China Loan: ಚೀನೀ ಬ್ಯಾಂಕ್​ನಿಂದ ಪಾಕಿಸ್ತಾನಕ್ಕೆ ಕೊನೆಗೂ ಸಿಕ್ತು ಸಾಲ; ಆಪತ್ಕಾಲಕ್ಕೆ ಬಂತು ನೆರವು

Pakistan Gets USD 1.3 Billion Rollover From Chinese Bank: ಐಸಿಬಿಸಿ ಬ್ಯಾಂಕ್​ಗೆ ಪಾಕಿಸ್ತಾನ ಇತ್ತೀಚೆಗೆ 1.3 ಬಿಲಿಯನ್ ಡಾಲರ್ ಮೊತ್ತದಷ್ಟು ಸಾಲವನ್ನು ಮರುಪಾವತಿ ಮಾಡಿತ್ತು. ಈಗ ಬ್ಯಾಂಕ್ ಮತ್ತೆ ಆ ಸಾಲವನ್ನು ನೀಡುತ್ತಿದೆ. ಪಾಕ್ ಸಚಿವರ ಪ್ರಕಾರ ಈ ಸಾಲ ಮರುನೀಡಿಕೆ ಯೋಜನೆಯಲ್ಲಿ ಐಸಿಬಿಸಿ ಮೂರು ಕಂತುಗಳಲ್ಲಿ ಸಾಲವನ್ನು ಪಾಕಿಸ್ತಾನಕ್ಕೆ ಒದಗಿಸಲಿದೆ.

China Loan: ಚೀನೀ ಬ್ಯಾಂಕ್​ನಿಂದ ಪಾಕಿಸ್ತಾನಕ್ಕೆ ಕೊನೆಗೂ ಸಿಕ್ತು ಸಾಲ; ಆಪತ್ಕಾಲಕ್ಕೆ ಬಂತು ನೆರವು
ಸಾಂದರ್ಭಿಕ ಚಿತ್ರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 05, 2023 | 1:33 PM

ಇಸ್ಲಾಮಾಬಾದ್: ಹಲವು ಆರ್ಥಿಕ ಸಮಸ್ಯೆಗಳಿಂದ ಕಂಗೆಟ್ಟಿರುವ ಪಾಕಿಸ್ತಾನ ಒಂದು ರೀತಿಯಲ್ಲಿ ಮುಳುಗುತ್ತಿರುವ ಹಡಗಿನಂತಹ ಸ್ಥಿತಿಯಲ್ಲಿದೆ. ಐಎಂಎಫ್ ಬಳಿ ಸಾಲಕ್ಕಾಗಿ ಎಡತಾಕುತ್ತಿರುವ ಪಾಕಿಸ್ತಾನಕ್ಕೆ ಈಗ ಚೀನಾದಿಂದ ನೆರವಿನ ಹಸ್ತ ಸಿಕ್ಕಿದೆ. ಚೀನಾದ ಐಸಿಬಿಸಿ ಬ್ಯಾಂಕ್ (ICBC- Industrial and Commercial Bank of China) ಪಾಕಿಸ್ತಾನಕ್ಕೆ 1.3 ಬಿಲಿಯನ್ ಡಾಲರ್ ಮೊತ್ತದಷ್ಟು ಸಾಲ ಮರುನೀಡಿಕೆ ಯೋಜನೆಗೆ (Rollover Loan Scheme) ಅನುಮೋದನೆ ನೀಡಿದೆ. ಪಾಕಿಸ್ತಾನದ ಹಣಕಾಸು ಸಚಿವ ಇಶಾಕ್ ದರ್ (Pakistan Finance Minister Ishaq Dar) ನಿನ್ನೆ ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

ಐಸಿಬಿಸಿ ಬ್ಯಾಂಕ್​ಗೆ ಪಾಕಿಸ್ತಾನ ಇತ್ತೀಚೆಗೆ 1.3 ಬಿಲಿಯನ್ ಡಾಲರ್ ಮೊತ್ತದಷ್ಟು ಸಾಲವನ್ನು ಮರುಪಾವತಿ ಮಾಡಿತ್ತು. ಈಗ ಬ್ಯಾಂಕ್ ಮತ್ತೆ ಆ ಸಾಲವನ್ನು ನೀಡುತ್ತಿದೆ. ಪಾಕ್ ಸಚಿವರ ಪ್ರಕಾರ ಈ ಸಾಲ ಮರುನೀಡಿಕೆ ಯೋಜನೆಯಲ್ಲಿ ಐಸಿಬಿಸಿ ಮೂರು ಕಂತುಗಳಲ್ಲಿ ಸಾಲವನ್ನು ಪಾಕಿಸ್ತಾನಕ್ಕೆ ಒದಗಿಸಲಿದೆ. ಈಗಾಗಲೇ 500 ಮಿಲಿಯನ್ ಡಾಲರ್ ಮೊತ್ತದ ಮೊದಲ ಕಂತಿನ ಹಣವು ಐಸಿಬಿಸಿಯಿಂದ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನಕ್ಕೆ ರವಾನೆಯಾಗಿದೆಯಂತೆ. ಇಲ್ಲಿ 1.3 ಬಿಲಿಯನ್ ಡಾಲರ್ ಎಂದರೆ ಭಾರತೀಯ ರುಪಾಯಿ ಲೆಕ್ಕದಲ್ಲಿ 10 ಸಾವಿರ ಕೋಟಿ ರೂ. ಇನ್ನು, ಪಾಕಿಸ್ತಾನದ ರೂಪಾಯಿ ಲೆಕ್ಕದಲ್ಲಿ ಸುಮಾರು 36 ಸಾವಿರ ಕೋಟಿ ಆಗುತ್ತದೆ.

