿಗೆ ಅಗತ್ಯ ನೆರವು ಒದಗಿಸುವ ನೀತಿಯನ್ನು ಬೆಂಬಲಿಸುತ್ತದೆ. ಉಕ್ರೇನ್​ನೊಂದಿಗೆ ಯುದ್ಧ ಆರಂಭಿಸಿ ಆರು ತಿಂಗಳಾದ ನಂತರ 31 ಪುಟಗಳ ನೂತನ ವಿದೇಶಾಂಗ ನೀತಿಯ ಮಾರ್ಗದರ್ಶಿ ಸೂತ್ರಗಳನ್ನು ರಷ್ಯಾ ಪ್ರಕಟಿಸಿದೆ. ಈ ದಾಖಲೆಗೆ ‘ಮಾನವೀಯ ನೀತಿ’ (Humanitarian Policy) ಎನ್ನುವ ಹೆಸರು ಕೊಡಲಾಗಿದೆ. ‘ರಷ್ಯಾದ ಜಗತ್ತಿಗೆ ಸಂಬಂಧಿಸಿದ ಎಲ್ಲ ಪರಂಪರೆ, ಆದರ್ಶಗಳನ್ನು ರಕ್ಷಿಸಬೇಕು, ಕಾಪಾಡಬೇಕು ಮತ್ತು ಮುನ್ನಡೆಸಬೇಕು’ ಎಂದು ಈ ನೀತಿಯು ತನ್ನ ಆಶಯವನ್ನು ಮುಂದಿಟ್ಟಿದೆ.

ರಷ್ಯಾ ಪರವಾಗಿ ವಿಶ್ವದಲ್ಲಿ ಸಾಫ್ಟ್​ ಪವರ್ ಹೆಚ್ಚಿಸುವ ಕಾರ್ಯತಂತ್ರದ ಭಾಗವಾಗಿ ಈ ನೀತಿಯನ್ನು ಘೋಷಿಸಲಾಗಿದೆ. ಉಕ್ರೇನ್ ಮೇಲಿನ ಆಕ್ರಮಣ ಹಾಗೂ ರಷ್ಯಾದ ಪೂರ್ವಭಾಗದಲ್ಲಿರುವ ರಷ್ಯಾ ಪರ ಸಂಘಟನೆಗಳಿಗೆ ಸರ್ಕಾರದ ಬೆಂಬಲವನ್ನು ಈ ನೀತಿಯ ಮೂಲಕ ಪುಟಿನ್ ಸಮರ್ಥಿಸಿಕೊಂಡಿದ್ದಾರೆ.

‘ರಷ್ಯಾದಿಂದ ದೂರ ಇರುವ ದೇಶಗಳಲ್ಲಿ ವಾಸವಿರುವ ರಷ್ಯಾ ಪರ ಇರುವ ಜನತೆ ಮತ್ತು ರಷ್ಯಾದ ಹಿತಾಸಕ್ತಿಗೂ ರಷ್ಯಾ ಸರ್ಕಾರವು ಬೆಂಬಲ-ರಕ್ಷಣೆ ಖಾತ್ರಿಪಡಿಸುತ್ತದೆ. ಅವರು ಅನುಸರಿಸುವ, ಬೆಂಬಲಿಸುವ ರಷ್ಯಾದ ಸಂಸ್ಕೃತಿಯನ್ನು ಉಳಿಸಲು ಪ್ರಯತ್ನಿಸುತ್ತದೆ. ವಿಶ್ವದಲ್ಲಿ ಒಂದೇ ಶಕ್ತಿ ಇರುವ ಬದಲು, ಹಲವು ಶಕ್ತಿಕೇಂದ್ರಗಳು ಇರುವುದನ್ನು (Malti Polar World) ರಷ್ಯಾ ಬಯಸುತ್ತದೆ. ಇದಕ್ಕೆ ಪೂರಕವಾಗಿ ವಿದೇಶಗಳಲ್ಲಿರುವ ರಷ್ಯಾದ ಜನರು ಅಲ್ಲಿನ ಸರ್ಕಾರಗಳೊಂದಿಗೆ ಬಾಂಧವ್ಯ ವೃದ್ಧಿಗೆ ನೆರವಾಗುತ್ತಾರೆ’ ಎಂದು ನೀತಿಯು ಆಶಯ ವ್ಯಕ್ತಪಡಿಸಿದೆ.

