ಸ್ಪುಟ್ನಿಕ್ ವಿ ಕೋವಿಡ್ ಲಸಿಕೆ ಅಭಿವೃದ್ಧಿಪಡಿಸಿದ್ದ ರಷ್ಯಾ ವಿಜ್ಞಾನಿಯ ನಿಗೂಢ ಹತ್ಯೆ; ಆರೋಪಿಯ ಬಂಧನ

|

Updated on: Mar 04, 2023 | 6:41 PM

ಶಂಕಿತ ವ್ಯಕ್ತಿಯು ಸುಮಾರು 29 ವರ್ಷ ವಯಸ್ಸಿನವನಾಗಿದ್ದು, ಬೆಲ್ಟ್​​ನಿಂದ ವಿಜ್ಞಾನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಇಬ್ಬರ ನಡುವೆ ಸಂಘರ್ಷ ಇದ್ದಿರಬೇಕು ಎಂದು ಶಂಕಿಸಲಾಗಿದೆ.

ಸ್ಪುಟ್ನಿಕ್ ವಿ ಕೋವಿಡ್ ಲಸಿಕೆ ಅಭಿವೃದ್ಧಿಪಡಿಸಿದ್ದ ರಷ್ಯಾ ವಿಜ್ಞಾನಿಯ ನಿಗೂಢ ಹತ್ಯೆ; ಆರೋಪಿಯ ಬಂಧನ
ಆಂಡ್ರೆ ಬೊಟಿಕೋವ್
Image Credit source: Twitter
Follow us on

ಮಾಸ್ಕೊ: ರಷ್ಯಾದ ಕೋವಿಡ್ (Covid-19) ಲಸಿಕೆ ಸ್ಪುಟ್ನಿಕ್ ವಿ (Sputnik V) ಅಭಿವೃದ್ಧಿಪಡಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ ವಿಜ್ಞಾನಿ ಆಂಡ್ರೆ ಬೊಟಿಕೋವ್ ಅವರನ್ನು (Andrey Botikov) ಅವರು ವಾಸಿಸುತ್ತಿದ್ದ ಅಪಾರ್ಟ್​​ಮೆಂಟ್​​ನಲ್ಲಿ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಬೆಲ್ಟ್​ನಿಂದ ಅವರ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎನ್ನಲಾಗಿದ್ದು, ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ರಷ್ಯಾ ಮಾಧ್ಯಮಗಳು ವರದಿ ಮಾಡಿವೆ. 47 ವರ್ಷ ವಯಸ್ಸಿನ ಬೊಟಿಕೋವ್ ಅವರು ಗಾಮೇಲೆಯಾ ನ್ಯಾಷನಲ್ ರಿಸರ್ಚ್ ಸೆಂಟರ್ ಫಾರ್ ಎಕಾಲಜಿ ಆ್ಯಂಡ್ ಮ್ಯಾಥಮೆಟಿಕ್ಸ್​​ನ ಹಿರಿಯ ಸಂಶೋಧಕರಾಗಿದ್ದರು. ಅವರು ಅಪಾರ್ಟ್​​ಮೆಂಟ್​​ನಲ್ಲಿ ಶವವಾಗಿ ಗುರುವಾರ ಪತ್ತೆಯಾಗಿದ್ದರು.

ಕೋವಿಡ್ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಬಹುಮುಖ್ಯ ಪಾತ್ರವಹಿಸಿದ್ದಕ್ಕಾಗಿ ಆಂಡ್ರೆ ಬೊಟಿಕೋವ್ ಅವರನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ 2021ರಲ್ಲಿ ‘ಆರ್ಡರ್ ಆಫ್​ ಮೆರಿಟ್ ಫಾರ್​ ದಿ ಫಾದರ್​​​ಲ್ಯಾಂಡ್’ ಗೌರವ ನೀಡಿ ಗೌರವಿಸಿದ್ದರು. 2020ರಲ್ಲಿ ರಷ್ಯಾದ 18 ವಿಜ್ಞಾನಿಗಳ ತಂಡ ಸ್ಪುಟ್ನಿಕ್ ವಿ ಲಸಿಕೆ ಅಭಿವೃದ್ಧಿಪಡಿಸಿತ್ತು. ಈ ತಂಡದಲ್ಲಿ ಬೊಟಿಕೋವ್ ಪ್ರಮುಖ ಪಾತ್ರ ವಹಿಸಿದ್ದರು.

ಬೊಟಿಕೋವ್ ಅವರ ಸಾವನ್ನು ಕೊಲೆ ಎಂದೇ ಪರಿಗಣಿಸಲಾಗಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ರಷ್ಯಾ ತಿಳಿಸಿದೆ.

ಇದನ್ನೂ ಓದಿ: ಮಂಗಳೂರು ಹೊರವಲಯದಲ್ಲಿ ದುಷ್ಕರ್ಮಿಗಳಿಂದ ವ್ಯಕ್ತಿಗೆ ಚಾಕು ಇರಿತ

ಶಂಕಿತ ವ್ಯಕ್ತಿಯು ಸುಮಾರು 29 ವರ್ಷ ವಯಸ್ಸಿನವನಾಗಿದ್ದು, ಬೆಲ್ಟ್​​ನಿಂದ ವಿಜ್ಞಾನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಇಬ್ಬರ ನಡುವೆ ಸಂಘರ್ಷ ಇದ್ದಿರಬೇಕು ಎಂದು ಶಂಕಿಸಲಾಗಿದೆ. ಮಾತಿಗೆ ಮಾತು ಬೆಳೆದ ಸಂದರ್ಭ ಯುವಕ ಹತ್ಯೆ ಮಾಡಿರಬಹುದು ಎಂದು ತನಿಖಾ ಸಂಸ್ಥೆಗಳ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಬಂಧಿತ ಯುವಕ ತಪ್ಪೊಪ್ಪಿಕೊಂಡಿದ್ದು, ದೋಷಾರೋಪ ಹೊರಿಸಲಾಗಿದೆ. ಆರೋಪಿಯು ಅಪರಾಧ ಹಿನ್ನೆಲೆಯುಳ್ಳವನಾಗಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:38 pm, Sat, 4 March 23