ಚೀನೀ ಬ್ಯಾಂಕ್​ನಿಂದ ಸಿಕ್ಕಿರುವ ಈ ಸಾಲದ ಹಣದಿಂದ ಪಾಕಿಸ್ತಾನದ ಫಾರೆಕ್ಸ್ ರಿಸರ್ವ್ಸ್ ಹೆಚ್ಚಳಕ್ಕೆ ಅನುಕೂಲವಾಗುತ್ತದೆ ಎಂದೂ ಇಶಾಕ್ ದರ್ ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ವಿದೇಶೀ ವಿನಿಮಯ ಮೀಸಲು ನಿಧಿ ಫೆಬ್ರುವರಿ 24ಕ್ಕೆ 3.8 ಬಿಲಿಯನ್ ಡಾಲರ್ ಮೌಲ್ಯದಷ್ಟಿದೆ. ಇಷ್ಟು ಹಣದಲ್ಲಿ ಪಾಕಿಸ್ತಾನ ಒಂದು ತಿಂಗಳಿಗಿಂತ ಹೆಚ್ಚು ಕಾಲ ಆಮದು ಮಾಡಿಕೊಳ್ಳಲು ಆಗಲ್ಲ. ಇದರಲ್ಲಿ ಕರೆನ್ಸಿ ಸಂಗ್ರಹದ ಮೊತ್ತ 9 ಬಿಲಿಯನ್ ಡಾಲರ್ ಮಾತ್ರ ಇರುವುದು.

ಇದನ್ನೂ ಓದಿForex Decrease- ಭಾರತದ ಫಾರೆಕ್ಸ್ ಹಣ ಮತ್ತೆ ಕುಸಿತ; ಈಗೆಷ್ಟಿದೆ ವಿದೇಶಿ ವಿನಿಮಯ ಮೀಸಲು ನಿಧಿ?

ಹಿಂದಿನ ತಿಂಗಳು ಪಾಕಿಸ್ತಾನದ ಫಾರೆಕ್ಸ್ ರಿಸರ್ವ್ಸ್ ಇನ್ನೂ ಕಳಪೆಯಾಗಿತ್ತು. ಕೇವಲ 2.8 ಬಿಲಿಯನ್ ಡಾಲರ್ ಮೊತ್ತ ಮಾತ್ರ ಫಾರೆಕ್ಸ್ ಮೀಸಲು ನಿಧಿಯಲ್ಲಿದ್ದದ್ದು. ಒಂದು ತಿಂಗಳಲ್ಲಿ ಫಾರೆಕ್ಸ್ ನಿಧಿ ತುಸು ಭರ್ತಿಯಾಗಿದೆ. ಸಚಿವ ಇಸಾಕ್ ದರ್ ಪ್ರಕಾರ ಸರ್ಕಾರ ಈ ಹಣಕಾಸು ವರ್ಷದಲ್ಲಿ 6.5 ಬಿಲಿಯನ್ ಡಾಲರ್ ಮೊತ್ತದಷ್ಟು ವಿದೇಶೀ ಸಾಲಗಳನ್ನು ಮರುಪಾವತಿ ಮಾಡಿದೆಯಂತೆ.

ಪಾಕಿಸ್ತಾನದ ಬಾಧೆಗಳು

ಪಾಕಿಸ್ತಾನ ಸದ್ಯ ಬಹುಸ್ತರದಲ್ಲಿ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದೆ. ದುರ್ಬಲ ಫಾರೆಕ್ಸ್ ಮೀಸಲು ನಿಧಿ, ತೀರಾ ಹೆಚ್ಚಿರುವ ಹಣದುಬ್ಬರ, ಹೆಚ್ಚುತ್ತರುವ ಕರೆಂಟ್ ಅಕೌಂಟ್ ಅಂತರ, ಕುಸಿಯುತ್ತಿರುವ ಕರೆನ್ಸಿ, ಈ ಅಂಶಗಳು ಪಾಕಿಸ್ತಾನದ ಆರ್ಥಿಕತೆಯನ್ನು ದಿವಾಳಿಯಂಚಿಗೆ ನೂಕಿವೆ.

ಪಾಕಿಸ್ತಾನ ಸರ್ಕಾರದಿಂದ ಬಿಡುಗಡೆಯಾದ ಮಾಹಿತಿ ಪ್ರಕಾರ ಫೆಬ್ರುವರಿ ತಿಂಗಳ ವಾರ್ಷಿಕ ಹಣದುಬ್ಬರ ಶೇ. 31.6ಕ್ಕೆ ಹೋಗಿದೆ. ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆಗಳು ತೀವ್ರಗತಿಯಲ್ಲಿ ಏರಿಕೆ ಆಗಿರುವ ಫಲಶ್ರುತಿ ಇದು. ಕಳೆದ 8 ತಿಂಗಳಿಂದಲೂ ಪಾಕಿಸ್ತಾನದಲ್ಲಿ ಹಣದುಬ್ಬರ ಶೇ. 20ಕ್ಕಿಂತಲೂ ಹೆಚ್ಚಿನ ಮಟ್ಟದಲ್ಲೇ ಇದೆ.

ಇನ್ನಷ್ಟು ವ್ಯವಹಾರಗಳ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:33 pm, Sun, 5 March 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್