ಇದನ್ನೂ ಓದಿ: 10 ಮಕ್ಕಳನ್ನು ಹೆತ್ತವರಿಗೆ 10 ಲಕ್ಷ ರೂಬಲ್ ಪುರಸ್ಕಾರ: ರಷ್ಯಾ ದೇಶದ ಜನಸಂಖ್ಯೆ ಹೆಚ್ಚಿಸಲು ವ್ಲಾದಿಮಿರ್ ಪುಟಿನ್ ಪ್ಲಾನ್

1991ರಲ್ಲಿ ಸೋವಿಯತ್ ಒಕ್ಕೂಟವು ಕುಸಿದ ನಂತರ ಹೊಸದಾಗಿ ಸ್ವಾತಂತ್ರ್ಯ ಪಡೆದ ಹಿಂದಿನ ಸದಸ್ಯ ದೇಶಗಳಲ್ಲಿ ಸುಮಾರು 2.5 ಕೋಟಿ ರಷ್ಯನ್ನರು ವಾಸಿಸುತ್ತಿದ್ದಾರೆ. ಇವರ ದುರಂತ ಹಣೆಬರಹವನ್ನು ಬದಲಿಸಬೇಕು ಎಂದು ಪುಟಿನ್ ಹಲವು ವರ್ಷಗಳಿಂದ ಹೇಳುತ್ತಿದ್ದರು. ಇದೀಗ ಅವರ ಚಿಂತನೆಗೆ ದಾಖಲೆಯ ಸ್ವರೂಪ ಸಿಕ್ಕಿದೆ.

ಬಾಲ್ಟಿಕ್ಸ್​ನಿಂದ ಮಧ್ಯ ಏಷ್ಯಾದವರೆಗಿನ ವಿಶಾಲ ಭೂ ಪ್ರದೇಶದಲ್ಲಿ ಸೋವಿಯತ್ ಒಕ್ಕೂಟ ಹರಡಿಕೊಂಡಿತ್ತು. ಇದು ಇಡಿಯಾಗಿ ತನಗೆ ಸೇರಿದ್ದು ಎಂದು ರಷ್ಯಾ ಪ್ರತಿಪಾದಿಸುತ್ತಿದೆ. ಆದರೆ ನೂರಾರು ವರ್ಷಗಳಿಂದ ರಷ್ಯಾದ ಈ ಚಿಂತನೆಗೆ ಪ್ರತಿರೋಧವೂ ವ್ಯಕ್ತವಾಗಿತ್ತು. ಆ ಪ್ರತಿರೋಧದ ಫಲಿತಾಂಶ ಎನ್ನುವಂತೆ 1991ರ ನಂತರ ಹಲವು ಹೊಸ ದೇಶಗಳು ಹುಟ್ಟಿಕೊಂಡವು.

ಸ್ಲಾವ್ ಜನಾಂಗ ವಾಸಿಸುವ ದೇಶಗಳು, ಚೀನಾ ಮತ್ತು ಭಾರತದೊಂದಿಗೆ ರಷ್ಯಾದ ಸಹಕಾರ ಹೆಚ್ಚಾಗಬೇಕು. ಮಧ್ಯಪ್ರಾಚ್ಯ, ಲ್ಯಾಟಿನ್ ಅಮೆರಿಕ ಮತ್ತು ಆಫ್ರಿಕಾದ ದೇಶಗಳೊಂದಿಗೆ ಬಾಂಧವ್ಯ ಸುಧಾರಿಸಬೇಕು ಎಂದು ನೂತನ ನೀತಿಯು ಪ್ರತಿಪಾದಿಸುತ್ತದೆ. 2008ರಲ್ಲಿ ಜಾರ್ಜಿಯಾ ವಿರುದ್ಧದ ಯುದ್ಧದ ನಂತರ ರಷ್ಯಾ ಸ್ವತಂತ್ರ ದೇಶಗಳು ಎಂದು ಗುರುತಿಸಿದ ಅಬ್​ಖಾಜಿಯಾ ಹಅಗೂ ಒಸೆಟ್ಟಿಯಾ ಪ್ರಾಂತ್ಯಗಳೊಂದಿಗೆ ಸಂಬಂಧ ಮತ್ತಷ್ಟು ಹೆಚ್ಚಿಸಿಕೊಲ್ಳಬೇಕು. ಪೂರ್ವ ಉಕ್ರೇನ್​ನ ಎರಡು ಬಂಡುಕೋರ ಪ್ರಾಂತ್ಯಗಳಾದ ಡೊನೆಟ್​ಸ್ಕ್​ ಹಾಗೂ ಲುಹನ್​ಸ್ಕ್​ ಪ್ರಾಂತ್ಯಗಳಲ್ಲಿ ರಷ್ಯಾದ ಪ್ರಭಾವ ಹೆಚ್ಚಾಗಬೇಕಿದೆ ಎಂದು ನೂತನ ವಿದೇಶಾಂಗ ನೀತಿಯು ತಿಳಿಸಿದೆ.

Published On - 8:29 am, Tue, 6 September 22

ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